ಮೆಲ್ಬೋರ್ನ್: ಕ್ರಿಕೆಟ್ ನಲ್ಲಿ ವೀರೇಂದ್ರ ಸೆಹ್ವಾಗ್ ಬಿಟ್ಟರೆ, ಅವರಂತೇ ಆಡುವ ಇನ್ನೊಬ್ಬ ಕ್ರಿಕೆಟರ್ ಎಂದರೆ, ಆಸ್ಟ್ರೇಲಿಯಾದ ಡೇವಿಡ್ ವಾರ್ನರ್. ಸೆಹ್ವಾಗ್ ನಂತೇ ಟೆಸ್ಟ್ ಕ್ರಿಕೆಟ್ ನಲ್ಲೂ ಏಕದಿನ ಶೈಲಿಯಲ್ಲಿ ಆಡುವ ವಾರ್ನರ್, ಮೊದಲ ಅವಧಿಯಲ್ಲೇ ಶತಕ ಪೂರೈಸಿದ ವಿಶೇಷ ದಾಖಲೆ ಮಾಡಿದ್ದಾರೆ.
ಪಾಕಿಸ್ತಾನದ ವಿರುದ್ಧ ಸಿಡ್ನಿಯಲ್ಲಿ ನಡೆಯುತ್ತಿರುವ ಮೂರನೇ ಟೆಸ್ಟ್ ಪಂದ್ಯದಲ್ಲಿ ವಾರ್ನರ್ ಮೊದಲ ದಿನ ಊಟದ ವಿರಾಮದ ಮೊದಲೇ ಶತಕ ಪೂರೈಸಿದ ಐದನೇ ಬ್ಯಾಟ್ಸ್ ಮನ್ ಎಂಬ ಗೌರವಕ್ಕೆ ಪಾತ್ರರಾದರು. 113 ರನ್ ಗಳಿಸಿ ಔಟಾದ ವಾರ್ನರ್ 78 ಎಸೆತಗಳಲ್ಲಿ ಶತಕ ಪೂರೈಸಿದ್ದರು. ಇದರಲ್ಲಿ 17 ಬೌಂಡರಿ ಸೇರಿತ್ತು.
ವಿಶೇಷವೆಂದರೆ 1976 ರಲ್ಲಿ ಪಾಕಿಸ್ತಾನದ ಮಾಜಿದ್ ಖಾನ್ ಎಂಬ ಬ್ಯಾಟ್ಸ್ ಮನ್ ಕೊನೆಯದಾಗಿ ಈ ದಾಖಲೆ ಮಾಡಿದ್ದರು. ಅವರ ಹಿಂದೆ ಇನ್ನೂ ಮೂವರು ಈ ದಾಖಲೆ ಮಾಡಿದ್ದರು. ಟ್ವಿಟರ್ ನಲ್ಲಂತೂ ಈ ಆಧುನಿಕ ಸೆಹ್ವಾಗ್ ನ ಆಟಕ್ಕೆ ಹಲವು ತಮಾಷೆ ಟ್ವೀಟ್ ಗಳು ಬಂದಿವೆ. ಅದರಲ್ಲೂ ಕಮೆಂಟೇಟರ್ ಮೈಕ್ ಥೋರ್ಪೆ “ನಾನು ಇನ್ನೂ ಡ್ರೆಸ್ ಕೂಡಾ ಮಾಡಿಯಾಗಿಲ್ಲ. ಅಷ್ಟು ಬೇಗ ಶತಕವಾಯಿತಾ? ಊಟದ ಮೊದಲು ಏನು ತಿಂದಿದ್ದಿರಿ” ಎಂದು ತಮಾಷೆಯಾಗಿ ಕೇಳಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ