Select Your Language

Notifications

webdunia
webdunia
webdunia
webdunia

ಚಾಂಪಿಯನ್ಸ್ ಟ್ರೋಫಿಗೂ ಮುನ್ನ ಇಂಗ್ಲೆಂಡ್ ತಂಡಕ್ಕೆ ದೊಡ್ಡ ಆಘಾತ: ಜೇಕಬ್‌ ಬೆಥೆಲ್‌ ಔಟ್‌

ಚಾಂಪಿಯನ್ಸ್ ಟ್ರೋಫಿಗೂ ಮುನ್ನ ಇಂಗ್ಲೆಂಡ್ ತಂಡಕ್ಕೆ ದೊಡ್ಡ ಆಘಾತ: ಜೇಕಬ್‌ ಬೆಥೆಲ್‌ ಔಟ್‌

Sampriya

ನವದೆಹಲಿ , ಸೋಮವಾರ, 10 ಫೆಬ್ರವರಿ 2025 (20:34 IST)
Photo Courtesy X
ನವದೆಹಲಿ: ಇದೇ 19ರಂದು ಪಾಕಿಸ್ತಾನದ ಆತಿಥ್ಯದಲ್ಲಿ  ಐಸಿಸಿ ಪುರುಷರ ಚಾಂಪಿಯನ್ಸ್ ಟ್ರೋಫಿ ಆರಂಭವಾಗಲಿದೆ. ಅದಕ್ಕೂ ಮುನ್ನ ಇಂಗ್ಲೆಂಡ್ ತಂಡಕ್ಕೆ ಭಾರೀ ಆಘಾತ ಎದುರಾಗಿದೆ.

ಇಂಗ್ಲೆಂಡ್‌ನ ಆಲ್‌ರೌಂಡರ್ ಜೇಕಬ್‌ ಬೆಥೆಲ್‌ ಚಾಂಪಿಯನ್ಸ್ ಟ್ರೋಫಿ ಕ್ರಿಕೆಟ್‌ ಟೂರ್ನಿಯಿಂದ ಹೊರಬಿದ್ದಿದ್ದಾರೆ. ನಾಗ್ಪುರದಲ್ಲಿ ನಡೆದ ಭಾರತ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಅವರು ಅರ್ಧಶತಕ ಗಳಿಸಿ ಎಲ್ಲರ ಗಮನ ಸೆಳೆದಿದ್ದ ಅವರು ಗಾಯದ ಸಮಸ್ಯೆ ಎದುರಿಸುತ್ತಿದ್ದಾರೆ.

ಜೇಕಬ್‌ ಬೆಥೆಲ್‌ ಎಡ ಮಂಡಿರಜ್ಜು ಗಾಯದಿಂದ ಬಳಲುತ್ತಿದ್ದಾರೆ. ಬಳಲುತ್ತಿದ್ದಾರೆ. ಹೀಗಾಗಿ, ಭಾರತ ಸರಣಿಗಾಗಿ ಅವರ ಬದಲು ಟಾಮ್ ಬ್ಯಾಂಟನ್ ಅವರಿಗೆ ಅವಕಾಶ ನೀಡಿದೆ. ಚಾಂಪಿಯನ್ಸ್ ಟ್ರೋಫಿಯಲ್ಲಿಯೂ ಇಂಗ್ಲೆಂಡ್ ತಂಡದಲ್ಲಿ ಜೇಕಬ್‌ ಬೆಥೆಲ್‌ ಬದಲಿಗೆ ಟಾಮ್ ಬ್ಯಾಂಟನ್ ಸ್ಥಾನ ಪಡೆಯಬಹುದು. ಆದರೆ, ಇಂಗ್ಲೆಂಡ್‌ ತಂಡವನ್ನು ಇನ್ನೂ ಪ್ರಕಟಿಸಿಲ್ಲ.

ಇಂಡಿಯನ್ ಪ್ರೀಮಿಯರ್‌ ಲೀಗ್‌ನಲ್ಲಿ ಆರ್‌ಸಿಬಿ ತಂಡದ ಪರ ಬೆಥೆಲ್ ಆಡಲಿದ್ದಾರೆ. ಇದಕ್ಕೂ ಮುನ್ನ ಅವರು ಮಂಡಿರಜ್ಜು ಗಾಯದಿಂದ ಚೇತರಿಸಿಕೊಳ್ಳುವ ನಿರೀಕ್ಷೆಯಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಅಂಪಾಯರ್ ಕುಂಡಿಗೆ ಚೆಂಡು ಎಸೆಯಲು ಹೊರಟ ರವೀಂದ್ರ ಜಡೇಜಾ: ಫನ್ನಿ ವಿಡಿಯೋ