Select Your Language

Notifications

webdunia
webdunia
webdunia
webdunia

ನಾಪತ್ತೆಯಾಗಿದ್ದ ವಿರಾಟ್ ಕೊಹ್ಲಿ ಇದೀಗ ಪ್ರತ್ಯಕ್ಷ!

ನಾಪತ್ತೆಯಾಗಿದ್ದ ವಿರಾಟ್ ಕೊಹ್ಲಿ ಇದೀಗ ಪ್ರತ್ಯಕ್ಷ!
Jamaica , ಗುರುವಾರ, 6 ಜುಲೈ 2017 (10:22 IST)
ಜಮೈಕಾ: ಚಾಂಪಿಯನ್ಸ್ ಟ್ರೋಫಿ ಫೈನಲ್ ಪಂದ್ಯದಲ್ಲಿ ಪಾಕಿಸ್ತಾನದ ಪಂದ್ಯಕ್ಕೆ ಮೊದಲು ನಾಪತ್ತೆಯಾಗಿದ್ದ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಸಾಮಾಜಿಕ ಜಾಲತಾಣದಲ್ಲಿ ಇಣುಕಿಯೂ ನೋಡಿರಲಿಲ್ಲ. ಇದೀಗ ಮತ್ತೆ ಪ್ರತ್ಯಕ್ಷರಾಗಿದ್ದಾರೆ.


ಚಾಂಪಿಯನ್ಸ್ ಟ್ರೋಫಿ ಪಂದ್ಯಾವಳಿ ವೇಳೆ ತಮ್ಮ ತಂಡದ ಸಹ ಆಟಗಾರರೊಂದಿಗೆ ಲಂಡನ್ ಸುತ್ತಿದ ಫೋಟೋ ಪ್ರಕಟಿಸಿದ್ದ ಕೊಹ್ಲಿ ನಂತರ ಆ ಕಡೆ ತಲೆಯೂ ಹಾಕಿರಲಿಲ್ಲ. ಇದಾದ ಬಳಿಕ ಪಾಕಿಸ್ತಾನದ ವಿರುದ್ಧ ಸೋಲು, ಅನಿಲ್ ಕುಂಬ್ಳೆ ಜತೆಗಿನ ವಿವಾದ ಎಲ್ಲಾ ಸೇರಿ ಕೊಹ್ಲಿ ಟ್ವಿಟರ್, ಇನ್ ಸ್ಟಾಗ್ರಾಂ ಪುಟವನ್ನು ತೆರೆಯುವುದನ್ನೂ ನಿಲ್ಲಿಸಿದ್ದರು.

ಇದೀಗ ಹರ್ಭಜನ್ ಬರ್ತ್ ಡೇಗೆ ಶುಭ ಹಾರೈಸುವ ಮೂಲಕ ಪ್ರತ್ಯಕ್ಷರಾಗಿದ್ದಾರೆ. ಕೋಚ್ ಕುಂಬ್ಳೆ ಜತೆಗಿನ ವಿವಾದ ಸುದ್ದಿಯಲ್ಲಿದ್ದಾಗ ಅವರನ್ನು ವೆಲ್ ಕಂ ಮಾಡಿ ಅಂದೊಮ್ಮೆ ಮಾಡಿದ್ದ ಟ್ವಿಟರ್ ಅಳಿಸಿ ಹಾಕಿದ್ದು ಬಿಟ್ಟರೆ ಅವರು ಟ್ವಿಟರ್ ನಲ್ಲಿ ನಾಪತ್ತೆಯಾಗಿದ್ದರು. ಈಗ ಮತ್ತೆ ಕ್ರಿಯಾಶೀಲರಾಗಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ವಿಂಬಲ್ಡನ್ ಟೆನಿಸ್ ನಲ್ಲಿ ಗರ್ಭಿಣಿಯರು, ಬಾಣಂತಿಯುರು!