ಉಗ್ರ ಪೀಡಿತ ಕಾಶ್ಮೀರ ಪ್ರದೇಶದಲ್ಲಿ ಕರ್ತವ್ಯ ನಿರತರಾಗಿರುವ ಧೋನಿ

ಗುರುವಾರ, 1 ಆಗಸ್ಟ್ 2019 (10:36 IST)
ಜಮ್ಮು ಕಾಶ್ಮೀರ: ಭಾರತೀಯ ಕ್ರಿಕೆಟ್ ರಂಗದ ದಿಗ್ಗಜ ಕ್ರಿಕೆಟಿಗ ಧೋನಿ ಈಗ ಸೇನೆಯಲ್ಲಿ ಅಪ್ಪಟ ಯೋಧನಾಗಿ ಕರ್ತವ್ಯ ನಿರ್ವಹಿಸುತ್ತಿರುವುದು ಎಲ್ಲರಿಗೂ ಗೊತ್ತಿರುವ ವಿಚಾರ.


ನಿನ್ನೆಯಿಂದ ಧೋನಿ ವಿಕ್ಟರ್ ಫೋರ್ಸ್ ನಲ್ಲಿ ಕಾವಲು, ಗಸ್ತು ತಿರುಗುವ ಕೆಲಸ ಮಾಡುತ್ತಿದ್ದಾರೆ. ಅದೂ ಅತೀ ಹೆಚ್ಚು ಉಗ್ರ ಪೀಡಿತ ಪ್ರದೇಶವಾಗಿರುವ ದಕ್ಷಿಣ ಕಾಶ್ಮೀರದಲ್ಲಿ ಎನ್ನುವುದು ವಿಶೇಷ!

ಇಲ್ಲಿ ವಿಶೇಷ ಭದ್ರತೆಗಳಿಲ್ಲದೆ ಸಾಮಾನ್ಯ ಯೋಧನಂತೆ ಧೋನಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ ಎಂದು ಸೇನಾ ಮೂಲಗಳಿಂದ ತಿಳಿದುಬಂದಿದೆ. 15 ದಿನಗಳ ಕಾಲ ಲೆಫ್ಟಿನೆಂಟ್ ಕರ್ನಲ್ ಹುದ್ದೆಯ ಧೋನಿ ಕರ್ತವ್ಯ ನಿರ್ವಹಿಸಲಿದ್ದಾರೆ.

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ವಿರಾಟ್ ಕೊಹ್ಲಿ ಜತೆಗಿನ ವೈಮನಸ್ಯದ ರೂಮರ್ ಗೆ ತಕ್ಕ ಉತ್ತರ ಕೊಟ್ಟ ರೋಹಿತ್ ಶರ್ಮಾ