Select Your Language

Notifications

webdunia
webdunia
webdunia
webdunia

ಗುಜರಾತ್ ಲಯನ್ಸ್ ವಿರುದ್ದ ಆಡಿದ ಜೂಜು ಫಲಪ್ರದವಾಯಿತು: ಡಿ ವಿಲಿಯರ್ಸ್

AB devilleirs
ನವದೆಹಲಿ: , ಶುಕ್ರವಾರ, 27 ಮೇ 2016 (13:58 IST)
ಐಪಿಎಲ್ ಕ್ವಾಲಿಫೈಯರ್ ಒಂದರಲ್ಲಿ ಗುಜರಾತ್ ಲಯನ್ಸ್ ವಿರುದ್ಧ ತಾವು ಆಡಿದ ಜೂಜು ಫಲಪ್ರದವಾಯಿತು ಎಂದು ರಾಯಲ್ ಚಾಲೆಂಜರ್ಸ್ ಬ್ಯಾಟ್ಸ್‌ಮನ್ ಎಬಿ ಡಿವಿಲಿಯರ್ಸ್ ಮಾರ್ಮಿಕವಾಗಿ ಹೇಳಿದ್ದಾರೆ. ತಾವು ಬ್ಯಾಟಿಂಗ್ ಆಡುವಾಗ ಕೊಹ್ಲಿ ಸಂದೇಶವನ್ನು ಕಳಿಸಿ, ಅರೆಕಾಲಿಕ ವೇಗಿ ಡ್ವೇನ್ ಸ್ಮಿತ್ ಬೌಲಿಂಗ್‌‌‌ ಬೆನ್ನಟ್ಟುವಂತೆ ಸೂಚಿಸಿದ್ದು, ಈ ಜೂಜು ಫಲ ನೀಡಿತು ಎಂದು ಡಿ ವಿಲಿಯರ್ಸ್ ಹೇಳಿದರು. 
 
ಒಂದು ಹಂತದಲ್ಲಿ ನಾವು ರಿಸ್ಕ್ ತೆಗೆದುಕೊಳ್ಳುವ ಅಗತ್ಯವಿರುತ್ತದೆ. ಮಳೆಯ ಅಪಾಯವನ್ನು ಮನಗಂಡ ವಿರಾಟ್ ಕೊಹ್ಲಿ 15ನೇ ಓವರಿನಲ್ಲಿ ಡ್ವೇನ್ ಸ್ಮಿತ್ ಬೌಲಿಂಗ್‌ನಲ್ಲಿ ಅಬ್ಬರದ ಬ್ಯಾಟಿಂಗ್ ಆಡುವಂತೆ ಸೂಚಿಸಿದ್ದರು. ಆ ಓವರಿನಲ್ಲಿ 14 ರನ್‌ಗಳಿಂದ ಆಟ ನಮ್ಮ ಕಡೆಗೆ ತಿರುಗಿತು ಎಂದು ಎಬಿ ಹೇಳಿದರು. 
 
ಮೇಲಿನ ಕ್ರಮಾಂಕದ ಆಘಾತಕಾರಿ ಕುಸಿತದ ನಡುವೆಯೂ, ನಾನು ಆಟದ ದಿಕ್ಕನ್ನು ಬದಲಿಸುವ ವಿಶ್ವಾಸದಲ್ಲಿದ್ದೆ. ಚೆಂಡು ತನಗೆ ಚೆನ್ನಾಗಿ ಕಾಣುತ್ತಿದ್ದು, ಅದೊಂದು ಒಳ್ಳೆಯ ಲಕ್ಷಣವಾಗಿತ್ತು ಎಂದು ಡಿವಿಲಿಯರ್ಸ್ ಹೇಳಿದರು. 
 
ಆರ್‌ಸಿಬಿ 68 ರನ್ನಿಗೆ 6 ವಿಕೆಟ್ ಕಳೆದುಕೊಂಡ ಬಳಿಕ, ಎಬಿ ಅಜೇಯ 79 ರನ್ ಬಾರಿಸುವ ಮೂಲಕ ಇಕ್ಬಾಲ್ ಅಬ್ದುಲ್ಲಾ ಜತೆ 91 ರನ್ ಜತೆಯಾಟದೊಂದಿಗೆ ಆರ್‌ಸಿಬಿಗೆ ಗೆಲುವನ್ನು ದಕ್ಕಿಸಿದ್ದರು.

ವೆಬ್‌ದುನಿಯಾ ಮೊಬೈಲ್ ಆಪ್ (ಡೌನ್‌ಲೋಡ್) ಮಾಡಿಕೊಂಡು ತಾಜಾ ಸುದ್ದಿಗಳನ್ನು ಪಡೆಯಿರಿ.

Share this Story:

Follow Webdunia kannada

ಮುಂದಿನ ಸುದ್ದಿ

ವಿರಾಟ್ ಕೊಹ್ಲಿ ಬ್ಯಾಟಿಂಗ್ ಶೃಂಗ ಇನ್ನೂ ಮುಟ್ಟಬೇಕಿದೆ: ರವಿ ಶಾಸ್ತ್ರಿ