Select Your Language

Notifications

webdunia
webdunia
webdunia
webdunia

ಕೊಹ್ಲಿ ಮೊದಲ ಲವ್ ಅನುಷ್ಕಾ ಶರ್ಮಾ ಅಲ್ಲ, ಯಾರೆಂದು ನಿಮಗೆ ಗೊತ್ತೇ?

virat kohli
ನವದೆಹಲಿ: , ಬುಧವಾರ, 25 ಮೇ 2016 (17:23 IST)
ವಿರಾಟ್ ಕೊಹ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಸಾಧಿಸಿರುವ ಅಪಾರ ಯಶಸ್ಸನ್ನು ಪರಿಗಣಿಸಿದಾಗ, ಭಾರತದ ಕ್ರಿಕೆಟ್ ಆಟಗಾರ ವಿರಾಟ್ ಕೊಹ್ಲಿ ಭಾರತೀಯ ಕ್ರಿಕೆಟ್‌ನ ಹೊಸ ಪೋಸ್ಟರ್ ಬಾಯ್ ಆಗಿ ಮಿಂಚಿದ್ದಾರೆ.
 
ದೆಹಲಿ ಬ್ಯಾಟ್ಸ್‌ಮನ್ ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಜತೆ ಡೇಟಿಂಗ್ ಷುರುಮಾಡಿದ ಮೇಲೆ ಅವರ ವೈಯಕ್ತಿಕ ಜೀವನ ಕೂಡ ಚರ್ಚೆಗೆ ಗ್ರಾಸವೊದಗಿಸಿದೆ. ಅವರಿಬ್ಬರ ನಡುವೆ ಲವ್ ಬ್ರೇಕ್ ಆಗಿದೆಯೆಂಬ ಗಾಳಿ ಸುದ್ದಿ ಎಲ್ಲೆಡೆ ಹರಡುತ್ತಿದ್ದಂತೆಯೇ ಹೊಟೆಲ್‌‍ವೊಂದರಲ್ಲಿ ಇಬ್ಬರೂ ಜತೆಯಾಗಿ ಕಾಣಿಸಿಕೊಂಡು ಗಾಳಿ ಸುದ್ದಿಗೆ ತೆರೆಎಳೆದಿದ್ದರು. 

ಆದರೆ ಕೊಹ್ಲಿಯ ಮೊದಲ ಕ್ರಷ್ ಯಾರು ಎಂದು ಅನೇಕ ಮಂದಿಗೆ ಗೊತ್ತಿರಲಾರದು. ಕೊಹ್ಲಿಯ ಮೊದಲ ಮೋಹಕನ್ಯೆ ಕರಿಷ್ಮಾ ಕಪೂರ್. ಸಂದರ್ಶನವೊಂದರಲ್ಲಿ ಕೊಹ್ಲಿ ತಮ್ಮ ಮೊದಲ ಲವ್ ಕುರಿತು ಬಾಯಿಬಿಟ್ಟಿದ್ದಾರೆ. ಆದರೆ ಇದು ಒನ್ ಸೈಡ್ ಲವ್ವೋ 2 ಸೈಡ್ ಲವ್ವೋ ಗೊತ್ತಾಗಿಲ್ಲ. 
 
ಕೊಹ್ಲಿ ರೀತಿಯಲ್ಲಿ ಕರಿಷ್ಮಾ ಜನಪ್ರಿಯತೆಯ ದಿನಗಳಲ್ಲಿ ಅವರಿಗೆ ಕೂಡ ಭಾರೀ ಅಭಿಮಾನಿ ಬಳಗವಿತ್ತು. ಅವರ ಪೈಕಿ ಕೊಹ್ಲಿ ಕೂಡ ಒಬ್ಬರಾಗಿದ್ದರು. ಆದರೆ ಈಗ ಪರಿಸ್ಥಿತಿ ಬದಲಾಗಿದೆ. ಕೊಹ್ಲಿ ಈಗ ಸ್ವಯಂ ಕ್ರಿಕೆಟ್ ಸೂಪರ್ ಸ್ಟಾರ್ ಆಗಿ ಹೊರಹೊಮ್ಮಿದ್ದು ಕ್ರಿಕೆಟ್ ದಾಖಲೆಗಳನ್ನು ಮುರಿಯುತ್ತಿದ್ದಾರೆ. 

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆ್ಯಪ್‌ನ್ನು ಡೌನ್‌ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಕ್ರಿಸ್ ಗೇಲ್‌ಗೆ ಐಪಿಎಲ್ ದಿಗ್ಬಂಧನ ಹಾಕುತ್ತದೆಯೇ?