Select Your Language

Notifications

webdunia
webdunia
webdunia
webdunia

ಭಾರತದ ಕೋಚ್ ಹುದ್ದೆಗೆ ದ್ರಾವಿಡ್ ಪರ ಬ್ಯಾಟ್ ಬೀಸಿದ ಶೇನ್ ವಾಟ್ಸನ್

rahul dravis
ನವದೆಹಲಿ: , ಶುಕ್ರವಾರ, 27 ಮೇ 2016 (11:22 IST)
ರಾಹುಲ್ ದ್ರಾವಿಡ್ ಅವರು ಭಾರತದ ಕೋಚ್ ಹುದ್ದೆಯಲ್ಲಿ ಉತ್ತಮ ಕೆಲಸ ನಿರ್ವಹಿಸುತ್ತಾರೆ ಎಂದು ಶೇನ್ ವಾಟ್ಸನ್ ಅವರು ಬ್ಯಾಟಿಂಗ್ ಲೆಜೆಂಡ್ ರಾಹುಲ್ ದ್ರಾವಿಡ್ ಪರ ಬ್ಯಾಟ್ ಬೀಸಿದ್ದಾರೆ. ರಾಜಸ್ಥಾನ ರಾಯಲ್ಸ್‌ನಲ್ಲಿ ಅವರು ನಾಯಕರಾಗಿದ್ದಾಗ ಮತ್ತು ಮಾರ್ಗದರ್ಶಕರಾಗಿದ್ದಾಗ ರಾಜಸ್ಥಾನ ರಾಯಲ್ಸ್‌ನಲ್ಲಿ ತಾವು ಆಡುತ್ತಿದ್ದು ಅವರ ಕ್ರಿಕೆಟ್ ಸಾಮರ್ಥ್ಯ ಕುರಿತು ಅರಿತುಕೊಂಡೆ ಎಂದು ವಾಟ್ಸನ್ ಹೇಳಿದರು. 
 
 ಅವರಿಗೆ ಭಾರತದ ಕೋಚ್ ಹುದ್ದೆಗೆ ಅವಕಾಶ ಸಿಕ್ಕಿದರೆ ವಿಸ್ಮಯಕಾರಿ ಪರಿವರ್ತನೆ ತರುವುದರಲ್ಲಿ ಅನುಮಾನವಿಲ್ಲ . ಯುವ ಆಟಗಾರರಿಗೆ ವರ್ಗಾಯಿಸಲು ಅವರು ಅಪಾರ ಅನುಭವದ ಗಣಿಯಾಗಿದ್ದಾರೆಂದು ವಾಟ್ಸನ್ ಹೇಳಿದರು.
 
 ಜಿಂಬಾಬ್ವೆಯ ಡಂಕನ್ ಫ್ಲೆಚ್ಚರ್ ನಿರ್ಗಮನದ ನಂತರ ಕೋಚ್ ಹುದ್ದೆ ಒಂದು ವರ್ಷಕ್ಕಿಂತ ಹೆಚ್ಚು ಕಾಲ ಖಾಲಿಯಾಗಿ ಉಳಿದಿದೆ. ಐಪಿಎಲ್ ಬಳಿಕ ರಾಷ್ಟ್ರೀಯ ತಂಡ ದಟ್ಟಣೆಯ ವೇಳಾಪಟ್ಟಿ ಹೊಂದಿದ್ದು, ವೆಸ್ಟ್ ಇಂಡೀಸ್, ನ್ಯೂಜಿಲೆಂಡ್ ಮತ್ತು ಇಂಗ್ಲೆಂಡ್ ವಿರುದ್ಧ ಟೆಸ್ಟ್ ಸರಣಿಗಳಿವೆ.
 
 ಇಷ್ಟೇ ಅಲ್ಲದೇ, ಸೂಕ್ತ ಹೆಡ್ ಕೋಚ್ ನೇಮಿಸುವಂತೆ ವ್ಯಾಪಕ ಕರೆಗಳು ಬರುತ್ತಿದ್ದು, ದ್ರಾವಿಡ್ ಅವರನ್ನು ಈ ಹುದ್ದೆಗೆ ನೇಮಿಸಲಾಗುತ್ತದೆಂದು ವದಂತಿಯೂ ಹರಡಿದೆ.

ವೆಬ್‌ದುನಿಯಾ ಮೊಬೈಲ್ ಆಪ್ (ಡೌನ್‌ಲೋಡ್) ಮಾಡಿಕೊಂಡು ತಾಜಾ ಸುದ್ದಿಗಳನ್ನು ಪಡೆಯಿರಿ.
 

Share this Story:

Follow Webdunia kannada

ಮುಂದಿನ ಸುದ್ದಿ

ಆಸ್ಟ್ರೇಲಿಯಾ ವೇಗಿಗಳ ನಿಗಾವಹಿಸಲು ಕ್ಷಿಪಣಿ ನಿರ್ದೇಶಿತ ತಂತ್ರಜ್ಞಾನ ಬಳಕೆ