ಮಾಜಿ ಕ್ರಿಕೆಟಿಗ ರಾಬಿನ್ ಸಿಂಗ್ ಕಾರ್ ಜಪ್ತಿ ಮಾಡಿದ ಪೊಲೀಸರು

ಶುಕ್ರವಾರ, 26 ಜೂನ್ 2020 (09:09 IST)
ಚೆನ್ನೈ: ಲಾಕ್ ಡೌನ್ ನಿಯಮ ಉಲ್ಲಂಘಿಸಿದ ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ರಾಬಿನ್ ಸಿಂಗ್ ಕಾರನ್ನು ಚೆನ್ನೈ ಪೊಲೀಸರು ಜಪ್ತಿ ಮಾಡಿದ್ದಾರೆ.

 

ಪಾಸ್ ಇಲ್ಲದೇ ತರಕಾರಿ ತರಲು ಅಡ್ಯಾರ್ ನಿಂದ ಉತ್ತಾಂಡಿಗೆ ತೆರಳುತ್ತಿದ್ದ ರಾಬಿನ್ ಸಿಂಗ್ ಕಾರನ್ನು ಪೊಲೀಸರು ಸೀಝ್ ಮಾಡಿದ್ದಾರೆ.

ಈ ವೇಳೆ ರಾಬಿನ್ ಸಿಂಗ್ ಯಾವುದೇ ಕಿರಿಕ್ ಮಾಡಿಲ್ಲ. ಕಾರು ಜಪ್ತಿ ಮಾಡಲು ಸಹಕರಿಸಿದರು ಎಂದು ಪೊಲೀಸರು ಹೇಳಿದ್ದಾರೆ. ಸದ್ಯದಲ್ಲಿ ಜಾರಿಯಲ್ಲಿರುವ ಲಾಕ್ ಡೌನ್ ನಿಯಮದ ಪ್ರಕಾರ ಅಗತ್ಯ ವಸ್ತುಗಳನ್ನು ಖರೀದಿಸಲು ಜನರು ಎರಡು ಕಿ.ಮೀ. ಒಳಗಿನ ಸ್ಥಳಗಳಿಗೆ ತೆರಳಬೇಕಾದರೆ ಕಾರು ಬಳಸುವಂತಿಲ್ಲ.

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಅನುಷ್ಕಾ ಶರ್ಮಾಳ ಬುಲ್ ಬುಲ್ ನೋಡಿ ವಿರಾಟ್ ಹೇಳಿದ್ದೇನು?