Select Your Language

Notifications

webdunia
webdunia
webdunia
webdunia

ಅನಿಲ್ ಕುಂಬ್ಳೆ ವಿರುದ್ಧ ಇನ್ನೊಂದು ಗಂಭೀರ ಆರೋಪ ಹೊರಿಸಿದ ಬಿಸಿಸಿಐ

ಅನಿಲ್ ಕುಂಬ್ಳೆ ವಿರುದ್ಧ ಇನ್ನೊಂದು ಗಂಭೀರ ಆರೋಪ ಹೊರಿಸಿದ ಬಿಸಿಸಿಐ
Mumbai , ಶನಿವಾರ, 27 ಮೇ 2017 (10:33 IST)
ಮುಂಬೈ: ಕೋಚ್ ಅನಿಲ್ ಕುಂಬ್ಳೆ ವೇತನ ಏರಿಸುವಂತೆ ಬೇಡಿಕೆ ಇಟ್ಟ ದಿನದಿಂದ ಅವರ ವಿರುದ್ಧ ಕಿಡಿ ಕಾರುತ್ತಿರುವ ಬಿಸಿಸಿಐ ಪದಾಧಿಕಾರಿಗಳು ಹೊಸದೊಂದು ಆರೋಪ ಹೊರಿಸಿದ್ದಾರೆ.

 
ವಿರಾಟ್ ಕೊಹ್ಲಿಯನ್ನು ಮುಂದಿಟ್ಟುಕೊಂಡು ಕುಂಬ್ಳೆ ದುಪ್ಪಟ್ಟು ವೇತನಕ್ಕೆ ಬೇಡಿಕೆಯಿಡುತ್ತಿದ್ದಾರೆ ಎಂದು ಬಿಸಿಸಿಐಯ ಹೆಸರು ಹೇಳಲಿಚ್ಛಿಸದ ಅಧಿಕಾರಿಯೊಬ್ಬರು ದೂರಿದ್ದಾರೆ. ಕೊಹ್ಲಿ ವೈಯಕ್ತಿಕವಾಗಿ ವೇತನ ಹೆಚ್ಚಿಸುವಂತೆ ಕೇಳಿಕೊಳ್ಳದಿದ್ದರೂ, ನಾಯಕನ ವೇತನ ಹೆಚ್ಚಿಸಬೇಕೆಂದು ಕುಂಬ್ಳೆ ಬಿಸಿಸಿಐ ಎದುರು ವಿಷಯ ಮಂಡನೆ ಮಾಡುವಾಗ ಆಗ್ರಹಿಸಿದ್ದರು ಎಂದು ಅವರು ದೂರಿದ್ದಾರೆ.

‘ನಾನು ಕೊಹ್ಲಿ ಜತೆ ವೈಯಕ್ತಿಕವಾಗಿ ಈ ಬಗ್ಗೆ ಒಮ್ಮೆ ಮಾತನಾಡಿದ್ದೆ. ಆಗ ಕೊಹ್ಲಿ ಎಲ್ಲರಿಗೂ ಒಂದೇ ರೀತಿಯಲ್ಲಿ ವೇತನ ಹೆಚ್ಚಿಸುವಂತೆ ಹೇಳಿದ್ದರು. ಆದರೆ ಕುಂಬ್ಳೆ ತಮ್ಮ ವಾದವನ್ನು ದೃಢಪಡಿಸಲು ಕೊಹ್ಲಿ ಹೆಸರನ್ನು ಸೇರಿಸಿದ್ದಾರೆ’ ಎಂದು ಆ ಅಧಿಕಾರಿ ಹೇಳಿದ್ದಾರೆ.

ಕುಂಬ್ಳೆ ಜತೆಗೆ ಸಂಬಂಧ ಹಳಸಿರುವುದರಿಂದಲೇ ಬಿಸಿಸಿಐ ಹೊಸ ಕೋಚ್ ಗಳ ಹುಡುಕಾಟಕ್ಕೆ ಅರ್ಜಿ ಆಹ್ವಾನಿಸಿದೆ. ಇದೆಲ್ಲಾ ವೇತನ ಹೆಚ್ಚಿಸುವಂತೆ ಕುಂಬ್ಳೆ ಬೇಡಿಕೆಯಿಟ್ಟ ಪರಿಣಾಮ ಎನ್ನಲಾಗುತ್ತಿದೆ. ಆದರೆ ನಾಯಕ ಕೊಹ್ಲಿ ಬಿಸಿಸಿಐ ತನ್ನ ನಿಯಮವನ್ನು ಅನುಸರಿಸುತ್ತಿದೆಯಷ್ಟೇ ಎಂದು ತೇಪೆ ಹಾಕಲು ಯತ್ನಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ   

Share this Story:

Follow Webdunia kannada

ಮುಂದಿನ ಸುದ್ದಿ

ಅಭಿಮಾನಿಗೆ ವೀಸಾ ಪಡೆಯಲು ನೆರವಾದ ಸಚಿನ್ ತೆಂಡುಲ್ಕರ್