Select Your Language

Notifications

webdunia
webdunia
webdunia
webdunia

ಮೊಮ್ಮಗ ಕೋಟ್ಯಾಧಿಪತಿ, ತಾತನಿಗೆ ಒಪ್ಪೊತ್ತಿನ ಊಟಕ್ಕೂ ಪರದಾಟ! ಇದು ಟೀಂ ಇಂಡಿಯಾ ಕ್ರಿಕೆಟಿಗನ ಕತೆ!

ಮೊಮ್ಮಗ ಕೋಟ್ಯಾಧಿಪತಿ, ತಾತನಿಗೆ ಒಪ್ಪೊತ್ತಿನ ಊಟಕ್ಕೂ ಪರದಾಟ! ಇದು ಟೀಂ ಇಂಡಿಯಾ ಕ್ರಿಕೆಟಿಗನ ಕತೆ!
NewDelhi , ಬುಧವಾರ, 5 ಜುಲೈ 2017 (09:00 IST)
ನವದೆಹಲಿ: ಭಾರತೀಯ ಕ್ರಿಕೆಟಿಗರೆಂದರೆ ಧನಿಕರೆಂದೇ ಲೆಕ್ಕ.  ಅದರಲ್ಲೂ ತಂಡದ ಪ್ರಮುಖ ಆಟಗಾರನೆಂದ ಮೇಲೆ ಕ್ರಿಕೆಟ್ ಆಡಳಿತ ಮಂಡಳಿ ಮಾತ್ರವಲ್ಲ, ಜಾಹೀರಾತುಗಳಿಂದಲೂ ಹಣ ಸಂಪಾದಿಸುತ್ತಾರೆ. ಹಾಗಿದ್ದರೂ ಇಲ್ಲೊಬ್ಬ ಕ್ರಿಕೆಟಿಗನ ತಾತ ಮಾತ್ರ ದಿನದ ಊಟಕ್ಕೂ ಪರದಾಡುತ್ತಿದ್ದಾರೆ.


ಇದು ಭಾರತ ತಂಡದ ಯಾರ್ಕರ್ ಸ್ಪೆಷಲಿಸ್ಟ್ ಜಸ್ಪ್ರೀತ್ ಬುಮ್ರಾ ಕತೆ. ಬುಮ್ರಾ ವಿಶ್ವ ನಂ.2 ಬೌಲರ್. ಆದರೆ ಅವರ ತಾತ ತಮ್ಮ 80 ರ ಇಳಿ ವಯಸ್ಸಿನಲ್ಲೂ ದಿನದ ಊಟಕ್ಕೆ ಆಟೋ ಓಡಿಸಿ ಸಂಪಾದಿಸುವ ಪರಿಸ್ಥಿತಿಯಲ್ಲಿದ್ದಾರೆ ಹೀಗೆಂದು ಆಂಗ್ಲ ಮಾಧ್ಯಮವೊಂದರಲ್ಲಿ ವರದಿಯಾಗಿದೆ.

ಆ ವ್ಯಕ್ತಿಯ ಹೆಸರು ಸಂತೋಕ್ ಸಿಂಗ್ ಬುಮ್ರಾ. ಆತ ಹೇಳುವ ಪ್ರಕಾರ ಬುಮ್ರಾ ಇವರ ಮೊಮ್ಮಗನಂತೆ. ಇವರು ಮತ್ತು ಬುಮ್ರಾ ತಂದೆ (ತಾತ ಹೇಳುವ ಪ್ರಕಾರ ಬುಮ್ರಾ ತಂದೆ ಇವರ ಮಗ) ಜಸ್ಪೀರ್ ಸಿಂಗ್  ಅಹಮ್ಮದಾಬಾದ್ ನಲ್ಲಿ ಮೂರು ಕಾರ್ಖಾನೆ ನಡೆಸುತ್ತಿದ್ದರು. ಆದರೆ ಜಸ್ಪ್ರೀತ್ 2001 ರಲ್ಲಿ ಮೃತಪಟ್ಟರು. ಅದಾದ ಮೇಲೆ ವ್ಯವಹಾರದಲ್ಲಿ ನಷ್ಟವಾಗಿ, ಸಾಲ ತೀರಿಸಲು ಸಂತೋಕ್ ಸಿಂಗ್ ಕಾರ್ಖಾನೆಗಳನ್ನು ಮಾರಿದರಂತೆ.

ಇದೀಗ ಜೀವನ ನಿರ್ವಹಣೆಗಾಗಿ ಅವರು ಆಟೋ ಓಡಿಸುತ್ತಿದ್ದಾರಂತೆ. ತನ್ನ ಜೀವನ ಕಷ್ಟದಲ್ಲಿದ್ದರೂ, ಬುಮ್ರಾಗಾಗಿ ಸದಾ ಪ್ರಾರ್ಥಿಸುವುದನ್ನು ಮಾತ್ರ ಈ ಹಿರಿ ಜೀವ ಬಿಡುವುದಿಲ್ಲ. ಆತ ಎಲ್ಲೇ ಇದ್ದರೂ ಚೆನ್ನಾಗಿರಲಿ ಎಂದು ಹಾರೈಸುತ್ತಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಟೀಂ ಇಂಡಿಯಾ ಕೋಚ್ ಹುದ್ದೆಗೆ ಅರ್ಜಿ ಸಲ್ಲಿಸಿದ ವಿಂಡೀಸ್ ಕ್ರಿಕೆಟಿಗ