‘ನಿವೃತ್ತ’ ಆಶಿಷ್ ನೆಹ್ರಾ ಲಂಕಾ ಸರಣಿಗೆ ವಾಪಸ್!

ಗುರುವಾರ, 16 ನವೆಂಬರ್ 2017 (08:57 IST)
ಕೋಲ್ಕೊತ್ತಾ: ಇತ್ತೀಚೆಗಷ್ಟೇ ಅಂತಾರಾಷ್ಟ್ರೀಯ ಕ್ರಿಕೆಟ್ ಬದುಕಿಗೆ ನಿವೃತ್ತಿ ಹೇಳಿರುವ ಹಿರಿಯ ವೇಗಿ ಆಶಿಷ್ ನೆಹ್ರಾ ಮರಳಿ ಕ್ರಿಕೆಟ್ ಮೈದಾನಕ್ಕೆ ಬಂದಿದ್ದಾರೆ. ಆದರೆ ಈ ಬಾರಿ ಬೇರೆ ಅವತಾರದಲ್ಲಿ.

 
ಆದರೆ ಈ ಬಾರಿ ಅವರು ಆಟಗಾರನಾಗಿ ಕಾಣಿಸಿಕೊಳ್ಳುತ್ತಿಲ್ಲ. ಬದಲಾಗಿ ಕಾಮೆಂಟೇಟರ್ ಆಗಿ ಬರಲಿದ್ದಾರೆ. ಇನ್ನೊಬ್ಬ ಮಾಜಿ ಆಟಗಾರ ದೆಹಲಿಯವರೇ ಆದ ವೀರೇಂದ್ರ ಸೆಹ್ವಾಗ್ ಜತೆ ನೆಹ್ರಾ ಮೈಕ್ ಹಂಚಿಕೊಳ್ಳಲಿದ್ದಾರೆ.

ಕ್ರಿಕೆಟ್ ಬದುಕಿನಲ್ಲಿ ಇವರಿಬ್ಬರೂ ಜತೆಯಾಗಿ ಆಡಿದ್ದರು. ಇದೀಗ ಕಾಮೆಂಟರಿ ಬಾಕ್ಸ್ ನಲ್ಲೂ ಒಟ್ಟಾಗಿ ಕಾಮೆಂಟರಿ ಕೊಡಲಿದ್ದಾರೆ. ಹೊಸ ಹುದ್ದೆಯನ್ನು ನೆಹ್ರಾ ಹೇಗೆ ನಿಭಾಯಿಸುತ್ತಾರೋ ನೋಡಬೇಕು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಶ್ರೀಲಂಕಾ ಜತೆ ಕ್ರಿಕೆಟ್ ಸಾಕಪ್ಪಾ ಸಾಕು ಎಂದು ನಾಯಕ ಕೊಹ್ಲಿಗೆ ಅನಿಸಿದ್ದು ಯಾಕೆ?