Select Your Language

Notifications

webdunia
webdunia
webdunia
webdunia

ಕೇದಾರ್ ಜಾದವ್ ಕೂಲ್ ಆಗಿರಲು ಕಾರಣ ಯಾರು ಗೊತ್ತಾ?

ಕೇದಾರ್ ಜಾದವ್ ಕೂಲ್ ಆಗಿರಲು ಕಾರಣ ಯಾರು ಗೊತ್ತಾ?
Kolkotta , ಸೋಮವಾರ, 23 ಜನವರಿ 2017 (09:49 IST)
ಕೋಲ್ಕೊತ್ತಾ:  ಭಾರತ ತಂಡದಲ್ಲಿ ಈಗ ಮತ್ತೊಬ್ಬ ಕೂಲ್ ಪ್ಲೇಯರ್ ನ ಉದಯವಾಗಿದೆ. ಅವರೇ ಯುವ ಆಲ್ ರೌಂಡರ್ ಕೇದಾರ್ ಜಾದವ್.  ಎಂತಹ ಒತ್ತಡ ಸನ್ನಿವೇಶದಲ್ಲೂ ಇಷ್ಟೊಂದು ಕೂಲ್ ಆಗಿರಲು ತಮಗೆ ಪ್ರೇರಣೆ ಯಾರು ಎಂಬುದನ್ನು ಜಾದವ್ ಬಹಿರಂಗಪಡಿಸಿದ್ದಾರೆ.

 
ಅವರು ಬೇರೆ ಯಾರೂ ಅಲ್ಲ. ಮಾಜಿ ನಾಯಕ ಧೋನಿ. ಧೋನಿಯೊಂದಿಗೆ ತಂಡದಲ್ಲಿರುವುದರಿಂದ, ಹೇಗೆ ಒತ್ತಡದಲ್ಲೂ ಕೂಲ್ ಆಗಿರಬೇಕೆಂದು ಕಲಿತೆ. ಇದರಿಂದಾಗಿಯೇ ರೋಚಕ ಪಂದ್ಯದಲ್ಲೂ ಶಾಂತವಾಗಿ ಬ್ಯಾಟಿಂಗ್ ಮಾಡಲು ಸಾಧ್ಯವಾಗುತ್ತಿದೆ ಎಂದು  ಇಂಗ್ಲೆಂಡ್ ವಿರುದ್ಧ ಏಕದಿನ ಪಂದ್ಯದಲ್ಲಿ ಸರಣಿ ಶ್ರೇಷ್ಠ ಪ್ರಶಸ್ತಿ ಪಡೆದ ಜಾದವ್ ಹೇಳಿಕೊಂಡಿದ್ದಾರೆ.

ಜಾದವ್ ತಮ್ಮ ಏಕದಿನ ವೃತ್ತಿ ಜೀವನದ ಎರಡು ಶತಕಗಳನ್ನೂ ಒತ್ತಡದ ಸನ್ನಿವೇಶಗಳಲ್ಲೇ ಮಾಡಿದ್ದಾರೆ. ಇದರಲ್ಲಿ ಒಂದು ಬಾರಿ ಗೆದ್ದಿದ್ದರೆ, ಇನ್ನೊಂದು ಬಾರಿ ನ್ಯೂಜಿಲೆಂಡ್ ವಿರುದ್ಧ ಸ್ವಲ್ಪದರಲ್ಲೇ ಗೆಲುವು ತಪ್ಪಿ ಹೋಗಿತ್ತು. ನಿನ್ನೆ ನಡೆದ ಪಂದ್ಯದಲ್ಲಿ ಕೊನೆಯವರೆಗೂ ಹೋರಾಡಿ ಭಾರತವನ್ನು ಗೆಲುವಿನ ಹೊಸ್ತಿಲಿನೆಡೆ ತಂದು ಜಾದವ್ ಎಡವಿದರು. ಭಾರತವೂ ಸೋತಿತು. ಆದರೂ ತನ್ನ ಆಟದ ಬಗ್ಗೆ ಜಾದವ್ ಗೆ ಹೆಮ್ಮೆಯಿದೆಯಂತೆ.

ನಾಯಕ ವಿರಾಟ್ ಕೊಹ್ಲಿಗೂ ಭಾರತಕ್ಕೆ ಮತ್ತೊಬ್ಬ ಫಿನಿಶರ್ ಸಿಕ್ಕಿದ ಖುಷಿಯಿದೆ. ಚಾಂಪಿಯನ್ಸ್ ಟ್ರೋಫಿ ಮೊದಲು ಭಾರತಕ್ಕೆ ಹಾರ್ದಿಕ್ ಪಾಂಡ್ಯ, ಕೇದಾರ್ ಜಾದವ್ ರಂತಹ ಉತ್ತಮ ಆಟಗಾರರನ್ನು ಸಿಕ್ಕಿದ್ದು ಪ್ಲಸ್ ಪಾಯಿಂಟ್ ಎಂದಿದ್ದಾರೆ ಕೊಹ್ಲಿ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಟೀಂ ಇಂಡಿಯಾ ಆಟಗಾರರಿಗೆ ಶಾರುಖ್ ಖಾನ್ ಸಿನಿಮಾ ಹೆಸರುಗಳು!