Select Your Language

Notifications

webdunia
webdunia
webdunia
webdunia

ಕ್ರಿಕೆಟ್, ಫುಟ್ಬಾಲ್‌ನಲ್ಲಿ ಅದೃಷ್ಟ ಅರಸುತ್ತಿರುವ ಪಾಕಿಸ್ತಾನದ ಡಯಾನ

ಕ್ರಿಕೆಟ್,  ಫುಟ್ಬಾಲ್‌ನಲ್ಲಿ ಅದೃಷ್ಟ ಅರಸುತ್ತಿರುವ ಪಾಕಿಸ್ತಾನದ ಡಯಾನ
ಇಸ್ಲಾಮಾಬಾದ್ , ಬುಧವಾರ, 8 ಜೂನ್ 2016 (16:14 IST)
ಡಯಾನ ಬೇಗ್ ತನ್ನ ಸೀಟಿನಲ್ಲಿ ಕುಳಿತು ಚಡಪಡಿಸುತ್ತಿದ್ದರು.  ತಮ್ಮ ಕ್ರಿಕೆಟ್ ತಂಡಕ್ಕೆ ಜಯ ತಂದಿತ್ತ ಬಳಿಕ ಪ್ರಶಸ್ತಿ ಪ್ರಧಾನ ಸಮಾರಂಭವೊಂದರಲ್ಲಿ  ಪ್ರತಿ ಸೆಕೆಂಡಿಗೆ ತಮ್ಮ ಗಡಿಯಾರ ಪರೀಕ್ಷಿಸುತ್ತಿದ್ದರು.  ಇನ್ನೊಂದು ಮೈದಾನದಲ್ಲಿ ಅವರು ಫುಟ್ಬಾಲ್ ಪಂದ್ಯವೊಂದನ್ನು ಆಡಬೇಕಿದ್ದು, ಸಮಯ ಸಮೀಪಿಸಿತ್ತು. 
 
ಆದರೆ ಒತ್ತಡವು ಬೇಗ್ ಅವರಿಗೆ ಹೊಸದಲ್ಲ.  20 ವರ್ಷದ ಪ್ರತಿಭಾವಂತ ಆಟಗಾರ್ತಿ ಕ್ರಿಕೆಟ್ ಮತ್ತು ಫುಟ್ಬಾಲ್ ಎರಡರಲ್ಲೂ ರಾಷ್ಟ್ರೀಯ ತಂಡವನ್ನು ಪ್ರತಿನಿಧಿಸಿದ್ದಾರೆ.  ಟಿ 20 ತಂಡಕ್ಕೆ ಆಯ್ಕೆಯಾಗಿದ್ದು ತನಗೆ ಸಿಕ್ಕ ಗೌರವವಾಗಿದೆ ಎಂದು ತಮ್ಮ ವಾಚ್ ಮತ್ತೆ ಮತ್ತೆ ಪರೀಕ್ಷಿಸುತ್ತಾ ಹೇಳಿದರು. 
 
 ಆದರೆ ಅವರು ತಂಡದ 11 ಮಂದಿ ಆಟಗಾರರಲ್ಲಿ ಸೇರಿರಲಿಲ್ಲ. ನೇಪಥ್ಯದಲ್ಲಿ ಉಳಿದರೂ ಇದು ನನಗೆ ಹೊಸ ಜೀವನ ನೀಡಿತು. ಹೊಸ ಶಕ್ತಿ ತುಂಬಿತು ಎಂದು ಬೇಗ್ ಉದ್ಗರಿಸಿದ್ದಾರೆ.  20 ವರ್ಷದ ಬೇಗ್ ಭವ್ಯವಾದ ಹುಂಜಾ ಕಣಿವೆಯ ಬೀದಿ ಬದಿಯಲ್ಲಿ ಕ್ರಿಕೆಟ್, ಫುಟ್ಬಾಲ್ ಇತರೆ ಮಕ್ಕಳ ಜತೆ ಆಡುತ್ತಾ ಬೆಳೆದವರು.  ಆದರೆ ಅವಳ ಬಾಲಕಿಯಾಗಿ ಬೆಳೆದದ್ದು ಅಷ್ಟೊಂದು ವ್ಯತ್ಯಾಸ ಉಂಟುಮಾಡಲಿಲ್ಲ.

ಬೇಗ್ ಶಿಯಾ ಇಸ್ಲಾಂ ಪಂಗಡಕ್ಕೆ ಸೇರಿದ್ದು,  ಈ ಪಂಗಡವು ಸಂಪ್ರದಾಯವಾದಿ ಪಾಕಿಸ್ತಾನದಲ್ಲಿ  ಸುಧಾರಣಾವಾದಿ ದೃಷ್ಟಿಕೋನಕ್ಕೆ ಹೆಸರಾಗಿದ್ದು,  ಅವಳಿಗೆ ಹಾಕಿದ್ದ ನಿರ್ಬಂಧಗಳಿಂದ  ಮುಕ್ತಗೊಳಿಸಿದರು.  ಬೀದಿಗಳಿಂದ ಸಮುದಾಯ ಕ್ರೀಡಾಕೂಟಗಳಲ್ಲಿ ಮತ್ತು ಸ್ಥಳೀಯ ತಂಡಗಳಲ್ಲಿ ಆಡಿದ ಬೇಗ್ ಎರಡು ವರ್ಷಗಳ ಬಳಿಕ ಪಾಕಿಸ್ತಾನ ಎ ತಂಡಕ್ಕೆ ಆಯ್ಕೆಯಾದರು. ಬಳಿಕ 2013ರಲ್ಲಿ ವಿಶ್ವಕಪ್‌ಗೆ ಕಾಯ್ದಿರಿಸಿದ ಆಟಗಾರ್ತಿಯಾಗಿದ್ದರು.
 
2015ರಲ್ಲಿ ಅಂತಿಮವಾಗಿ ಮೊದಲ ಅಂತಾರಾಷ್ಟ್ರೀಯ ಕ್ಯಾಪ್ ಗೆದ್ದ ಬೇಗ್ ಬಾಂಗ್ಲಾ ವಿರುದ್ಧ ಆಡಿದರು. 
ಪಾಕಿಸ್ತಾನದ ಮಹಿಳಾ ಫುಟ್ಬಾಲ್ ತಂಡಕ್ಕೆ ಅವರ ಪ್ರಯಾಣ ಕೂಡ ನಾಟಕೀಯವಾಗಿತ್ತು. ಕ್ರಿಕೆಟ್ ಮೋಹದ ಪಾಕಿಸ್ತಾನದಲ್ಲಿ ಮಹಿಳಾ ಫುಟ್ಬಾಲ್ ಜನಪ್ರಿಯತೆ ವಿಷಯದಲ್ಲಿ ಸ್ಪರ್ಧಿಸಲು ಅಸಮರ್ಥವಾಗಿತ್ತು.  ಇಸ್ಲಾಮಾಬಾದ್‌ನಲ್ಲಿ ಕ್ರಿಕೆಟ್ ಆಡುವಾಗ ಗಿಲ್ಗಿಟ್ -ಬಾಲ್ಟಿಸ್ತಾನ್ ಫುಟ್ಬಾಲ್ ತಂಡಕ್ಕೆ ಆಟಗಾರರ ಕೊರತೆ ಕಂಡುಬಂದಾಗ ಬೇಗ್ ಅದರಲ್ಲಿ ಪ್ರಯತ್ನಿಸಿದರು. ಬಹರೇನ್ ಸಾಫ್ ಚಾಂಪಿಯನ್‌ಷಿಪ್‌ನಲ್ಲಿ ಪಾಕಿಸ್ತಾನದ ಪರ ಆಡಲು ಆಯ್ಕೆಯಾದಾಗ ಅವರ ಕಣ್ಣನ್ನು ಅವರೇ ನಂಬದಾದರು.

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.
 

Share this Story:

Follow Webdunia kannada

ಮುಂದಿನ ಸುದ್ದಿ

ಆಸ್ಟ್ರೇಲಿಯಾ ವಿರುದ್ಧ ಹಗಲು ರಾತ್ರಿ ಪಂದ್ಯ ದೃಢಪಡಿಸಿದ ದಕ್ಷಿಣ ಆಫ್ರಿಕಾ