Select Your Language

Notifications

webdunia
webdunia
webdunia
webdunia

ಗೆಳತಿಯ ಖಾಸಗಿ ಫೋಟೋ ಫೇಸ್ ಬುಕ್ ನಲ್ಲಿ ಪ್ರಕಟಿಸಿ ಸಿಕ್ಕಿಬಿದ್ದ ಕ್ರಿಕೆಟಿಗ

ಗೆಳತಿಯ ಖಾಸಗಿ ಫೋಟೋ ಫೇಸ್ ಬುಕ್ ನಲ್ಲಿ ಪ್ರಕಟಿಸಿ ಸಿಕ್ಕಿಬಿದ್ದ ಕ್ರಿಕೆಟಿಗ
Dhaka , ಸೋಮವಾರ, 23 ಜನವರಿ 2017 (10:04 IST)
ಢಾಕಾ:  ಬಾಂಗ್ಲಾದೇಶ ಕ್ರಿಕೆಟಿಗರಿಬ್ಬರು ಇತ್ತೀಚೆಗೆ ಹೋಟೆಲ್ ಕೊಠಡಿಗೆ ಚೆಲುವೆಯರನ್ನು ಕರೆಸಿಕೊಂಡು ಸಿಕ್ಕಿಬಿದ್ದಿದ್ದರು. ಇದೀಗ ಇದೇ ದೇಶದ ಕ್ರಿಕೆಟಿಗನೊಬ್ಬ ಗೆಳತಿಯ ಜತೆ ಕಳೆದ ಖಾಸಗಿ ಕ್ಷಣಗಳ ಫೋಟೋವನ್ನು ಫೇಸ್ ಬುಕ್ ನಲ್ಲಿ ಪ್ರಕಟಿಸಿ ಪೊಲೀಸರ ಅತಿಥಿಯಾಗಿದ್ದಾನೆ.
 

ಅರ್ಫಾತ್ ಸನ್ನಿ ಎಂಬ ಬಾಂಗ್ಲಾ ಕ್ರಿಕೆಟಿಗ ಗೆಳತಿಯ ಹೆಸರಿನಲ್ಲಿ ನಕಲಿ ಫೇಸ್ ಬುಕ್ ಅಕೌಂಟ್ ತೆರೆದು ತಾವಿಬ್ಬರೂ ಖಾಸಗಿಯಾಗಿ ಕಳೆದ ಕ್ಷಣವೊಂದರ ಫೋಟೋವನ್ನು ಪ್ರಕಟಿಸಿದ್ದ. ಈ ಹಿನ್ನಲೆಯಲ್ಲಿ ಆತನ ಗೆಳತಿ ಪೊಲೀಸರಿಗೆ ದೂರು ನೀಡಿದ್ದರು.

ಹೀಗಾಗಿ ಇದರಿಂದ ತನಗೆ ಮಾನ ನಷ್ಟವಾಗಿದೆ ಮತ್ತು ಗಂಭೀರ ಅಪರಾಧವೆಂಬ ಹಿನ್ನಲೆಯಲ್ಲಿ ಆಕೆ ಪೊಲೀಸರಿಗೆ ದೂರು ನೀಡಿದ್ದಳು. ಅದರಂತೆ ಕ್ರಿಕೆಟಿಗ ಈಗ ಪೊಲೀಸರ ಅತಿಥಿಯಾಗಿದ್ದಾನೆ. ಸ್ಪಿನ್ ಬೌಲರ್ ಆಗಿರುವ ಅರ್ಫಾತ್ ಇದುವರೆಗೆ ಬಾಂಗ್ಲಾ ಪರ 16 ಏಕದಿನ ಪಂದ್ಯಗಳನ್ನಾಡಿದ್ದಾನೆ. ಕಳೆದ ವರ್ಷ ಅಪ್ರಾಪ್ತ ಬಾಲಕಿಗೆ ಕಿರುಕುಳ ನೀಡಿದ ಹಿನ್ನಲೆಯಲ್ಲಿ ಕ್ರಿಕೆಟಿಗ ಹಾಗೂ ಆತನ ಪತ್ನಿ ಎರಡು ತಿಂಗಳು ಸೆರೆವಾಸ ಅನುಭವಿಸಿದ್ದರು. ಇದು ಈತನ ಎರಡನೇ ಪ್ರಕರಣ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಕೇದಾರ್ ಜಾದವ್ ಕೂಲ್ ಆಗಿರಲು ಕಾರಣ ಯಾರು ಗೊತ್ತಾ?