Select Your Language

Notifications

webdunia
webdunia
webdunia
webdunia

ಮೈದಾನ ಸಿಬ್ಬಂದಿಯನ್ನು ಖುಷಿಪಡಿಸಿದ ಧೋನಿ, ರೈನಾ, ಹರ್ಭಜನ್ ಸಿಂಗ್

ಮೈದಾನ ಸಿಬ್ಬಂದಿಯನ್ನು ಖುಷಿಪಡಿಸಿದ ಧೋನಿ, ರೈನಾ, ಹರ್ಭಜನ್ ಸಿಂಗ್
ಮುಂಬೈ , ಗುರುವಾರ, 4 ಏಪ್ರಿಲ್ 2019 (10:10 IST)
ಮುಂಬೈ: ಒಂದು ಪಂದ್ಯ ಅದ್ಭುತ ಎನಿಸಿಕೊಳ್ಳಲು ಅಲ್ಲಿ ಕ್ರಿಕೆಟಿಗರಷ್ಟೇ ಮೈದಾನ ಸಿಬ್ಬಂದಿಗಳ ಶ್ರಮವೂ ಇರುತ್ತದೆ. ಆದರೆ ಸಿಬ್ಬಂದಿಗಳ ಶ್ರಮ ಗುರುತಿಸುವವರು ತುಂಬಾ ಕಡಿಮೆ.


ಆದರೆ ಮುಂಬೈ ಇಂಡಿಯನ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ನಡುವಿನ ಮಹತ್ವದ ಪಂದ್ಯಕ್ಕೆ ಮೊದಲು ಉಭಯ ತಂಡದ ಪ್ರಮುಖ ಕ್ರಿಕೆಟಿಗರು ಮೈದಾನದ ಸಿಬ್ಬಂದಿಯನ್ನು ಖುಷಿಪಡಿಸುವ ಕೆಲಸ ಮಾಡಿದ್ದಾರೆ.

ಅವರ ಇಷ್ಟದಂತೇ ಅವರೊಂದಿಗೆ ಬೆರೆತು ಕ್ರಿಕೆಟಿಗರಾದ ಧೋನಿ, ಹರ್ಭಜನ್ ಸಿಂಗ್, ಸುರೇಶ್ ರೈನಾ ಮತ್ತು ಜಹೀರ್ ಖಾನ್ ಫೋಟೋಗೆ ಪೋಸ್ ನೀಡಿದ್ದಾರೆ. ಈ ಫೋಟೋಗಳನ್ನು ಚೆನ್ನೈ ತಂಡ ತನ್ನ ಟ್ವಿಟರ್ ಪೇಜ್ ನಲ್ಲಿ ಪ್ರಕಟಿಸಿದ್ದು, ‘ಮಣ್ಣಿನ ಮಕ್ಕಳೊಂದಿಗೆ ಪೋಸ್’ ಎಂದು ಅಡಿಬರಹ ನೀಡಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

Share this Story:

Follow Webdunia kannada

ಮುಂದಿನ ಸುದ್ದಿ

ನಮಗೆ ಟೈಮ್ ಇಲ್ಲ, ಇನ್ನೆಲ್ಲಾ ಪಂದ್ಯ ಗೆಲ್ಬೇಕು: ಆರ್ ಸಿಬಿ ಬೌಲಿಂಗ್ ಕೋಚ್ ಆಶಿಷ್ ನೆಹ್ರಾ