ರಾಜಸ್ಥಾನ್ ರಾಯಲ್ಸ್ ನಾಯಕ ಅಜಿಂಕ್ಯಾ ರೆಹಾನೆಗೇ ಗಾಳ ಹಾಕುತ್ತಿರುವ ಡೆಲ್ಲಿ ಕ್ಯಾಪಿಟಲ್ಸ್

Webdunia
ಮಂಗಳವಾರ, 13 ಆಗಸ್ಟ್ 2019 (09:00 IST)
ನವದೆಹಲಿ: ಐಪಿಎಲ್ ಗೆ ಇನ್ನೂ ಸಾಕಷ್ಟು ಸಮಯವಿದೆ. ಹಾಗಿದ್ದರೂ ತಮ್ಮ ತಮ್ಮ ತಂಡಕ್ಕೆ ಅತ್ಯುತ್ತಮ ಆಟಗಾರರನ್ನು ಸೆಳೆಯಲು ಫ್ರಾಂಚೈಸಿಗಳು ಪ್ರಯತ್ನ ಆರಂಭಿಸಿವೆ.


ಡೆಲ್ಲಿ ಕ್ಯಾಪಿಟಲ್ಸ್ ಈ ಬಾರಿ ಡೆಕ್ಕಾನ್ ಚಾರ್ಜರ್ಸ್ ತಂಡದ ಶಿಖರ್ ಧವನ್ ರನ್ನು ಕರೆಸಿಕೊಂಡಿತ್ತು. ಇದರೊಂದಿಗೆ ಡೆಲ್ಲಿ ತಂಡದಲ್ಲಿ ರಿಷಬ್ ಪಂತ್, ಧವನ್ ಸೇರಿದಂತೆ ಸ್ಪೋಟಕ ಬ್ಯಾಟ್ಸ್ ಮನ್ ಗಳ ದಂಡೇ ಸೇರಿತ್ತು.

ಈ ಬಾರಿ ಡೆಲ್ಲಿ ಕ್ಯಾಪಿಟಲ್ಸ್ ದೊಡ್ಡ ಮೀನಿಗೇ ಬಲೆ ಹಾಕಿದೆ. ರಾಜಸ್ಥಾನ್ ರಾಯಲ್ಸ್ ತಂಡದ ನಾಯಕರಾಗಿದ್ದ ಅಜಿಂಕ್ಯಾ ರೆಹಾನೆಯನ್ನು ತಂಡಕ್ಕೆ ಸೆಳೆದುಕೊಳ್ಳಲು ಡೆಲ್ಲಿ ಪ್ರಯತ್ನ ನಡೆಸುತ್ತಿದೆ. ಕಳೆದ ಆವೃತ್ತಿಯಲ್ಲಿ ಧವನ್ ವೈಯಕ್ತಿಕವಾಗಿ ಉತ್ತಮ ನಿರ್ವಹಣೆ ತೋರಿದರೂ ಅವರ ನಾಯಕತ್ವದಲ್ಲಿ ತಂಡದ ಪ್ರದರ್ಶನ ಚೆನ್ನಾಗಿರಲಿಲ್ಲ ಎಂಬ ಕಾರಣಕ್ಕೆ ಐಪಿಎಲ್ ಕೂಟದ ಮಧ್ಯದಲ್ಲಿಯೇ ನಾಯಕತ್ವ ಕಳೆದುಕೊಂಡಿದ್ದರು.

ಇದೀಗ ಡೆಲ್ಲಿ ರೆಹಾನೆಯನ್ನು ತಂಡಕ್ಕೆ ಸೆಳೆದುಕೊಳ್ಳಲು ಮಾತುಕತೆ ನಡೆಸುತ್ತಿದೆಯಂತೆ. ಎಲ್ಲವೂ ಅಂತಿಮವಾಗಿಲ್ಲ. ಮಾತುಕತೆ ಹಂತದಲ್ಲಿದೆಯಷ್ಟೇ. ಸದ್ಯದಲ್ಲೇ ಏನೆಂದು ತಿಳಿದುಬರಲಿದೆ ಎಂದು ಡೆಲ್ಲಿ ತಂಡದ ಮೂಲಗಳು ಹೇಳಿವೆ.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

INDW vs SAW: ಭಾರತ ಮಹಿಳೆಯರ ಚೊಚ್ಚಲ ವಿಶ್ವಕಪ್ ಗೆಲುವು, ರೋಹಿತ್ ಶರ್ಮಾ ಕಣ್ಣೀರು

INDW vs SAW: ವರ್ಮ, ಶರ್ಮ ಕಮಾಲ್, ಭಾರತ ಮಹಿಳೆಯರಿಗೆ ಚೊಚ್ಚಲ ವಿಶ್ವಕಪ್

IND vs AUS T20: ಕೊನೆಗೂ ಲಯಕ್ಕೆ ಬಂದ ಭಾರತ, ಸರಣಿ ಸಮಬಲ

ಶ್ರೀಕಾಕುಳಂ ಕಾಲ್ತುಳಿತ: ವೆಂಕಟೇಶ್ವರ್ ಸ್ವಾಮಿ ದೇವಸ್ಥಾನಕ್ಕೆ ಇಂದು ಭಕ್ತರಿಗಿಲ್ಲ ಎಂಟ್ರಿ

INDW vs SAW Final:ಫೈನಲ್ ಪಂದ್ಯಾಟಕ್ಕೆ ವರುಣನ ಆಗಮನ, ಟಾಸ್‌ ವಿಳಂಬ

ಮುಂದಿನ ಸುದ್ದಿ
Show comments