Select Your Language

Notifications

webdunia
webdunia
webdunia
webdunia

ಕೆಎಲ್ ರಾಹುಲ್ ಶತಕಕ್ಕೆ ಗೆಳತಿ ಅಥಿಯಾ ಸಂಭ್ರಮ

ಕೆಎಲ್ ರಾಹುಲ್ ಶತಕಕ್ಕೆ ಗೆಳತಿ ಅಥಿಯಾ ಸಂಭ್ರಮ
ಲಾರ್ಡ್ಸ್ , ಶುಕ್ರವಾರ, 13 ಆಗಸ್ಟ್ 2021 (09:48 IST)
ಲಾರ್ಡ್ಸ್: ಇಂಗ್ಲೆಂಡ್ ವಿರುದ್ಧ ದ್ವಿತೀಯ ಟೆಸ್ಟ್ ಪಂದ್ಯದಲ್ಲಿ ಭರ್ಜರಿ ಶತಕ ಗಳಿಸಿರುವ ಟೀಂ ಇಂಡಿಯಾ ಆರಂಭಿಕ ಕೆಎಲ್ ರಾಹುಲ್ ಗೆ ಗೆಳತಿ ಅಥಿಯಾ ಶೆಟ್ಟಿಯಿಂದ ಮೆಚ್ಚುಗೆ ವ್ಯಕ್ತವಾಗಿದೆ.


ಅಥಿಯಾ ಕೂಡಾ ಇದೀಗ ಲಂಡನ್ ನಲ್ಲಿಯೇ ಇದ್ದಾರೆ. ಈ ಪಂದ್ಯದಲ್ಲಿ ರಾಹುಲ್ ಶತಕ ಗಳಿಸಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿರುವ ಅಥಿಯಾ ಮೆಚ್ಚುಗೆಯ ಇಮೋಜಿ ಜೊತೆ ಹಾರ್ಟ್ ಚಿಹ್ನೆ ಹಾಕಿ ತಮ್ಮ ಗೆಳೆಯನ ಮೇಲಿನ ಅಭಿಮಾನ ಹೊರಹಾಕಿದ್ದಾರೆ.

ರಾಹುಲ್-ಅಥಿಯಾ ಡೇಟಿಂಗ್ ನಲ್ಲಿದ್ದಾರೆ ಎಂಬ ರೂಮರ್ ಗಳಿವೆ. ರಾಹುಲ್ ಜೊತೆಗೆ ಅಥಿಯಾ ಕೂಡಾ ಇಂಗ್ಲೆಂಡ್ ಪ್ರವಾಸದಲ್ಲಿರುವುದು ಇದಕ್ಕೆ ಸಾಕ್ಷಿ. ಆದರೆ ಇಬ್ಬರೂ ಅಧಿಕೃತವಾಗಿ ಎಲ್ಲೂ ತಮ್ಮ ಪ್ರೀತಿ ಸಂಬಂಧವನ್ನು ಹೇಳಿಕೊಂಡಿಲ್ಲ.

Share this Story:

Follow Webdunia kannada

ಮುಂದಿನ ಸುದ್ದಿ

ಡಿಎಸ್ ಪಿಯಾಗಿ ನೇಮಕಗೊಂಡ ಒಲಿಂಪಿಯನ್ ಲೊವ್ಲಿನಾ