ಅಪ್ಪಟ ದೇಶಭಕ್ತ, ಹಾಕಿ ದಂತಕಥೆ ಧ್ಯಾನ್ ಚಂದ್ ಅವರ ಜನ್ಮದಿನದಂದು ಮತ್ತೆ ಪುನಃ ಅವರಿಗೆ ಭಾರತ ರತ್ನ ನೀಡಬೇಕು ಎಂಬ ಕೂಗು ಕೇಳಿ ಬಂದಿದೆ. ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಅವರಿಗಿಂತ ಮೊದಲು ಧ್ಯಾನ್ ಚಂದ್ ಅವರಿಗೆ ಭಾರತ ರತ್ನ ನೀಡಬೇಕಿತ್ತು ಎಂದು ಮಾಜಿ ಬಾಕಿ ಆಟಗಾರರು ತಮ್ಮ ಬಹುದಿನಗಳ ಆಶಯವನ್ನು ಪುನರುಚ್ಚರಿಸಿದ್ದಾರೆ.
ಹಾಕಿ ತಂಡದ ಮಾಡಿ ನಾಯಕರಾದ ಜಿತ್ ಪಾಲ್ ಸಿಂಗ್, ದಿಲೀಪ್ ಟಿರ್ಕೆ, ಧ್ಯಾನ್ ಚಂದ್ ಪುತ್ರ ಅಶೋಕ್ ಕುಮಾರ್ ಸೇರಿದಂತೆ ಮಾಜಿ ಆಟಗಾರರು ಭಾನುವಾರ ಜಂತರ್ ಮಂತರ್‌ನಲ್ಲಿ ಒಗ್ಗೂಡಿ ಸರ್ಕಾರ ತಮ್ಮ ಆಗ್ರಹವನ್ನು ಪೂರ್ಣಗೊಳಿಸಿ ಸ್ವಾತಂತ್ರ್ಯಪೂರ್ವದಲ್ಲಿ 1928, 1932, ಮತ್ತು 1936ರಲ್ಲಿ ಭಾರತಕ್ಕೆ ಹಾಕಿಯಲ್ಲಿ ಚಿನ್ನದ ಪದಕವನ್ನು ತಂದುಕೊಟ್ಟ ಅಪ್ರತಿಮ ಸಾಧಕನಿಗೆ ಗೌರವ ತಂದುಕೊಡುತ್ತದೆ ಎಂಬ ಭರವಸೆಯನ್ನು ವ್ಯಕ್ತ ಪಡಿಸಿದರು.
ಮೇಜರ್ ಧ್ಯಾನ್ ಚಂದ್ ಅವರ ಜನ್ಮದಿನವಾದ ಆಗಸ್ಟ್ 29ನ್ನು ರಾಷ್ಟ್ರೀಯ ಕ್ರೀಡಾ ದಿನಾಚರಣೆಯಾಗಿ ಆಚರಿಸಲಾಗುತ್ತದೆ. 1956ರಲ್ಲಿ ಭಾರತ ಸರ್ಕಾರ ಅವರಿಗೆ ಪದ್ಮವಿಭೂಷಣವನ್ನು ನೀಡಿ ಗೌರವಿಸಿದೆ. ಆದರೆ ಅವರಿಗೆ ಭಾರತ ರತ್ನ ನೀಡಬೇಕೆಂದು ಬಹಳ ದಿನಗಳಿಂದ ಒತ್ತಾಯ ಕೇಳಿ ಬರುತ್ತಿದೆ.