Publish Date: Wed, 11 Nov 2020 (10:53 IST)
Updated Date: Wed, 11 Nov 2020 (10:55 IST)
ಮುಂಬೈ: ಪತ್ನಿಯ ಹೆರಿಗೆಗಾಗಿ ಆಸ್ಟ್ರೇಲಿಯಾದಂತಹ ಮಹತ್ವದ ಸರಣಿಯನ್ನು ತಪ್ಪಿಸಿಕೊಂಡಿರುವ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿಗೆ ಅಭಿಮಾನಿಗಳು ತರಾಟೆಗೆ ತೆಗೆದುಕೊಂಡಿದ್ದಾರೆ.
ಅಂದು ಧೋನಿ ವಿಶ್ವಕಪ್ ತಂಡವನ್ನು ಮುನ್ನಡೆಸುತ್ತಿದ್ದಾಗ ಪತ್ನಿಯ ಹೆರಿಗೆಯಾಗಿದ್ದರೂ ಮಗಳ ಮುಖ ನೋಡಲು ಕರ್ತವ್ಯ ಮರೆತು ತವರಿಗೆ ಓಡಿಬಂದಿರಲಿಲ್ಲ. ಅದು ಅವರ ಬದ್ಧತೆ ತೋರಿಸುತ್ತದೆ. ಆದರೆ ನೀವು ಈಗ ಆಸ್ಟ್ರೇಲಿಯಾದಂತಹ ಮಹತ್ವದ ತಂಡವನ್ನು ಎದುರಿಸುವಾಗ ಕರ್ತವ್ಯ ಬಿಟ್ಟು ಕುಟುಂಬಕ್ಕಾಗಿ ಓಡೋಡಿ ಬರುವ ಅಗತ್ಯವಿದೆಯೇ ಎಂದು ಕೆಲವು ನೆಟ್ಟಿಗರು ಕೊಹ್ಲಿಯನ್ನು ಪ್ರಶ್ನಿಸಿದ್ದಾರೆ. ಕೊಹ್ಲಿಯ ನಿರ್ಧಾರವನ್ನು ಬಿಸಿಸಿಐ ಒಪ್ಪಿದ್ದು, ಆಸ್ಟ್ರೇಲಿಯಾ ಕ್ರಿಕೆಟ್ ಮಂಡಳಿಯೂ ಗೌರವ ಸೂಚಿಸಿದೆ. ಆದರೆ ಕೆಲವು ಅಭಿಮಾನಿಗಳಿಗೆ ಮಾತ್ರ ಕೊಹ್ಲಿಯ ಈ ನಿರ್ಧಾರ ಇಷ್ಟವಾಗಿಲ್ಲ.