Select Your Language

Notifications

webdunia
webdunia
webdunia
webdunia

ಧೋನಿಗೆ ಪದ್ಮ ಪ್ರಶಸ್ತಿ ಸಿಗದಂತೆ ತಡೆದಿತ್ತಾ ಕೇಂದ್ರ ಸರ್ಕಾರ?

ಧೋನಿಗೆ ಪದ್ಮ ಪ್ರಶಸ್ತಿ ಸಿಗದಂತೆ ತಡೆದಿತ್ತಾ ಕೇಂದ್ರ ಸರ್ಕಾರ?
NewDelhi , ಮಂಗಳವಾರ, 28 ಮಾರ್ಚ್ 2017 (10:14 IST)
ನವದೆಹಲಿ: ಈ ವರ್ಷ ದೇಶದ ಪ್ರತಿಷ್ಠಿತ ಪದ್ಮ ಪ್ರಶಸ್ತಿ ವಿಜೇತರಲ್ಲಿ ಕ್ರಿಕೆಟಿಗರ ಪೈಕಿ ವಿರಾಟ್ ಕೊಹ್ಲಿ ಜತೆಗೆ ಧೋನಿಯೂ ಇರಬೇಕಿತ್ತು. ಆದರೆ ಧೋನಿಗೆ ಪ್ರಶಸ್ತಿ ಸಿಗದಂತೆ ತಡೆಹಿಡಿದಿತ್ತಾ ಕೇಂದ್ರ ಸರ್ಕಾರ?

 

ಹೀಗೊಂದು ಮಾಧ್ಯಮ ವರದಿ ಹೇಳುತ್ತಿದೆ. ಧೋನಿ ಜತೆಗೆ ಅರ್ನಾಬ್ ಗೋಸ್ವಾಮಿ, ತಬಲಾ ಮಾಂತ್ರಿಕ ಝಾಕಿರ್ ಹುಸೇನ್ ಹಾಗೂ ವಿವಾದಿತ ಧಾರ್ಮಿಕ ನಾಯಕ ಗುರ್ಮೀತ್ ರಾಮ್ ರಹೀಂ ಸಿಂಗ್ ಅವರೂ ಪ್ರಶಸ್ತಿ ಪಟ್ಟಿಯಲ್ಲಿದ್ದರು. ಆದರೆ ಕೊನೆಯ ಹಂತದಲ್ಲಿ ಇವರ ಹೆಸರು ಕೈ ಬಿಡಲಾಯಿತು ಎಂದು ವರದಿ ಹೇಳಿದೆ.

 
ಆದರೆ ಎನ್ ಸಿಪಿ ಅಧ್ಯಕ್ಷ ಶರದ್ ಪವಾರ್ ಮತ್ತು ಬಿಜೆಪಿ ಹಿರಿಯ ನಾಯಕ ಮುರಳಿ ಮನೋಹರ್ ಜೋಶಿ ಹೆಸರು ಪಟ್ಟಿಯಲ್ಲಿ ಇಲ್ಲದಿದ್ದರೂ, ಪದ್ಮ ಪ್ರಶಸ್ತಿ ನೀಡಲಾಯಿತು ಎಂದು ಮಾಧ್ಯಮದಲ್ಲಿ ದೂರಲಾಗಿದೆ. ಆದರೆ ಇವರ ಹೆಸರು ನಾಮನಿರ್ದೇಶನ ಮಾಡಿ ಧೋನಿ ಹಾಗೂ ಇತರರ ಹೆಸರು ಕೈ ಬಿಟ್ಟವರಾರು ಎಂಬುದು ಬಹಿರಂಗವಾಗಿಲ್ಲ.

 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ   

Share this Story:

Follow Webdunia kannada

ಮುಂದಿನ ಸುದ್ದಿ

ವಿಕೆಟ್ ಕಿತ್ತು ಸೆಲ್ಫೀ ತೆಗಿ ಎಂದ ಮ್ಯಾಥ್ಯೂ ವೇಡ್ ಗೆ ಜಡೇಜಾ ಕೊಟ್ಟ ಉತ್ತರ ನೋಡಿ!