ವಿಶ್ವಕಪ್ ತಂಡದಿಂದ ತಮ್ಮ ಕಡೆಗಣಿಸಿದ್ದರ ಬಗ್ಗೆ ಕ್ರಿಕೆಟಿಗ ಅಜಿಂಕ್ಯಾ ರೆಹಾನೆ ಹೇಳಿದ್ದು ಹೀಗೆ!

ಸೋಮವಾರ, 12 ಆಗಸ್ಟ್ 2019 (09:11 IST)
ಮುಂಬೈ: ಟೀಂ ಇಂಡಿಯಾ ಟೆಸ್ಟ್ ತಂಡದ ಉಪನಾಯಕರಾಗಿರುವ ಅಜಿಂಕ್ಯಾ ರೆಹಾನೆ, ಇತ್ತೀಚೆಗಷ್ಟೇ ಮುಕ್ತಾಯವಾದ ವಿಶ್ವಕಪ್ ತಂಡಕ್ಕೆ ಆಯ್ಕೆಯಾಗಿರಲಿಲ್ಲ. ಈ ಬಗ್ಗೆ ಅವರು ಕಾರ್ಯಕ್ರಮವೊಂದರಲ್ಲಿ ಪ್ರತಿಕ್ರಿಯಿಸಿದ್ದಾರೆ.


ವಿಶ್ವಕಪ್ ತಂಡದಿಂದ ತಮ್ಮನ್ನು ಕಡೆಗಣಿಸಿದ್ದ ವೇಳೆ ತಾನು ಕೌಂಟಿ ಕ್ರಿಕೆಟ್ ನಲ್ಲಿ ಗಮನ ಕೇಂದ್ರೀಕರಿಸಿದ್ದೆ. ವಿಶ್ವಕಪ್ ಒಂದೇ ಕ್ರಿಕೆಟಿಗರಿಗೆ ಅಂತಿಮವಲ್ಲ ಎಂದಿದ್ದಾರೆ.

‘ಆ ವಿಶ್ವಕಪ್ ಒಂದೇ ಕ್ರಿಕೆಟಿಗರಿಗೆ ಅಂತಿಮವಲ್ಲ. ಬಹುಶಃ ನಾನು ಮುಂದಿನ ವಿಶ್ವಕಪ್ ಗೆ ತಯಾರಾಗುತ್ತಿದ್ದೇನೆ. ಈಗ ವಿಶ್ವಕಪ್ ಟೆಸ್ಟ್ ಚಾಂಪಿಯನ್ ಶಿಪ್ ಬರುತ್ತಿದೆ. ಅದರ ಬಗ್ಗೆ ಮಾತ್ರ ನನ್ನ ಗಮನ’ ಎಂದು ರೆಹಾನೆ ಹೇಳಿಕೊಂಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ವಿರಾಟ್ ಕೊಹ್ಲಿ ವಿಶ್ವದಾಖಲೆಯ ಜತೆಗೆ ಟೀಂ ಇಂಡಿಯಾಗೆ ಗೆಲುವಿನ ನಗೆ