Select Your Language

Notifications

webdunia
webdunia
webdunia
webdunia

ದಾಡಿ ತೆಗೆಯಬೇಡವೆಂದು ವಿರಾಟ್ ಕೊಹ್ಲಿಗೆ ಅನುಷ್ಕಾ ತಾಕೀತು

ದಾಡಿ ತೆಗೆಯಬೇಡವೆಂದು ವಿರಾಟ್ ಕೊಹ್ಲಿಗೆ ಅನುಷ್ಕಾ ತಾಕೀತು
Mumbai , ಮಂಗಳವಾರ, 25 ಏಪ್ರಿಲ್ 2017 (10:55 IST)
ಮುಂಬೈ: ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ಪ್ರೇಮಿಗಳೆಂಬುದು ಈಗ ಗುಟ್ಟಾಗಿ ಉಳಿದಿಲ್ಲ. ಇಬ್ಬರೂ ಈಗ ಸಾರ್ವಜನಿಕವಾಗಿ ತಮ್ಮ ಪ್ರೀತಿ ಹಂಚಿಕೊಳ್ಳುವಷ್ಟು ಮುಂದುವರಿದಿದ್ದಾರೆ.

 
ರವೀಂದ್ರ ಜಡೇಜಾ ಹೇರ್ ಸ್ಟೈಲ್ ಬದಲಾಯಿಸಿ, ದಾಡಿ ಬೋಳಿಸಿಕೊಂಡ ಮೇಲೆ ಟೀಂ ಇಂಡಿಯಾ ಕ್ರಿಕೆಟಿಗರಿಗೆಲ್ಲರಿಗೂ ತಾವೂ ಯಾಕೆ ಸ್ಟೈಲ್ ಬದಲಾಯಿಸಿಕೊಳ್ಳಬಾರದು ಎಂದೆನಿಸಿದೆ. ಈ ಬಗ್ಗೆ ಕ್ರಿಕೆಟಿಗರು ಟ್ವಿಟರ್ ನಲ್ಲಿ ಚಾಟಿಂಗ್ ಮಾಡುತ್ತಿದ್ದರು.

ಸಾರಿ ನಾನು ನನ್ನ ಸ್ಟೈಲ್ ಬದಲಾಯಿಸಲ್ಲ ಎಂದು ಕೊಹ್ಲಿ ರೋಹಿತ್ ಶರ್ಮಾ ಮತ್ತು ಹಾರ್ದಿಕ್ ಪಾಂಡ್ಯಗೆ ಹೇಳುವಾಗ ಅನುಷ್ಕಾ ಕೂಡಾ ಅವರ ಜತೆ ಸೇರಿಕೊಂಡರು. ಅಲ್ಲದೆ, ನೀನು ದಾಡಿ ಬೋಳಿಸಬಾರದು ಎಂದು ಹುಕುಂ ಮಾಡಿದರು. ಅದಕ್ಕೆ ಕೊಹ್ಲಿ ಕೂಡ ಸರಿ ಎಂದು ಒಪ್ಪಿಗೆಯನ್ನೂ ನೀಡಿದರು. ಅಲ್ಲಿಗೆ ಅನುಷ್ಕಾ ತಮ್ಮ ಇನಿಯನ ದಾಡಿ ಮೇಲಿನ ಪ್ರೇಮ ಪಬ್ಲಿಕ್ ಆಗಿ ಹಂಚಿಕೊಂಡರು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ   

Share this Story:

Follow Webdunia kannada

ಮುಂದಿನ ಸುದ್ದಿ

ಜಹೀರ್ ಖಾನ್ ಭಾವಿ ಪತ್ನಿಗೆ ವಿಶ್ ಮಾಡುವಾಗ ಅನಿಲ್ ಕುಂಬ್ಳೆ ಮಾಡಿದ ಎಡವಟ್ಟು!