52ನೇ ವಸಂತಕ್ಕೆ ಕಾಲಿಟ್ಟ ಅನಿಲ್ ಕುಂಬ್ಳೆ

Webdunia
ಸೋಮವಾರ, 17 ಅಕ್ಟೋಬರ್ 2022 (19:16 IST)
ಇಂದು ಭಾರತದ ಮಾಜಿ ಸ್ಟಾರ್ ಕ್ರಿಕೆಟಿಗ ಹಾಗೂ ಕನ್ನಡಿಗ ಅನಿಲ್ ಕುಂಬ್ಳೆ 52ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಟೀಂ ಇಂಡಿಯಾ ಕಂಡ ಲೆಜೆಂಡರಿ ಸ್ಪಿನ್ನರ್​ಗಳಲ್ಲಿ ಕುಂಬ್ಳೆ ಮೊದಲಿಗರು. ಟೆಸ್ಟ್ ಕ್ರಿಕೆಟ್​ನಲ್ಲಿ ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಕುಂಬ್ಳೆ 10 ವಿಕೆಟ್​ ಉರುಳಿಸಿದ ದಾಖಲೆಯನ್ನು ಯಾರಾದರು ಮರೆಯುವುದುಂಟೇ..? ಹೀಗೆ ದಶಕಗಳ ಕಾಲ ಟೀಂ ಇಂಡಿಯಾವನ್ನು ಆಳಿದ ಅನಿಲ್ ಕುಂಬ್ಳೆ, ಲೆಗ್ ಸ್ಪಿನ್‌ಗೆ ಬ್ಯಾಟ್ಸ್‌ಮನ್‌ಗಳನ್ನು ಒತ್ತಡಕ್ಕೆ ಸಿಲುಕಿಸುವಲ್ಲಿ ಮಾಸ್ಟರ್ ಆಗಿದ್ದರು. ಇದರಿಂದಾಗಿಯೇ ಈ ಸ್ಪಿನ್ ಲೋಕದ ಮಾಂತ್ರಿಕನಿಗೆ ‘ಜಂಬೋ’ ಎಂಬ ಅಡ್ಡ ಹೆಸರು ಕೂಡ ಇದೆ. ಈ ಹಿಂದೆ ಅಭಿಮಾನಿಯೊಬ್ಬರ ಈ ಪ್ರಶ್ನೆಗೆ ಉತ್ತರಿಸಿದ್ದ ಅನಿಲ್ ಕುಂಬ್ಳೆ, ನನ್ನ ಅಡ್ಡಹೆಸರು ಜಂಬೋ. ಈ ಹೆಸರನ್ನು ನನಗೆ ಕೊಟ್ಟಿದ್ದು ನವಜೋತ್ ಸಿಂಗ್ ಸಿಧು. ದೆಹಲಿಯ ಫಿರೋಜ್ ಷಾ ಕೋಟ್ಲಾ ಸ್ಟೇಡಿಯಂನಲ್ಲಿ ನಡೆದ ಇರಾನಿ ಟ್ರೋಫಿಯಲ್ಲಿ ಸಿಧು ನನಗೆ ಈ ಅಡ್ಡ ಹೆಸರನ್ನಿಟ್ಟರು. ನಾನು ಎಸೆದ ಒಂದು ಚೆಂಡು ತುಂಬಾ ಬೌನ್ಸ್ ಆಯಿತು.. ಈ ಎಸೆತವನ್ನು ಕಂಡ ಸಿಧು, ‘ಜಂಬೋ ಜೆಟ್’ ಎಂದು ಕರೆದರು. ಅದರ ನಂತರ ‘ಜೆಟ್’ ಪದವನ್ನು ಕೈಬಿಟ್ಟು, ನನ್ನ ತಂಡದ ಸದಸ್ಯರು ನನ್ನನ್ನು ಜಂಬೋ ಎಂದು ಕರೆಯಲು ಪ್ರಾರಂಭಿಸಿದರು ಎಂಬ ಸ್ವಾರಸ್ಯಕರ ಮಾಹಿತಿಯನ್ನು ಕುಂಬ್ಳೆ ಹೊರಹಾಕಿದ್ದಾರೆ.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

IPL 2026: ಆರ್ ಸಿಬಿ ಬೆಂಗಳೂರಿನಲ್ಲಿ ಆಡಲು ಹಿಂದೇಟು ಹಾಕುತ್ತಿರುವುದು ಇದೇ ಕಾರಣಕ್ಕೆ

IND vs NZ: ಟೀಂ ಇಂಡಿಯಾ, ನ್ಯೂಜಿಲೆಂಡ್ ಎರಡನೇ ಟಿ20 ಇಂದು, ಎಷ್ಟು ಗಂಟೆಗೆ ಆರಂಭ ನೋಡಿ

ಆರ್ ಸಿಬಿಗೆ ಒಡತಿಯಾಗಲು ಹೊರಟ ಅನುಷ್ಕಾ ಶರ್ಮಾ

IND vs NZ: ಸಿಕ್ಕ ಅವಕಾಶ ಬಳಸಿಕೊಂಡ ರಿಂಕು ಸಿಂಗ್: ಸಂಜು ಸ್ಯಾಮ್ಸನ್, ಇಶಾನ್ ಕಿಶನ್ ಮಾಡಿದ್ದೇನು

ಎಂ ಚಿನ್ನಸ್ವಾಮಿಯಲ್ಲಿ ಐಪಿಎಲ್ ಪಂದ್ಯಾಟಕ್ಕೆ ಕೊನೆಗೂ ಅಧಿಕೃತವಾಗಿ ಸಿಕ್ತು ಗ್ರೀನ್‌ಸಿಗ್ನಲ್

ಮುಂದಿನ ಸುದ್ದಿ
Show comments