Publish Date: Sat, 24 Dec 2016 (06:43 IST)
Updated Date: Sat, 24 Dec 2016 (06:46 IST)
ನವದೆಹಲಿ: ಕೆಲವರಿಗೆ ಮದುವೆಯಾದ ಮೇಲೆ ಅದೃಷ್ಟ ಖುಲಾಯಿಸುತ್ತದೆ. ಅಂತಹವರಲ್ಲಿ ಬಹುಶಃ ಟೀಂ ಇಂಡಿಯಾ ವೇಗಿ ಇಶಾಂತ್ ಶರ್ಮಾ ಕೂಡಾ ಒಬ್ಬರು. ಅವರಿಗೀಗ ಹಲವು ದಿನಗಳ ನಂತರ ಏಕದಿನ ಜೆರ್ಸಿ ತೊಡುವ ಭಾಗ್ಯ ಲಭಿಸುವ ಲಕ್ಷಣ ಕಾಣುತ್ತಿದೆ.
ಇತ್ತೀಚೆಗಷ್ಟೇ ಮದುವೆಯಾದ ಇಶಾಂತ್ ಇಂಗ್ಲೆಂಡ್ ಸರಣಿಗೆ ಆಯ್ಕೆಯಾಗಿದ್ದರೂ, ಗಾಯದ ಕಾರಣದಿಂದ ಆಡಲಾಗಿರಲಿಲ್ಲ. ಅದಕ್ಕಿಂತ ಮೊದಲು ನ್ಯೂಜಿಲೆಂಡ್ ವಿರುದ್ಧ ಟೆಸ್ಟ್ ಪಂದ್ಯಗಳಿಗೆ ಚಿಕೂನ್ ಗುನ್ಯಾದಿಂದ ಹಾಸಿಗೆ ಹಿಡಿದು ಆಡುವುದನ್ನು ತಪ್ಪಿಸಿಕೊಂಡರು. ಆದರೆ ಮದುವೆಯಾದ ಎರಡೇ ದಿನಕ್ಕೆ ಅವರಿಗೆ ಇಂಗ್ಲೆಂಡ್ ವಿರುದ್ಧ ಅಂತಿಮ ಟೆಸ್ಟ್ ಆಡುವ ಅವಕಾಶ ಸಿಕ್ಕಿತ್ತು. ಇಲ್ಲಿ ಉತ್ತಮ ಪ್ರದರ್ಶನ ನೀಡಿದ್ದಕ್ಕೆ ಅವರಿಗೀಗ ಒಳ್ಳೆ ಅವಕಾಶವೇ ಲಭಿಸಲಿದೆ.
ವೇಗಿ ಮೊಹಮ್ಮದ್ ಶಮಿ ಗಾಯದಿಂದ ಚೇತರಿಸಿಕೊಳ್ಳದ ಕಾರಣ ಏಕದಿನ ಸರಣಿಯನ್ನೂ ತಪ್ಪಿಸಿಕೊಳ್ಳಲಿದ್ದಾರೆ. ಇದೀಗ ಅವರ ಸ್ಥಾನಕ್ಕೆ ಇಶಾಂತ್ ಆಯ್ಕೆಯಾಗುವ ನಿರೀಕ್ಷೆಯಿದೆ. ಆಯ್ಕೆ ಸಮಿತಿ ಇನ್ನೂ ಈ ಬಗ್ಗೆ ಚರ್ಚಿಸಿಲ್ಲ. ಅಲ್ಲದೆ ಹಿರಿಯ ವೇಗಿ ಆಶಿಷ್ ನೆಹ್ರಾ ಕೂಡಾ ಆಯ್ಕೆಗಾರರ ಮನದಲ್ಲಿದ್ದಾರಂತೆ. ಆದರೆ ಕಳೆದ ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡಿದ ಆಧಾರದಲ್ಲಿ ಇಶಾಂತ್ ಆಯ್ಕೆಯಾಗುವ ಸಾಧ್ಯತೆ ತಳ್ಳಿ ಹಾಕುವಂತಿಲ್ಲ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ