Select Your Language

Notifications

webdunia
webdunia
webdunia
webdunia

ವಿರಾಟ್ ಕೊಹ್ಲಿ ಬ್ಯಾಟಿಂಗ್ ಶೃಂಗ ಇನ್ನೂ ಮುಟ್ಟಬೇಕಿದೆ: ರವಿ ಶಾಸ್ತ್ರಿ

ವಿರಾಟ್ ಕೊಹ್ಲಿ ಬ್ಯಾಟಿಂಗ್ ಶೃಂಗ ಇನ್ನೂ ಮುಟ್ಟಬೇಕಿದೆ: ರವಿ ಶಾಸ್ತ್ರಿ
ನವದೆಹಲಿ , ಶುಕ್ರವಾರ, 27 ಮೇ 2016 (13:10 IST)
ಭಾರತದ ಕ್ರಿಕೆಟ್ ತಂಡದ ಡೈರಕ್ಟರ್ ಹುದ್ದೆಯಲ್ಲಿ ತಮ್ಮ 18 ತಿಂಗಳ ಅಧಿಕಾರಾವಧಿ ತಮ್ಮ ಜೀವನದ ಅತ್ಯಂತ ಇಷ್ಟಪಟ್ಟ, ಸ್ಮರಣೀಯ ಹಂತ ಎಂದು ರವಿ ಶಾಸ್ತ್ರಿ ಹೇಳಿದ್ದು, ತಾವು ಗುತ್ತಿಗೆ ನವೀಕರಣಕ್ಕೆ ಅರ್ಜಿ ಸಲ್ಲಿಸುತ್ತೀರಾ ಎಂಬ ವಿಷಯ ಕುರಿತು ಯಾವುದೇ ಕಾಮೆಂಟ್ ಮಾಡಲು ಬಯಸಲಿಲ್ಲ.
 
ಭಾರತದ ಕ್ರಿಕೆಟ್ ಜತೆ ಒಡನಾಟದಲ್ಲಿ ಟೀಂ ಡೈರೆಕ್ಟರಾಗಿ ಈ 18 ತಿಂಗಳು ಅತ್ಯುತ್ತಮ ಎನ್ನುವುದರಲ್ಲಿ ಅನುಮಾನವೇ ಇಲ್ಲ. ಈ ಕಾಲಘಟ್ಟದಲ್ಲಿ ತಂಡದ ಸಾಧನೆಯ ಕಡೆ ಹಿನ್ನೋಟ ಹರಿಸಿದಾಗ ಇದು ನನ್ನ ಜೀವನದ ಸ್ಮರಣೀಯ ಹಂತವಾಗಿದೆ. ಇದನ್ನು ವಿಶೇಷವಾಗಿಸಿದ ಆಟಗಾರರಿಗೆ ಈ ಹಿರಿಮೆ ಸಲ್ಲುತ್ತದೆ ಎಂದು ರವಿ ಶಾಸ್ತ್ರಿ ಹೇಳಿದರು. 
 
ಬಿಸಿಸಿಐ ಜಾಹೀರಾತು ನೀಡಿದ ಮುಖ್ಯ ಕೋಚ್ ಹುದ್ದೆಗೆ ಅರ್ಜಿ ಸಲ್ಲಿಸುತ್ತೀರಾ ಎಂಬ ಪ್ರಶ್ನೆಗೆ, ತಾನು ಐಪಿಎಲ್ ಫೈನಲ್ ಮಾನ್ಯತೆಗೆ ಮಾತ್ರ ಅರ್ಜಿ ಸಲ್ಲಿಸುತ್ತೇನೆ ಎಂದು ಹಾಸ್ಯಾಸ್ಪದ ಧಾಟಿಯಲ್ಲಿ ಹೇಳಿದರು.
 
 ನಾನು ಆಟಗಾರನಾಗಿ ಯಶಸ್ವಿಯಾಗಿದ್ದೆ.  1985ರ ವಿಶ್ವಚಾಂಪಿಯನ್ ಷಿಪ್ ಪಂದ್ಯವನ್ನು, 1983ರ ವಿಶ್ವಕಪ್ ಅನ್ನು ನಾನು ಪ್ರೀತಿಯಿಂದ ಮೆಲಕು ಹಾಕುತ್ತೇನೆ. ಆದರೆ ಟೀಂ ಡೈರೆಕ್ಟರ್ ಹಂತವು ತುಂಬಾ ವಿಶೇಷವಾಗಿದೆ. ಈ ಹಂತದಲ್ಲಿ ನನ್ನ ಕೆಲವು ಸಾಧನೆಗಳನ್ನು ನೋಡಿ. ನಾವು ಏಕದಿನ ಪಂದ್ಯಗಳಲ್ಲಿ ಇಂಗ್ಲೆಂಡ್ ವಿರುದ್ಧ ಗೆದ್ದೆವು. ಮೊದಲ ಬಾರಿಗೆ ಟಿ 20ಯಲ್ಲಿ ಆಸ್ಟ್ರೇಲಿಯಾವನ್ನು ವಾಷ್ ಔಟ್ ಮಾಡಿದೆವು. 22 ವರ್ಷಗಳ ಬಳಿಕ ಶ್ರೀಲಂಕಾದಲ್ಲಿ ಟೆಸ್ಟ್ ಸರಣಿ ಗೆದ್ದೆವು ಎಂದು ಶಾಸ್ತ್ರಿ ಮೆಲಕು ಹಾಕಿದರು. 
 
 ಇದೇ ಸಂದರ್ಭದಲ್ಲಿ ಕೊಹ್ಲಿಯ ಸಾಧನೆಯನ್ನು ಶಾಸ್ತ್ರಿ ಬಿಚ್ಚಿಟ್ಟರು. ಆಸ್ಟ್ರೇಲಿಯಾದಲ್ಲಿ ನಾಲ್ಕು ಟೆಸ್ಟ್‌ ಪಂದ್ಯಗಳಲ್ಲಿ ನಾಲ್ಕು ಶತಕಗಳು. ಅವರು ಐಪಿಎಲ್‌ನಲ್ಲಿ ಮನೋಜ್ಞ ಆಟವಾಡಿದ್ದಾರೆ. ಐಪಿಎಲ್‌ನಲ್ಲಿ ನಾಲ್ಕು ಶತಕಗಳು ಮತ್ತು 1000 ರನ್‌ಗಳು ಅದ್ಭುತ, ಆದರೆ ನಾಲ್ಕು ಟೆಸ್ಟ್ ಶತಕಗಳನ್ನು ಸರಿಗಟ್ಟಲು ಯಾವುದಕ್ಕೂ ಸಾಧ್ಯವಿಲ್ಲ ಎಂದು ಶಾಸ್ತ್ರಿ ಹೇಳಿದರು. 
 ಕೊಹ್ಲಿ ಇನ್ನೂ ಉಚ್ಛ್ರಾಯ ಸ್ಥಿತಿಯನ್ನು ಮುಟ್ಟಬೇಕಾಗಿದೆ. ಅಂತಾರಾಷ್ಟ್ರೀಯ ಬ್ಯಾಟ್ಸ್‌ಮನ್ ಉಚ್ಛ್ರಾಯ ಕಾಲ 28ರಿಂದ 32 ವರ್ಷಗಳ ನಡುವೆ. ಆ ಸಂದರ್ಭದಲ್ಲಿ ಅವರು ಮತ್ತಷ್ಟು ಸಾಧನೆ ಮಾಡುತ್ತಾರೆ ಎಂದು ರವಿ ಶಾಸ್ತ್ರಿ ವಿಶ್ವಾಸ ವ್ಯಕ್ತಪಡಿಸಿದರು. 

ವೆಬ್‌ದುನಿಯಾ ಮೊಬೈಲ್ ಆಪ್ (ಡೌನ್‌ಲೋಡ್) ಮಾಡಿಕೊಂಡು ತಾಜಾ ಸುದ್ದಿಗಳನ್ನು ಪಡೆಯಿರಿ.
 
 

Share this Story:

Follow Webdunia kannada

ಮುಂದಿನ ಸುದ್ದಿ

ಭಾರತದ ಕೋಚ್ ಹುದ್ದೆಗೆ ದ್ರಾವಿಡ್ ಪರ ಬ್ಯಾಟ್ ಬೀಸಿದ ಶೇನ್ ವಾಟ್ಸನ್