Select Your Language

Notifications

webdunia
webdunia
webdunia
webdunia

ಕೋಳಿ ಕೇಳಿ ಮಸಾಲೆ ಅರೆಯುತ್ತಿರುವ ಬಿಸಿಸಿಐ

ಕೋಳಿ ಕೇಳಿ ಮಸಾಲೆ ಅರೆಯುತ್ತಿರುವ ಬಿಸಿಸಿಐ
Mumbai , ಗುರುವಾರ, 6 ಜುಲೈ 2017 (10:34 IST)
ಮುಂಬೈ: ಟೀಂ ಇಂಡಿಯಾಗೆ ನೂತನ ಕೋಚ್ ಆಯ್ಕೆ ಪ್ರಕ್ರಿಯೆ ನಡೆಯುವುದಕ್ಕೆ ಮೊದಲು ವಿರಾಟ್ ಕೊಹ್ಲಿ ಮತ್ತು ಆಟಗಾರರ ಅಭಿಪ್ರಾಯ ಕೇಳಲು ಬಿಸಿಸಿಐ ಸಿಇಒ ರಾಹುಲ್ ಜೋಹ್ರಿ ವಿಂಡೀಸ್ ಗೆ ಪ್ರಯಾಣ ಬೆಳೆಸಿದ್ದಾರೆ.


ಬಿಸಿಸಿಐ ಆಡಳಿತಾಧಿಕಾರಿಗಳ ಸಮ್ಮತದ ಮೇರೆ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ವಿರಾಟ್ ಕೊಹ್ಲಿ ಮತ್ತು ತಂಡದ ಇತರ ಆಟಗಾರರ ಬಳಿ ಕೋಚ್ ಆಯ್ಕೆ ಬಗ್ಗೆ ಸಲಹೆ ಕೇಳಲಿದ್ದಾರೆ. ಆಟಗಾರರ ಮತ್ತು ಕೊಹ್ಲಿ ಅಭಿಪ್ರಾಯವನ್ನು ಜೋಹ್ರಿ ಕ್ರಿಕೆಟ್ ಸಲಹಾ ಸಮಿತಿ ಸದಸ್ಯರಾದ ಗಂಗೂಲಿ, ಸಚಿನ್ ಮತ್ತು ಲಕ್ಷ್ಮಣ್ ಅವರಿಗೆ ರವಾನಿಸಲಿದ್ದಾರೆ.

ಆಟಗಾರರ ಮತ್ತು ನಾಯಕನ ಅಭಿಪ್ರಾಯದ ಮೇರೆಗೆ ಹೊಸ ಕೋಚ್ ಆಯ್ಕೆ ಮಾಡಲಾಗುವುದು ಎಂದು ಬಿಸಿಸಿಐ ಮೂಲಗಳು ಹೇಳಿವೆ. ಇದರೊಂದಿಗೆ ಕೋಚ್ ಆಯ್ಕೆ ವಿಚಾರದಲ್ಲಿ ಕೊಹ್ಲಿ ಮತ್ತು ಬಳಗದ ತೀರ್ಮಾನವೇ ಅಂತಿಮ ಎನ್ನುವುದು ಸ್ಪಷ್ಟವಾಗಿದೆ. ಅವರ ಕೋರಿಕೆಯ ಮೇರೆಗೆ ಕ್ರಿಕೆಟ್ ಸಮಿತಿ ಹೊಸ ಕೋಚ್ ಆಯ್ಕೆ ಮಾಡಲಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ನಾಪತ್ತೆಯಾಗಿದ್ದ ವಿರಾಟ್ ಕೊಹ್ಲಿ ಇದೀಗ ಪ್ರತ್ಯಕ್ಷ!