ಇಷ್ಟು ದಿನದ ಘನತೆಯನ್ನು ಒಂದೇ ಕ್ಷಣದಲ್ಲಿ ಕೈ ಚೆಲ್ಲಿದ ಹಾರ್ದಿಕ್ ಪಾಂಡ್ಯ!

Webdunia
ಸೋಮವಾರ, 15 ಜನವರಿ 2018 (14:54 IST)
ಸೆಂಚೂರಿಯನ್: ಟೀಂ ಇಂಡಿಯಾದ ಎಲ್ಲಾ ಬ್ಯಾಟ್ಸ್ ಮನ್ ಗಳು ಪರದಾಡುವಾಗ ತಾವೊಬ್ಬರೇ ಹೋರಾಡಿ ಬ್ಯಾಟಿಂಗ್ ಮಾಡುವ ಹಾರ್ದಿಕ್ ಪಾಂಡ್ಯ ಬಗ್ಗೆ ಇದುವರೆಗೆ ಎಲ್ಲರಿಗೂ ಮೆಚ್ಚುಗೆಯಿತ್ತು. ಆದರೆ ಅದನ್ನು ಅವರು ಇಂದು ಒಂದೇ ಕ್ಷಣದಲ್ಲಿ ಹಾಳು ಮಾಡಿಕೊಂಡರು.
 

ತೃತೀಯ ದಿನದಾಟದಲ್ಲಿ ಹಾರ್ದಿಕ್ ಪಾಂಡ್ಯ ವಿರಾಟ್ ಕೊಹ್ಲಿಗೆ ಉತ್ತಮವಾಗಿ ಸಾಥ್ ನೀಡಿ ಪಂದ್ಯವನ್ನು ತನ್ನ ತೆಕ್ಕೆಯಲ್ಲಿಟ್ಟುಕೊಂಡಿದ್ದರು. ಆದರೆ ಅತಿಯಾದ ಆತ್ಮವಿಶ್ವಾಸ ಎನ್ನುವುದು ಎಂತಹಾ ಆಟಗಾರರನ್ನೂ ಮುಳುಗಿಸಿ ಬಿಡುತ್ತದೆ ಎನ್ನುವುದಕ್ಕೆ ಪಾಂಡ್ಯ ಔಟಾದ ರೀತಿ ಸಾಕ್ಷಿಯಾಯಿತು.

ಫಿಲ್ಯಾಂಡರ್ ನೇರವಾಗಿ ವಿಕೆಟ್ ಕಡೆಗೆ ಚೆಂಡು ಎಸೆಯುತ್ತಿದ್ದರೆ ಸ್ವಲ್ಪ ಅತಿರೇಕದ ವರ್ತನೆ ತೋರಿದ ಪಾಂಡ್ಯ ಬ್ಯಾಟ್ ಕ್ರೀಸ್ ಗೆ ತಾಗಿಸಲು ತಡ ಮಾಡಿದರು. ತಾಗಿಸಿದರೂ ಸರಿಯಾಗಿ ಇಡದೇ ತಾವಾಗಿಯೇ ವಿಕೆಟ್ ಎದುರಾಳಿಗಳಿಗೆ ಹರಿವಾಣದಲ್ಲಿಟ್ಟು ದಾನ ಮಾಡಿದರು.

ಅವರ ಈ ರೀತಿಯ ವರ್ತನೆಯನ್ನು ನೋಡಿ ಕಮೆಂಟರಿ ಮಾಡುತ್ತಿದ್ದ ಸುನಿಲ್ ಗವಾಸ್ಕರ್, ಸಂಜಯ್ ಮಂಜ್ರೇಕರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಂಜಯ್ ಮಂಜ್ರೇಕರ್ ಅಂತೂ ಪಾಂಡ್ಯರದ್ದು ದುರಹಂಕಾರಿ ವರ್ತನೆ ಎಂದು ಬಣ್ಣಿಸಿದ್ದಾರೆ.

ಅದೇನೇ ಇರಲಿ, ಪಾಂಡ್ಯರ ಈ ವರ್ತನೆಯಿಂದಾಗಿ ಚೇತರಿಸಿಕೊಳ್ಳಬೇಕಿದ್ದ ಟೀಂ ಇಂಡಿಯಾ ಮತ್ತೆ ಕುಸಿಯುವಂತಾಯಿತು. ಅದೇನೇ ಇದ್ದರೂ ಇನ್ನೊಂದೆಡೆ ವಿರಾಟ್ ಕೊಹ್ಲಿ ಶತಕ ಗಳಿಸಿ ತಂಡವನ್ನು ಮುನ್ನಡೆಸುತ್ತಿದ್ದಾರೆ. ಈಗಾಗಲೇ 6 ವಿಕೆಟ್ ಕಳೆದುಕೊಂಡಿರುವ ಭಾರತಕ್ಕೆ ದ.ಆಫ್ರಿಕಾದ ಮೊದಲ ಇನಿಂಗ್ಸ್ ಮೊತ್ತ ದಾಟಲು 82 ರನ್ ಅಗತ್ಯವಿದೆ. ಆಫ್ರಿಕಾ ಮೊದಲ ಇನಿಂಗ್ಸ್ ನಲ್ಲಿ 335 ರನ್ ಗಳಿಸಿತ್ತು. ಭಾರತ ಈಗಾಗಲೇ 253 ರನ್ ಗಳಿಸಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಕ್ಯಾಪ್ಟನ್ ಜೊತೆ ಹೊಂದಾಣಿಕೆಯಾಗ್ತಿಲ್ಲ ಎಂದಾಕ್ಷಣ ಕೋಚ್ ಹುದ್ದೆ ಬಿಟ್ಟಿದ್ದ ಅನಿಲ್ ಕುಂಬ್ಳೆ: ಆದ್ರೆ ಗಂಭೀರ್...

ಗೌತಮ್ ಗಂಭೀರ್ ಹಾಯ್ ಹಾಯ್: ಸೋತ ಬೆನ್ನಲ್ಲೇ ಕೋಚ್ ಗೆ ಮೈದಾನದಲ್ಲೇ ಫ್ಯಾನ್ಸ್ ಮಂಗಳಾರತಿ Video

IND vs SA: ಗೌತಮ್ ಗಂಭೀರ್ ತೊಲಗಬೇಕು, ಇದು ಬಿಸಿಸಿಐಗೂ ತಲುಪಬೇಕು

ಬಾಸ್ಕೆಟ್ ಬಾಲ್ ಕಂಬ ಬಿದ್ದು ರಾಷ್ಟ್ರಮಟ್ಟದ ಆಟಗಾರ ಸಾವು, ಎದೆ ಝಲ್ಲೆನಿಸುತ್ತದೆ, Video

ಭಾರತದಲ್ಲಿ ಹೊಸ ಇತಿಹಾಸ ನಿರ್ಮಿಸಿದ ತೆಂಬಾ ಬವುಮಾ ಪಡೆ: ಗೌತಮ್‌ ಗಂಭೀರ್‌ಗೆ ಭಾರೀ ಮುಖಭಂಗ

ಮುಂದಿನ ಸುದ್ದಿ
Show comments