ಅಂದು ಗಂಗೂಲಿ, ದ್ರಾವಿಡ್, ಗಂಭೀರ್ ಗೆ ಮಾಡಿದ್ದೇ ಧೋನಿಗೆ ಇಂದು ತಿರುಗುಬಾಣವಾಯಿತೇ?!

Webdunia
ಭಾನುವಾರ, 21 ಜುಲೈ 2019 (08:57 IST)
ಮುಂಬೈ: ಹಣ್ಣೆಲೆ ಉದುರಿದಾಗ ಕಾಯಿ ಎಲೆ ನಕ್ಕಿತಂತೆ.. ಟೀಂ ಇಂಡಿಯಾದ ಹಿರಿಯ ಕ್ರಿಕೆಟಿಗರ ಸ್ಥಿತಿಯೂ ಇದೇ ಆಗಿದೆ. ಹಿಂದೆ ಗಂಗೂಲಿಗೂ ಇದೇ ಆಗಿತ್ತು. ಈಗ ಧೋನಿಯೂ ಅದೇ ಸ್ಥಿತಿಯಲ್ಲಿದ್ದಾರೆ.


ಗಂಗೂಲಿ ತಾವು ನಾಯಕರಾದಾಗ ಯುವ ಆಟಗಾರರಿಗೆ ಹೆಚ್ಚಿನ ಅವಕಾಶ ನೀಡುವ ನಿಟ್ಟಿನಲ್ಲಿ ಹಿರಿಯ ಆಟಗಾರರನ್ನು ನಿರ್ಲಕ್ಷಿಸಿದರು. ಕೊನೆಗೆ ಅವರ ವೃತ್ತಿ ಜೀವನದ ಸಂಧ್ಯಾ ಕಾಲದಲ್ಲಿ ನಾಯಕನ ಪಟ್ಟ ಕೈತಪ್ಪಿದ್ದೂ ಅಲ್ಲದೆ, ಸ್ಥಾನ ಪಡೆಯಲೂ ಹೆಣಗಾಡಿದರು.

ಈಗ ಧೋನಿಯೂ ಅದೇ ಸ್ಥಿತಿಯಲ್ಲಿದ್ದಾರೆ. ತಾವು ನಾಯಕರಾಗಿದ್ದಾಗ ದ್ರಾವಿಡ್, ‍ಗಂಗೂಲಿಯಂತಹ ಹಿರಿಯ ಆಟಗಾರರು ಫೀಲ್ಡಿಂಗ್ ನಲ್ಲಿ ಚುರುಕಾಗಿಲ್ಲ ಎಂದು ಅವರನ್ನು ಏಕದಿನ ತಂಡದಿಂದಲೇ ಹೊರಗಿಡುವ ದೊಡ್ಡ ನಿರ್ಧಾರ ಮಾಡಿದರು. ಇದು ತಂಡದ ಭವಿಷ್ಯದ ದೃಷ್ಟಿಯಿಂದ ತಕ್ಕುದಾಗಿಯೇ ಇತ್ತೂ ಕೂಡಾ.

ಯಾವುದೇ ಕ್ರಿಕೆಟ್ ತಂಡವೂ ಭವಿಷ್ಯದ ತಂಡವನ್ನು ಕಟ್ಟುವುದು ಮುಖ್ಯ. ಹೀಗಾಗಿ ಗಂಗೂಲಿ ಆಗಲಿ, ಧೋನಿ ಆಗಲಿ ಅಂದು ಯುವ ಆಟಗಾರರನ್ನು ಬೆಳೆಸಿದ್ದಕ್ಕೇ ಸುರೇಶ್ ರೈನಾ, ಯುವರಾಜ್ ಸಿಂಗ್, ಹರ್ಭಜನ್ ಸಿಂಗ್ ರಂತಹ ಆಟಗಾರರು ಇಂದು ಕ್ರಿಕೆಟ್ ನಲ್ಲಿ ತಮ್ಮದೇ ಛಾಪು ಮೂಡಿಸಲು ಸಾಧ್ಯವಾಗಿದ್ದು.

ಆದರೆ ದುರಾದೃಷ್ಟವೆಂದರೆ ಅಂದು ಆ ಹಿರಿಯ ಕ್ರಿಕೆಟಿಗರು ಅನುಭವಿಸಿದ ಸಂಕಟವನ್ನು ಇಂದು ಧೋನಿಯೂ ಅನುಭವಿಸುತ್ತಿದ್ದಾರೆ. ಟೀಂ ಇಂಡಿಯಾವನ್ನು ಯಶಸ್ಸಿನ ತುತ್ತ ತುದಿಗೆ ಕೊಂಡೊಯ್ದ ನಾಯಕ ಈಗ ವಯಸ್ಸಾಯಿತು ಎಂಬ ಕಾರಣಕ್ಕೆ ನಿವೃತ್ತಿಯಾಗಬೇಕೆಂಬ ಒತ್ತಡದಲ್ಲಿದ್ದಾರೆ. ಅವರಿಗೆ ಇದು ಇಷ್ಟವಿದ್ದೋ, ಇಲ್ಲದೆಯೋ ಅಂತೂ ಈ ಒತ್ತಡವನ್ನಂತೂ ಎದುರಿಸುತ್ತಿದ್ದಾರೆ. ಈಗ ತಂಡದ ಅವಿಭಾಜ್ಯ ಅಂಗವಾಗಿರುವ ವಿರಾಟ್ ಕೊಹ್ಲಿಯೂ ಇದೇ ಪರಿಸ್ಥಿತಿಯನ್ನು ಮುಂದೊಂದು ದಿನ ಎದುರಿಸಬಹುದು. ಆದರೆ ಹಿರಿಯ ಆಟಗಾರರಿಗೆ ಗೌರವದ ಬೀಳ್ಕೊಡುಗೆ ನೀಡುವ ಔದಾರ್ಯವನ್ನು ಬಿಸಿಸಿಐ ಮಾಡಬೇಕಷ್ಟೇ.

ಇಂದು ವೆಸ್ಟ್ ಇಂಡೀಸ್ ವಿರುದ್ಧದ ಸರಣಿಗೆ ಟೀಂ ಇಂಡಿಯಾ ಆಯ್ಕೆ ನಡೆಯಲಿದ್ದು, ಧೋನಿ ಆಯ್ಕೆಯಾಗುತ್ತಾರೋ ಇಲ್ಲವೋ ಎಂಬುದೇ ದೊಡ್ಡ ಕುತೂಹಲವಾಗಿ ಉಳಿದಿದೆ.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಶ್ರೇಯಸ್ ಅಯ್ಯರ್‌ ತಂದೆಯಿಂದಲೇ ಬಂತು ಅಭಿಮಾನಿಗಳಿಗೆ ಸಂದೇಶ, ಇಲ್ಲಿದೆ ಮಾಹಿತಿ

ರೋಹಿತ್, ವಿರಾಟ್ ಕೊಹ್ಲಿ ಟೀಕಕಾರರಿಗೆ ಚಾಟಿ ಬೀಸಿದ ಎಬಿ ಡಿಲಿವಿಯರ್ಸ್‌

ಗಾಯಗೊಂಡ ಪ್ರತೀಕಾ ರಾವಲ್ ಜಾಗಕ್ಕೆ ಸ್ಥಾನ ಗಿಟ್ಟಿಸಿಕೊಂಡ ಶಫಾಲಿ ವರ್ಮಾ

ಶ್ರೇಯಸ್ ಅಯ್ಯರ್ ಪೋಷಕರ ಆಗಮನಕ್ಕಾಗಿ ಕಾಯುತ್ತಿರುವ ಬಿಸಿಸಿಐ, ಯಾಕೆ ಗೊತ್ತಾ

ಶ್ರೇಯಸ್ ಅಯ್ಯರ್ ಹೇಗಿದ್ದಾರೆ ಎಂದಿದ್ದಕ್ಕೆ ಸೂರ್ಯಕುಮಾರ್ ಯಾದವ್ ಹೇಳಿದ್ದೇನು

ಮುಂದಿನ ಸುದ್ದಿ
Show comments