Publish Date: Sat, 24 Dec 2016 (06:48 IST)
Updated Date: Sat, 24 Dec 2016 (06:51 IST)
ಮುಂಬೈ: ನ್ಯೂಜಿಲೆಂಡ್ ವಿರುದ್ಧ ಟೆಸ್ಟ್ ಸರಣಿ ಗೆದ್ದ ಮೇಲೆ ಹರ್ಭಜನ್ ಸಿಂಗ್ ಟೀಂ ಇಂಡಿಯಾದ ರವಿಚಂದ್ರನ್ ಅಶ್ವಿನ್ ಸಾಧನೆಯನ್ನು ಟೀಕಿಸುವಂತಹ ಹೇಳಿಕೆಯೊಂದನ್ನು ನೀಡಿದ್ದಾರೆ. ಆದರೆ ಇದೀಗ ಭಜಿ ಅಶ್ವಿನ್ ಮೇಲೆ ಹೊಗಳಿಕೆಯ ಸುರಿಮಾಲೆ ಹರಿಸಿದ್ದಾರೆ.
ನ್ಯೂಜಿಲೆಂಡ್ ಸರಣಿ ಸಂದರ್ಭ ಅಶ್ವಿನ್ ಗೆ ಸಿಕ್ಕಿದಂತಹ ಪಿಚ್ ನನಗೆ, ಅನಿಲ್ ಕುಂಬ್ಳೆಗೆ ಸಿಕ್ಕಿದ್ದರೆ, ಇನ್ನೂ ಬೇಗ ಪಂದ್ಯ ಮುಗಿಸುತ್ತಿದ್ದೆವು ಎಂದು ಭಜಿ ವಿವಾದಾತ್ಮಕ ಹೇಳಿಕೆ ನೀಡಿದ್ದರು. ಅದು ಭಾರೀ ವಿವಾದಕ್ಕೆ ಕಾರಣವಾಗಿತ್ತು. ಕೊನೆಗೆ ಅಶ್ವಿನ್ ಟ್ವಿಟರ್ ನಲ್ಲಿ ಭಜಿ ಹೇಳಿಕೆಯನ್ನು ದೊಡ್ಡದು ಮಾಡಬೇಡಿ ಎಂದು ಮನವಿ ಮಾಡಿದ್ದರು.
ಆದರೆ ಗುರುವಾಗ ಐಸಿಸಿ ವರ್ಷದ ಕ್ರಿಕೆಟಿಗ ಪ್ರಶಸ್ತಿ ಪಡೆದ ಮೇಲೆ ಹರ್ಭಜನ್ ಖುದ್ದಾಗಿ ತಮ್ಮ ಟ್ವಿಟರ್ ಪೇಜ್ ನಲ್ಲಿ ಅಶ್ವಿನ್ ಗೆ ಅಭಿನಂದನೆ ತಿಳಿಸಿದ್ದಾರೆ. ಅವರ ಈ ಸಂದೇಶದಿಂದ ಅಶ್ವಿನ್ ಮತ್ತು ಭಜಿ ನಡುವೆ ಸರಿಯಿಲ್ಲ ಎಂದು ಬರೆದವರಿಗೆ ತಕ್ಕ ಉತ್ತರ ನೀಡಿದಂತಾಗಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ