Publish Date: Sat, 27 May 2017 (10:46 IST)
Updated Date: Sat, 27 May 2017 (10:48 IST)
ಮುಂಬೈ: ಟೀಂ ಇಂಡಿಯಾಕ್ಕೆ ಆಯ್ಕೆಯಾಗದ ತನ್ನ ಸಿಟ್ಟು ಪ್ರದರ್ಶಿಸುವ ಭರದಲ್ಲಿ ಹಿರಿಯ ಸ್ಪಿನ್ನರ್ ಹರ್ಭಜನ್ ಸಿಂಗ್ ಧೋನಿ ಬಗ್ಗೆ ನೀಡಿದ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ.
ಧೋನಿಗೆ ಸಿಗುತ್ತಿರುವ ಗೌರವ ತಮ್ಮಂತಹ ಹಿರಿಯ ಆಟಗಾರರಿಗೇಕೆ ಸಿಗುತ್ತಿಲ್ಲ. ನಾನೂ ಧೋನಿಯಂತೆ ಸಲಹೆ ನೀಡಬಲ್ಲೆ ಎಂದು ಭಜಿ ಆಕ್ರೋಶ ವ್ಯಕ್ತಪಡಿಸಿದ್ದರು. ಅದನ್ನು ಸಮರ್ಥಸಿಕೊಂಡಿಸಿರುವ ಭಜಿ ತನ್ನ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಿಕೊಂಡ ಮಾಧ್ಯಮಗಳ ವಿರುದ್ಧವೂ ಕಿಡಿ ಕಾರಿದ್ದಾರೆ.
‘ನಾನು ಧೋನಿ ಉತ್ತಮ ಸ್ನೇಹಿತರು. ನನ್ನ ಹೇಳಿಕೆ ಧೋನಿಯನ್ನು ಆಯ್ಕೆ ಮಾಡಿರುವುದರ ವಿರುದ್ಧವಲ್ಲ. ಅವರನ್ನು ತಂಡಕ್ಕೆ ಆರಿಸುವುದರ ವಿರುದ್ಧ ನನ್ನ ಆಕ್ಷೇಪವಿಲ್ಲ’ ಎಂದು ಭಜಿ ಸಮರ್ಥಿಸಿಕೊಂಡಿದ್ದಾರೆ.
ನನ್ನ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಿದಿರಿ. ನಾನೂ 19 ವರ್ಷ ತಂಡಕ್ಕಾಗಿ ಆಡಿದ್ದೇನೆ. ಹಲವು ಸೋಲು-ಗೆಲುವುಗಳನ್ನು ಕಂಡಿದ್ದೇನೆ. ಹಾಗಾಗಿ ನನ್ನನ್ನು ಕಡೆಗಣಿಸಿರುವುದರ ವಿರುದ್ಧ ಮಾತ್ರವಾಗಿತ್ತು ಎಂದು ಟ್ವಿಟರ್ ನಲ್ಲಿ ಭಜಿ ಸಮರ್ಥನೆ ನೀಡಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ