ಗುಜರಾತ್ ಲಯನ್ಸ್ ತಂಡದ ನಿಗೂಢ ಸ್ಪಿನ್ನರ್ ಶಿವಿಲ್ ಕೌಶಿಕ್ ಯಾರ್ಕ್‌ಶೈರ್ ಪ್ರೀಮಿಯರ್ ಲೀಗ್‌ನಲ್ಲಿ ಆಡಲಿದ್ದಾರೆ. ನಿಗೂಢ ರೀತಿಯಲ್ಲಿ ಸ್ಪಿನ್ ಬೌಲಿಂಗ್ ಮಾಡುವ ಕೌಶಿಕ್ ಇಂಗ್ಲಿಷ್ ಕ್ಲಬ್ ಹಲ್ ಸಿಸಿಸಿ ಜತೆ ಗುತ್ತಿಗೆಗೆ ಸಹಿ ಹಾಕಿದ್ದಾರೆ. ಇದರಿಂದಾಗಿ ಗುಜರಾತ್ ಲಯನ್ಸ್‌ನ ವಿಚಿತ್ರ ರೀತಿಯ ಬೌಲರ್ ಕೌಶಿಕ್ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಈ ಸೀಸನ್‌ನಲ್ಲಿ ಒಡ್ಡಿಕೊಂಡಂತಾಗುತ್ತದೆ.
ಶಿವಿಲ್ ನಮ್ಮ ಜತೆ ಸದ್ಯದಲ್ಲೇ ಸೇರಲಿದ್ದಾರೆ. ಸೀಸನ್ ಉಳಿದ ಭಾಗಕ್ಕೆ ಅವರು ನಮ್ಮ ಜತೆ ಸೇರಲು ನಾವು ಎದುರುನೋಡುತ್ತಿದ್ದೇವೆ. ಲೀಗ್‌ನ ಮೊದಲ ನಾಲ್ಕು ಪಂದ್ಯಗಳನ್ನು ಗೆದ್ದಿದ್ದರೂ ಇತ್ತೀಚೆಗೆ ನಾವು ಹಿನ್ನಡೆ ಅನುಭವಿಸಿದ್ದೇವೆ. ಶಿವಿಲ್ ಅವರ ಸೇರ್ಪಡೆಯಿಂದ ನಾವು ಗೆಲುವಿನ ದಾರಿಯತ್ತ ಹೋಗುವುದಾಗಿ ಆಶಿಸಿದ್ದೇವೆ ಎಂದು ಇಂಗ್ಲಿಷ್ ಕ್ಲಬ್ ತಿಳಿಸಿದೆ.
ಕಳೆದ 15 ವರ್ಷಗಳಲ್ಲಿ ಐವರು ಭಾರತೀಯ ಕ್ರಿಕೆಟಿಗರು ಹಲ್ ಸಿಸಿಸಿಯನ್ನು ಪ್ರತಿನಿಧಿಸಿದ್ದು, ಅವರ ಪೈಕಿ ಅಂಡರ್ 19 ಸ್ಟಾರ್ ಸರ್ಫ್ರಾಜ್ ಖಾನ್ ಕೂಡ ಸೇರಿದ್ದಾರೆ. ಇತ್ತೀಚೆಗೆ ಮುಗಿದ ಐಪಿಎಲ್‌ನಲ್ಲಿ ಅವರು ರಾಯಲ್ ಚಾಲೆಂಜರ್ಸ್ ತಂಡವನ್ನು ಪ್ರತಿನಿಧಿಸಿದ್ದರು.
ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.