Select Your Language

Notifications

webdunia
webdunia
webdunia
webdunia

ಮತ್ತೆ ಜೊತೆಯಾಗಿ ಆಡಲಿದ್ದಾರೆ ಕೊಹ್ಲಿ-ಧೋನಿ! ಆದರೆ ಭಾರತಕ್ಕಾಗಿ ಅಲ್ಲ!

ಮತ್ತೆ ಜೊತೆಯಾಗಿ ಆಡಲಿದ್ದಾರೆ ಕೊಹ್ಲಿ-ಧೋನಿ! ಆದರೆ ಭಾರತಕ್ಕಾಗಿ ಅಲ್ಲ!
ಮುಂಬೈ , ಬುಧವಾರ, 29 ಜನವರಿ 2020 (09:11 IST)
ಮುಂಬೈ: ವಿಶ್ವಕಪ್ ಮುಗಿದ ಮೇಲೆ ಧೋನಿ-ಕೊಹ್ಲಿ ಮೈದಾನದಲ್ಲಿ ಕಾಣಿಸಿಕೊಂಡಿದ್ದೇ ಇಲ್ಲ. ಆದರೆ  ಈ ಇಬ್ಬರು ದಿಗ್ಗಜ ಆಟಗಾರರು ಜತೆಯಾಗಿ ಆಡಲಿದ್ದಾರೆ ಎಂಬ ಸುದ್ದಿ ಬಂದಿದೆ.


ಆದರೆ ಇವರು ಆಡಲಿರುವುದು ಭಾರತ ತಂಡದ ಪರ ಅಂತೂ ಅಲ್ಲ. ಈ ವರ್ಷ ಐಪಿಎಲ್ ಆರಂಭಕ್ಕೆ ಮುನ್ನ ಎಲ್ಲಾ ಫ್ರಾಂಚೈಸಿಗಳ ಸ್ಟಾರ್ ಗಳನ್ನೊಳಗೊಂಡಂತೆ ಆಲ್ ಸ್ಟಾರ್ ಪಂದ್ಯವೊಂದನ್ನು ಆಯೋಜಿಸಲಾಗುತ್ತದೆ. ಈ ಪಂದ್ಯದಲ್ಲಿ ಒಟ್ಟುಗೂಡಿಸುವ ಹಣವನ್ನು ಚ್ಯಾರಿಟಿಗೆ ನೀಡಲಾಗುತ್ತದೆ. ಈ ಪಂದ್ಯದಲ್ಲಿ ಧೋನಿ-ಕೊಹ್ಲಿ ಮತ್ತೆ ಜೊತೆಯಾಗಿ ಆಡುವ ಸಾಧ‍್ಯತೆಯಿದೆ.

ಈ ಪಂದ್ಯದ ಬಗ್ಗೆ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ನೇತೃತ್ವದ ಐಪಿಎಲ್ ಸಮಿತಿ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ. ಅದರಂತೆ ಒಂದು ಒಳ್ಳೆಯ ಉದ್ದೇಶಕ್ಕೆ ಎಲ್ಲಾ ಸ್ಟಾರ್ ಆಟಗಾರರು ಪಂದ್ಯವಾಡುವ ಸಾಧ‍್ಯತೆಯಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಧೋನಿ ದಾಖಲೆ ಮುರಿಯಲು ವಿರಾಟ್ ಕೊಹ್ಲಿಗೆ ಬೇಕು 25 ರನ್