Select Your Language

Notifications

webdunia
webdunia
webdunia
webdunia

ಸೋತು ಸುಣ್ಣವಾಗಿರುವ ಆರ್ ಸಿಬಿ ತಂಡಕ್ಕೆ ಈ ಸ್ಟಾರ್ ಆಟಗಾರ ಸೇರ್ಪಡೆ

ಸೋತು ಸುಣ್ಣವಾಗಿರುವ ಆರ್ ಸಿಬಿ ತಂಡಕ್ಕೆ ಈ ಸ್ಟಾರ್ ಆಟಗಾರ ಸೇರ್ಪಡೆ
ಬೆಂಗಳೂರು , ಶನಿವಾರ, 13 ಏಪ್ರಿಲ್ 2019 (09:39 IST)
ಬೆಂಗಳೂರು: ಈ ಐಪಿಎಲ್ ನಲ್ಲಿ ಒಂದೇ ಒಂದು ಗೆಲುವು ಕಾಣದೇ ಸೋತು ಸುಣ್ಣವಾಗಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಹೊಸ ಚೈತನ್ಯ ನೀಡಲು ಸ್ಟಾರ್ ಆಟಗಾರನೊಬ್ಬ ಸೇರ್ಪಡೆಯಾಗುವ ಸಾಧ‍್ಯತೆಯಿದೆ.


ಆರ್ ಸಿಬಿ ತಂಡಕ್ಕೆ ದ.ಆಫ್ರಿಕಾದ ವೇಗಿ ಡೇಲ್ ಸ್ಟೇನ್ ಆಗಮಿಸಲಿದ್ದಾರೆ ಎಂಬ ಸುದ್ದಿ ಬಂದಿದೆ. ಈಗಾಗಲೇ ಆಸ್ಟ್ರೇಲಿಯಾ ವೇಗಿ ನಥನ್ ಕಲ್ಟರ್ ನೀಲ್ ಗಾಯಗೊಂಡು ಕೂಟದಿಂದ ಹೊರಬಿದ್ದಿದ್ದಾರೆ. ಅವರ ಸ್ಥಾನಕ್ಕೆ ಸ್ಟೇನ್ ಬರಲಿದ್ದಾರೆ ಎಂಬ ಸುದ್ದಿ ಬಂದಿದೆ.

ಡೇಲ್ ಸ್ಟೇನ್ ತಮ್ಮ ಸಾಮಾಜಿಕ ಜಾಲತಾಣ ಪುಟದಲ್ಲಿ ಭಾರತದ ವೀಸಾ ಫೋಟೋ ಹಾಕಿಕೊಂಡಿರುವುದು ಈ ಅನುಮಾನಗಳಿಗೆ ಪುಷ್ಠಿ ನೀಡಿದೆ. ಆದರೆ ಆರ್ ಸಿಬಿ ಅಧಿಕೃತವಾಗಿ ಇನ್ನೂ ಈ ಬಗ್ಗೆ ಪ್ರಕಟಣೆ ನೀಡಿಲ್ಲ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

Share this Story:

Follow Webdunia kannada

ಮುಂದಿನ ಸುದ್ದಿ

ಐಪಿಎಲ್: ಶತಕ ಕೈಗೆಟುಕದಿದ್ದರೂ ಶಿಖರ್ ಧವನ್ ತಂಡ ಗೆಲ್ಲಿಸಿದರು