Select Your Language

Notifications

webdunia
webdunia
webdunia
webdunia

ಸನ್‌ರೈಸರ್ಸ್ ಬೌಲರ್ ಆಶಿಶ್ ನೆಹ್ರಾಗೆ ಯಶಸ್ವಿ ಮಂಡಿ ಶಸ್ತ್ರಚಿಕಿತ್ಸೆ

ashish nehra
ನವದೆಹಲಿ: , ಬುಧವಾರ, 25 ಮೇ 2016 (17:46 IST)
ಹಿರಿಯ ವೇಗಿ ಆಶಿಶ್ ನೆಹ್ರಾ ಮಂಡಿರಜ್ಜು ಗಾಯದಿಂದ ಐಪಿಎಲ್ ಪಂದ್ಯಾವಳಿಯಿಂದ ಹೊರಬಿದ್ದಿದ್ದು, ಲಂಡನ್‌ನಲ್ಲಿ ಮಂಡಿ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿ ಮಾಡಿಸಿಕೊಂಡಿದ್ದಾರೆ. 
 
ಸನ್ ರೈಸರ್ಸ್ ತಂಡವನ್ನು ಪ್ರತಿನಿಧಿಸಿದ್ದ 36 ವರ್ಷದ ಐಪಿಎಲ್ ಆಟಗಾರ, ಅಧಿಕ ಪ್ರಮಾಣದ ಸ್ನಾಯುರಜ್ಜು ಗಾಯಕ್ಕೆ ಒಳಗಾಗಿದ್ದರು. ಬಿಸಿಸಿಐ ವೈದ್ಯಕೀಯ ತಂಡ ಅವರ ಗಾಯವನ್ನು ಅಂದಾಜು ಮಾಡಿ ಲಂಡನ್‌ನಲ್ಲಿ ಮೂಳೆ ತಜ್ಞರನ್ನು ಭೇಟಿಯಾಗುವಂತೆ ಶಿಫಾರಸು ಮಾಡಿತ್ತು.  ದೆಹಲಿಯ ಎಡಗೈ ಆಟಗಾರ ಮಂಗಳವಾರ ಯಶಸ್ವಿಯಾಗಿ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡರು.  ಸನ್‌ರೈಸರ್ಸ್ ಟೀಂ ಮಾರ್ಗದರ್ಶಕ ವಿವಿಎಸ್ ಲಕ್ಷ್ಮಣ್ ಸಾಮಾಜಿಕ ಜಾಲ ತಾಣ ಟ್ವಿಟರ್‌ನಲ್ಲಿ ನೆಹ್ರಾ ಶಸ್ತ್ರಚಿಕಿತ್ಸೆ ಕುರಿತು ಮಾಹಿತಿ ನೀಡಿದರು. 
 
 ದೆಹಲಿಯ ಪೇಸ್ ಬೌಲರ್ ಸನ್ ರೈಸರ್ಸ್ ತಂಡಕ್ಕೆ ಬಾಂಗ್ಲಾದ ಮುಸ್ತಫಿಜುರ್ ರಹಮಾನ್, ಭುವನೇಶ್ವರ್ ಕುಮಾರ್ ಜತೆ ಸದೃಢ ತ್ರಿವಳಿ ಬೌಲಿಂಗ್ ಶಕ್ತಿಯಾಗಿದ್ದರು.  ನೆಹ್ರಾ 8 ಪಂದ್ಯಗಳಲ್ಲಿ 9 ವಿಕೆಟ್ ಕಬಳಿಸಿದ್ದರು. ಆದರೆ ಕಿಂಗ್ಸ್ ಇಲೆವನ್ ವಿರುದ್ಧ ಪಂದ್ಯದಲ್ಲಿ ಗಾಯಗೊಂಡಿದ್ದರು. 

ವೆಬ್‌ದುನಿಯಾ ಮೊಬೈಲ್ ಆಪ್ (ಡೌನ್‌ಲೋಡ್) ಮಾಡಿಕೊಂಡು ತಾಜಾ ಸುದ್ದಿಗಳನ್ನು ಪಡೆಯಿರಿ.

Share this Story:

Follow Webdunia kannada

ಮುಂದಿನ ಸುದ್ದಿ

ಕೊಹ್ಲಿ ಮೊದಲ ಲವ್ ಅನುಷ್ಕಾ ಶರ್ಮಾ ಅಲ್ಲ, ಯಾರೆಂದು ನಿಮಗೆ ಗೊತ್ತೇ?