Select Your Language

Notifications

webdunia
webdunia
webdunia
webdunia

ಆಸ್ಟ್ರೇಲಿಯಾ ವೇಗಿಗಳ ನಿಗಾವಹಿಸಲು ಕ್ಷಿಪಣಿ ನಿರ್ದೇಶಿತ ತಂತ್ರಜ್ಞಾನ ಬಳಕೆ

australia
ಸಿಡ್ನಿ , ಗುರುವಾರ, 26 ಮೇ 2016 (20:24 IST)
ಆಸ್ಟ್ರೇಲಿಯಾ ಕ್ರಿಕೆಟ್‌ನಲ್ಲಿ  ತಂತ್ರಜ್ಞಾನವನ್ನು ಪೂರ್ಣ ಮಟ್ಟದಲ್ಲಿ ಬಳಸಲು ಉದ್ದೇಶಿಸಿದೆ. ಶ್ರೀಲಂಕಾದ ಮುಂಬರುವ ಪ್ರವಾಸದಲ್ಲಿ ಮಿಲಿಟರಿ ಸೆಟ್ಟಿಂಗ್ಸ್‌ಗಳಲ್ಲಿ ಸಾಮಾನ್ಯವಾಗಿ ಹೆಚ್ಚು ಬಳಕೆಯಾಗುತ್ತಿದ್ದ ತಂತ್ರಜ್ಞಾನದ ಅನ್ವಯ ವೇಗದ ಬೌಲರುಗಳು ತರಬೇತಿ ಪಡೆಯಲಿದ್ದಾರೆ.

ರಾಷ್ಟ್ರದ ವೇಗದ ಬೌಲರುಗಳಿಗೆ ಉಂಟಾಗುವ ಗಾಯಗಳನ್ನು ತಗ್ಗಿಸಿ ಅವರ ಸಾಧನೆಯ ಸುಧಾರಣೆಗೆ ಜಲಾಂತರ್ಗಾಮಿ ಮತ್ತು ನಿರ್ದೇಶಿತ ಕ್ಷಿಪಣಿ ತಂತ್ರಜ್ಞಾನ ಬಳಸಿಕೊಂಡು ಕ್ರಮಾವಳಿಯನ್ನು ಸಂಶೋಧಕರು ರೂಪಿಸಿದ್ದಾರೆ. ಈ ತಂತ್ರಜ್ಞಾನವನ್ನು ಟಾರ್ಪೆಡೊ ತಂತ್ರಜ್ಞಾನವೆಂದು ಕರೆಯಲಾಗುತ್ತಿದ್ದು,  ವೃತ್ತಿಪರ ಕ್ರಿಕೆಟಿಗರ ಕೆಲಸದ ಒತ್ತಡ ಅಳೆಯುವ ಪ್ರಸಕ್ತ ವಿಧಾನಕ್ಕೆ ಉತ್ತರವಾಗಿ ಆಸ್ಟ್ರೇಲಿಯಾ ಕ್ಯಾಥೋಲಿಕ್ ವಿವಿಯ ಕ್ರೀಡಾ ವಿಜ್ಞಾನಿಗಳು ಈ ಕ್ರಮಾವಳಿ ರೂಪಿಸಿದ್ದಾರೆ.
 
ಪ್ರಸಕ್ತ ವಿಧಾನದಲ್ಲಿ ಎಸೆತಗಳ ಸಂಖ್ಯೆಯನ್ನು ಮಾತ್ರ ಲೆಕ್ಕಕ್ಕೆ ತೆಗೆದುಕೊಳ್ಳುತ್ತದೆ. ಆದರೆ ಎಸೆತಗಳ ತೀವ್ರತೆ ಮತ್ತು ಅದಕ್ಕೆ ಅಗತ್ಯವಾದ ಪ್ರಯತ್ನವನ್ನು ಲೆಕ್ಕಕ್ಕೆ ತೆಗೆದುಕೊಳ್ಳುವುದಿಲ್ಲ.

ವೆಬ್‌ದುನಿಯಾ ಮೊಬೈಲ್ ಆಪ್ (ಡೌನ್‌ಲೋಡ್) ಮಾಡಿಕೊಂಡು ತಾಜಾ ಸುದ್ದಿಗಳನ್ನು ಪಡೆಯಿರಿ.

Share this Story:

Follow Webdunia kannada

ಮುಂದಿನ ಸುದ್ದಿ

ಐಪಿಎಲ್ 2016ರ ಫೈನಲ್ ಟಿಕೆಟ್‌ಗಳು 2 ಗಂಟೆಗಳಲ್ಲಿ ಸೋಲ್ಡ್ ಔಟ್