Select Your Language

Notifications

webdunia
webdunia
webdunia
webdunia

ಆರಂಭಿಕರಿಗೆ ಬೈಬೇಡಿ, ಸ್ವಲ್ಪ ಟೈಮ್ ಕೊಡಿ ಎಂದು ವಿರಾಟ್ ಕೊಹ್ಲಿ

ಆರಂಭಿಕರಿಗೆ ಬೈಬೇಡಿ, ಸ್ವಲ್ಪ ಟೈಮ್ ಕೊಡಿ ಎಂದು ವಿರಾಟ್ ಕೊಹ್ಲಿ
Kolkotta , ಸೋಮವಾರ, 23 ಜನವರಿ 2017 (12:00 IST)
ಕೋಲ್ಕೊತ್ತಾ: ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಯಲ್ಲಿ ಭಾರತ ತಂಡದ ಬ್ಯಾಟ್ಸ್ ಮನ್ ಗಳ ಬಗ್ಗೆ ಹೊಗಳಿಕೆಯ ಮಹಾಪೂರವೇ ಹರಿದು ಬರುತ್ತಿದೆ. ಆದರೆ ಆರಂಭಿಕರು ಮಾತ್ರ ಪ್ರತೀ ಪಂದ್ಯದಲ್ಲಿ ಕೈ ಕೊಟ್ಟಿದ್ದಾರೆ. ಆದರೂ ನಾಯಕ ವಿರಾಟ್ ಕೊಹ್ಲಿ ಮಾತ್ರ ಇವರ ಪರವಾಗಿ ಮಾತನಾಡಿದ್ದಾರೆ.
 

ಈ ಸರಣಿಯಲ್ಲಿ ಕನ್ನಡಿಗ ಕೆಎಲ್ ರಾಹುಲ್, ಶಿಖರ್ ಧವನ್ ಮತ್ತು ಅಜಿಂಕ್ಯ ರೆಹಾನೆ ಆರಂಭಿಕರಾಗಿ ಕಣಕ್ಕಿಳದಿದ್ದರು. ಆದರೆ ಯಾರೂ ಟೀಂ ಇಂಡಿಯಾಕ್ಕೆ ಉತ್ತಮ ಆರಂಭ ಒದಗಿಸಲಿಲ್ಲ. ಎಲ್ಲಾ ಪಂದ್ಯದಲ್ಲೂ ತಂಡ 50 ರನ್ ಗಳಿಸುವ ಮೊದಲೇ ವಿಕೆಟ್ ಒಪ್ಪಿಸಿದ್ದರು. ಆದರೂ ಅವರನ್ನು ಈಗಲೇ ಅಂಡರ್ ಎಸ್ಟಿಮೇಟ್ ಮಾಡಬೇಡಿ. ಅವರಿಗೆ ಸ್ವಲ್ಪ ಕಾಲಾವಕಾಶ ಕೊಡೋಣ ಎಂದು ಕೊಹ್ಲಿ ಹೇಳಿದ್ದಾರೆ.

ಈ ಮೂವರೂ ಆರಂಭಿಕ ಆಟಗಾರರು ಈ ಸರಣಿಯಲ್ಲಿ ಒಟ್ಟು ಗಳಿಸಿದ್ದು ಕೇವಲ 37 ರನ್. ಹಾಗಿದ್ದಾಗಿಯೂ ಸರಣಿಯ ಧನಾತ್ಮಕ ಅಂಶಗಳ ಬಗ್ಗೆಯೇ ನೋಡೋಣ. ಕೇದಾರ್ ಜಾದವ್, ಹಾರ್ದಿಕ್ ಪಾಂಡ್ಯ ನಮಗೆ ಸಿಕ್ಕಿದ ಪ್ಲಸ್ ಪಾಯಿಂಟ್. ಹೀಗಿರುವಾಗ ಯಾಕೆ ಆಡದವರ ಬಗ್ಗೆಯೇ ಮಾತನಾಡಬೇಕು ಎನ್ನುವುದು ಕೊಹ್ಲಿ ವಾದ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಮೊಹಮ್ಮದ್ ಶಮಿ ನಾಯಿ ಜತೆಗೆ ಫೋಟೋ ತೆಗೆಸಿಕೊಂಡರೂ ವಿವಾದವೇ?!