Publish Date: Thu, 02 Mar 2023 (14:11 IST)
Updated Date: Thu, 02 Mar 2023 (14:14 IST)
ಕಳೆದ ಎರಡು ವರ್ಷಗಳಲ್ಲಿ ಅನುಷ್ಕಾ ಶರ್ಮಾ ಸಾಕಷ್ಟು ತ್ಯಾಗ ಮಾಡಿದ್ದಾರೆ ಮತ್ತು ಅನುಷ್ಕಾನೇ ನನಗೆ ಸ್ಫೂರ್ತಿ ಎಂದು RCB ಪಾಡ್‌ಕ್ಯಾಸ್ಟ್‌ನಲ್ಲಿ ವಿರಾಟ್ ಕೊಹ್ಲಿ ಹೇಳಿದ್ದಾರೆ. 2017ರಲ್ಲಿ ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ವಿವಾಹವಾಗಿದ್ದರು. ಜನವರಿ 2021ರಲ್ಲಿ ಅನುಷ್ಕಾ ವಮಿಕಾಗೆ ಜನ್ಮ ನೀಡಿದರು. ವಾಮಿಕಾಳ ಮುಖವನ್ನು ಬಹಿರಂಗಪಡಿಸದೆ ಮಗಳೊಂದಿಗೆ ಕಳೆಯುವ ಸಮಯದ ಮುದ್ದಾದ ಗ್ಲಿಂಪ್‌ಗಳನ್ನು ಇನ್ಟಾಗ್ರಾಮ್ ನಲ್ಲಿ ಹಂಚಿಕೊಳ್ಳುತ್ತಾರೆ. ಕಳೆದ ಎರಡು ವರ್ಷಗಳಲ್ಲಿ ಅನುಷ್ಕಾ ಶರ್ಮಾ ತಾಯಿಯಾದ ನಂತರ ಸಾಕಷ್ಟು ತ್ಯಾಗ ಮಾಡಿದ್ದಾರೆ ಮತ್ತು ಅನುಷ್ಕಾನೆ ತನಗೆ ಸ್ಫೂರ್ತಿ ಎಂದು ವಿರಾಟ್ ಹೇಳಿಕೊಂಡಿದ್ದಾರೆ. ಅನುಷ್ಕಾ ತನಗೆ ಬಹುದೊಡ್ಡ ಸ್ಪೂರ್ತಿಯಾಗಿದ್ದು, ಆಕೆಯನ್ನು ಪ್ರೀತಿಸಿದಾಗಿನಿಂದಲೂ ತಾನು ಉತ್ತಮವಾಗಿ ಬದಲಾಗಿದ್ದೇನೆ ಎಂದು ಹೇಳಿದ್ದಾರೆ ವಿರಾಟ್ .