ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ಧೋನಿ ಶೀಘ್ರ ನಿವೃತ್ತಿ? ಅನುಮಾನಕ್ಕೆ ಕಾರಣವಾಗಿದೆ ಈ ಘಟನೆ!

Webdunia
ಗುರುವಾರ, 19 ಜುಲೈ 2018 (08:48 IST)
ಲೀಡ್ಸ್: ಇಂಗ್ಲೆಂಡ್ ವಿರುದ್ಧ ಟೀಂ ಇಂಡಿಯಾ ಸೋತಿದ್ದಕ್ಕೆ ತಂಡದ ಮೇಲೆ ಅಭಿಮಾನಿಗಳು ಕಿಡಿ ಕಾರುತ್ತಿದ್ದರೆ, ಧೋನಿ ಕೂಡಾ ತಮ್ಮ ನಿಧಾನಗತಿಯ ಬ್ಯಾಟಿಂಗ್ ನಿಂದ ವ್ಯಾಪಕ ಟೀಕೆಗೆ ಗುರಿಯಾಗುತ್ತಿದ್ದಾರೆ.

ಈ ನಡುವೆ ಕೆಲವರು ಧೋನಿ ನಿವೃತ್ತಿಯಾಗಲಿ ಎಂದು ಒತ್ತಾಯ ಮಾಡುತ್ತಿದ್ದಾರೆ. ಎರಡೂ ಏಕದಿನ ಪಂದ್ಯದಲ್ಲಿ ತೀರಾ ನಿಧಾನಗತಿಯ ಬ್ಯಾಟಿಂಗ್ ಮಾಡಿದ್ದ ಧೋನಿಯಲ್ಲಿ ಸಾಮರ್ಥ್ಯ ಕುಂದಿದೆಯೇ? ಮೈದಾನದಲ್ಲಿ ಭಾರತೀಯ ಪ್ರೇಕ್ಷಕರು ಮೂದಲಿಸಿದ್ದು ಧೋನಿಗೆ ಮುಜುಗರವುಂಟು ಮಾಡಿದೆಯೇ?

ಇದೇ ಕಾರಣಕ್ಕೆ ಧೋನಿ ಸದ್ಯದಲ್ಲೇ ಕ್ರಿಕೆಟ್ ನಿಂದ ನಿವೃತ್ತಿಯಾಗಬಹುದು ಎಂಬ ಮಾತುಗಳು ಕೇಳಿಬರುತ್ತಿವೆ. ಅದರ ಜತೆಗೆ ಮೂರನೇ ಏಕದಿನ ಪಂದ್ಯ ಮುಗಿದ ಬಳಿಕ ಧೋನಿ ನಡೆದುಕೊಂಡ ರೀತಿಯೊಂದು ಈ ಅನುಮಾನಗಳಿಗೆ ತುಪ್ಪ ಸುರಿದಿದೆ.

ಸಾಮಾನ್ಯವಾಗಿ ಸರಣಿ ಗೆದ್ದರೆ ಕ್ರಿಕೆಟಿಗರು ನೆನಪಿಗಾಗಿ ವಿಕೆಟ್, ಚೆಂಡು ಪಡೆದುಕೊಂಡು ಹೋಗುತ್ತಾರೆ. ಆದರೆ ಈ ಸರಣಿ ಸೋತರೂ ಧೋನಿ ಅಂಪಾಯರ್ ಬಳಿಯಿಂದ ಚೆಂಡು ಪಡೆದುಕೊಂಡು ತಮ್ಮ ಬಳಿಯಿಟ್ಟುಕೊಂಡಿರುವುದು ಟಿವಿ ಕ್ಯಾಮರಾಗಳಲ್ಲಿ ಸೆರೆಯಾಗಿವೆ. 2014 ರಲ್ಲಿ ತಾವು ನಿವೃತ್ತರಾದ ಟೆಸ್ಟ್ ಪಂದ್ಯದ ಕೊನೆಯಲ್ಲಿ ಧೋನಿ ಇದೇ ರೀತಿ ವಿಕೆಟ್ ತೆಗೆದುಕೊಂಡು ಹೋಗಿದ್ದರು.

ಇದೀಗ ಮತ್ತೆ ಯಾವುದೇ ಕಾರಣವಿಲ್ಲದೇ ಬಾಲ್ ಪಡೆದುಕೊಂಡು ಹೋಗಿರುವುದು ನಿವೃತ್ತಿಯ ಮಾತುಗಳಿಗೆ ಪುಕ್ಕ ಬಂದಂತಾಗಿದೆ. ವಿಶ್ವಕಪ್ ವರೆಗೆ ಧೋನಿ ನಿವೃತ್ತಿಯಾಗುವುದಿಲ್ಲ ಎಂಬ ಮಾತುಗಳು ಹಿಂದೆ ಕೇಳಿಬಂದಿದ್ದರೂ, ಅವರ ಇತ್ತೀಚೆಗಿನ ಬ್ಯಾಟಿಂಗ್ ಬಗ್ಗೆ ಕೇಳಿಬರುತ್ತಿರುವ ಟೀಕೆಯಿಂದಾಗಿ ಅವರು ನಿವೃತ್ತಿಯಾಗಲು ನಿರ್ಧರಿಸಿರಬಹುದೇ ಎಂಬ ಅನುಮಾನಗಳು ಮೂಡಿವೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.             

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಅವಕಾಶ ಸಿಗ್ತಿಲ್ಲ... ಏಕಾಂಗಿಯಾಗಿ ನಿಂತಿದ್ದ ವೈಭವ್ ಸೂರ್ಯವಂಶಿ ನೋಡಿ ಸಂಜು ಸ್ಯಾಮ್ಸನ್ ಮಾಡಿದ್ದೇನು ನೋಡಿ Video

ಥೇಟ್ ತಂದೆಗೆ ತಕ್ಕ ಮಗ.. ಸಮಿತ್ ದ್ರಾವಿಡ್ ರ ಒಂದೊಂದು ಶಾಟ್ ನೋಡ್ತಿದ್ರೆ ನಿಮಗೆ ರಾಹುಲ್ ದ್ರಾವಿಡ್ ನೆನಪಾಗೇ ಆಗ್ತಾರೆ Video

ನೀವು ಅವಕಾಶ ಕೊಡದೇ ಇದ್ರೆ ಏನಂತೆ, ನಮಗೆ ವೈಭವ್ ಸೂರ್ಯವಂಶಿ ಸೂಪರ್ ಸ್ಟಾರ್ ಎಂದ ಫ್ಯಾನ್ಸ್ Video

IND vs ENG: ಏನೋ ಮಾಡ್ತಿದ್ದೀಯಾ ಇಶಾನ್... ಮೈದಾನದಲ್ಲೇ ಕಿತ್ತಾಡಿದ ಅಭಿಷೇಕ್ ಶರ್ಮಾ Video

ENG VS IND T20: ಈ ಬಾರಿಯಾದರೂ ವೈಭವ್ ಸೂರ್ಯವಂಶಿ ಆಟ ನೋಡಬೇಕೆಂದು ಕಾದಿದ್ದವರಿಗೆ ಇಂದು ನಿರಾಸೆ

ಮುಂದಿನ ಸುದ್ದಿ
Show comments