Publish Date: Tue, 25 Apr 2017 (10:27 IST)
Updated Date: Tue, 25 Apr 2017 (10:30 IST)
ಮುಂಬೈ: ಕ್ರಿಕೆಟಿಗ ಜಹೀರ್ ಖಾನ್ ಮತ್ತು ಅವರ ಗೆಳತಿ ಸಾಗರಿಕಾ ಘಾಟೆ ವಿವಾಹ ನಿಶ್ಚಿತಾರ್ಥ ಮಾಡಿಕೊಂಡಿದ್ದೇವೆಂದು ಘೋಷಿಸಿದ ಬಳಿ ಟ್ವಿಟರ್ ನಲ್ಲಿ ಶುಭಾಷಯಗಳ ಸುರಿಮಳೆಯಾಗುತ್ತಿದೆ. ಆದರೆ ಅನಿಲ್ ಕುಂಬ್ಳೆ ಒಂದು ಎಡವಟ್ಟು ಮಾಡಿಕೊಂಡಿದ್ದಾರೆ.
ಒಂದು ಕಾಲದಲ್ಲಿ ತಮ್ಮ ಸಹ ಆಟಗಾರನಾಗಿದ್ದ ಜಹೀರ್ ಗೆ ಮತ್ತು ಅವರ ಭಾವೀ ಪತ್ನಿಗೆ ಟ್ವಿಟರ್ ನಲ್ಲಿ ಶುಭಾಷಯ ಕೋರುವಾಗ ಕುಂಬ್ಳೆ, ಸಾಗರಿಕಾ ಹೆಸರನ್ನು ತಪ್ಪಾಗಿ ಟ್ಯಾಗ್ ಮಾಡಿ ಎಡವಟ್ಟು ಮಾಡಿಕೊಂಡಿದ್ದಾರೆ. ಸಾಗರಿಕಾ ಘಾಟೆ ಎಂದು ಬರೆಯುವ ಬದಲು ಸಾಗರಿಕಾ ಘೋಷ್ ಎಂದು ಟ್ಯಾಗ್ ಮಾಡಿದ್ದಾರೆ.
ಅದೂ ಕುಂಬ್ಳೆ ಟ್ಯಾಗ್ ಮಾಡಿದ ಸಾಗರಿಕಾ ಎರಡು ಮಕ್ಕಳ ತಾಯಿ! ಹಾಗಂತ ಅವರೇ ತಮ್ಮ ಟ್ವಿಟರ್ ನಲ್ಲಿ ಹೇಳಿದ್ದಾರೆ. ಸರ್ ನೀವು ತಪ್ಪು ವ್ಯಕ್ತಿಗೆ ಟ್ಯಾಗ್ ಮಾಡಿದಿರಿ ಎಂದು ಆಕೆ ತಿದ್ದಿದ್ದಾಳೆ. ಆದರೆ ಇದೀಗ ಟ್ವಿಟರ್ ನಲ್ಲಿ ಭಾರೀ ಸದ್ದು ಮಾಡುತ್ತಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ