Select Your Language

Notifications

webdunia
webdunia
webdunia
webdunia

ಭಾರತ-ಇಂಗ್ಲೆಂಡ್ ಅಂತಿಮ ಏಕದಿನ: ಮತ್ತೆ ಕೊಹ್ಲಿ ಬೆಂಬಿಡದ ದುರಾದೃಷ್ಟ

ಭಾರತ-ಇಂಗ್ಲೆಂಡ್ ಅಂತಿಮ ಏಕದಿನ: ಮತ್ತೆ ಕೊಹ್ಲಿ ಬೆಂಬಿಡದ ದುರಾದೃಷ್ಟ
ಪುಣೆ , ಭಾನುವಾರ, 28 ಮಾರ್ಚ್ 2021 (13:05 IST)
ಪುಣೆ: ಭಾರತ ಮತ್ತು ಇಂಗ್ಲೆಂಡ್ ನಡುವಿನ ಮೂರನೇ ಮತ್ತು ಅಂತಿಮ ಏಕದಿನ ಪಂದ್ಯದಲ್ಲಿ ಇಂದು ಮತ್ತೆ ಟಾಸ್ ಸೋತ ಟೀಂ ಇಂಡಿಯಾ ಮೊದಲು ಬ್ಯಾಟಿಂಗ್ ಮಾಡುತ್ತಿದೆ.


ಟಾಸ್ ಗೆದ್ದು ಮೊದಲು ಫೀಲ್ಡಿಂಗ್ ಮಾಡುವ ತಂಡಕ್ಕೆ ಗೆಲ್ಲುವ ಅವಕಾಶ ಹೆಚ್ಚಿದೆ. ದುರಾದೃಷ್ಟವಶಾತ್ ಈ ಸರಣಿಯಲ್ಲಿ ಒಂದೇ ಒಂದು ಬಾರಿಯೂ ಕೊಹ್ಲಿ ಟಾಸ್ ಗೆದ್ದಿಲ್ಲ. ಇದರಿಂದ ಆರಂಭದಿಂದಲೇ ಒತ್ತಡಕ್ಕೀಡಾಗುತ್ತದೆ. ಕಳೆದ ಪಂದ್ಯದಲ್ಲಿ ಸೋತಿರುವ ಕಾರಣ ಟೀಂ ಇಂಡಿಯಾ ಮತ್ತು ಇಂಗ್ಲೆಂಡ್ ಗೆ ಇಂದಿನ ಪಂದ್ಯ ಗೆಲ್ಲಲೇಬೇಕಾದ ಅನಿವಾರ್ಯತೆ. ಇಂದಿನ ಪಂದ್ಯ ಗೆದ್ದವರು ಸರಣಿ ಗೆಲ್ಲಲಿದ್ದಾರೆ.

ಈ ಪಂದ್ಯಕ್ಕೆ ಭಾರತ ಇಂದು ಕುಲದೀಪ್ ಯಾದವ್ ಸ್ಥಾನಕ್ಕೆ ಟಿ ನಟರಾಜನ್ ಗೆ ಅವಕಾಶ ನೀಡಿದೆ. ಸ್ಪೆಷಲಿಸ್ಟ್ ಸ್ಪಿನ್ನರ್ ಗಳಿಲ್ಲದೇ ಕಣಕ್ಕಿಳಿಯುತ್ತಿರುವುದು ಅಚ್ಚರಿ ಮೂಡಿಸಿದೆ. ಉಳಿದಂತೆ ತಂಡದಲ್ಲಿ ಯಾವುದೇ ಬದಲಾವಣೆಯಿಲ್ಲ.

Share this Story:

Follow Webdunia kannada

ಮುಂದಿನ ಸುದ್ದಿ

ವಿರಾಟ್ ಕೊಹ್ಲಿ ಸಲಹೆಯಂತೆ ಐಪಿಎಲ್ ನಿಂದ ಈ ನಿಯಮವನ್ನೇ ಕಿತ್ತು ಹಾಕಿದ ಬಿಸಿಸಿಐ