Webdunia - Bharat's app for daily news and videos

Install App

ಕ್ರಿಕೆಟಿಗ ವಿವಿಎಸ್ ಲಕ್ಷ್ಮಣ್ ಮನಸ್ಸು ಗೆದ್ದ ಬೆಂಗಳೂರಿನ ಫುಡ್ ಸ್ಟಾಲ್ ಒಡತಿ

sampriya
ಗುರುವಾರ, 23 ಮೇ 2024 (15:08 IST)
Photo By X
ಬೆಂಗಳೂರು: ಮಾಜಿ ಕ್ರಿಕೆಟಿಗ ವಿವಿಎಸ್‌ ಲಕ್ಷ್ಮಣ್‌ ಅವರು ಅಪಘಾತದಲ್ಲಿ ಕಾಲು ಕಳೆದುಕೊಂಡು ಸಣ್ಣ ಸ್ಟಾಲ್‌ನಲ್ಲಿ ಬದುಕುಸಾಧಿಸುತ್ತಿರುವ ಬೆಂಗಳೂರಿನ ಮಹಿಳೆಯ ಬದುಕಿನ ಛಲದ ಬಗ್ಗೆ ಕೊಂಡಾಡಿ ಫೋಟೋ ಹಾಕಿ, ಸುದೀರ್ಘವಾಗಿ ಬರೆದುಕೊಂಡಿದ್ದಾರೆ.  


ಅಪಘಾತದಲ್ಲಿ ಸಣ್ಣ ವಯಸ್ಸಿನಲ್ಲಿ ಕಾಲು ಕಳೆದುಕೊಂಡು ವೀಣಾ ಅಂಬರೀಶ್‌ ಅವರ ಬದುಕಿನ ಛಲದ ಬಗ್ಗೆ ಲಕ್ಷ್ಮಣ್‌ ಅವರು ತಮ್ಮ ಎಕ್ಸ್‌ ಖಾತೆಯಲ್ಲಿ ಬರೆದಿದ್ದಾರೆ.

ಕೇವಲ 17 ವರ್ಷದವಳಿದ್ದಾಗ ಬೆಂಗಳೂರಿನಲ್ಲಿ ನಡೆದ ಅಪಘಾತದಲ್ಲಿ ವೀಣಾ ಅಂಬರೀಶ್ ಕಾಲು ಕಳೆದುಕೊಂಡರು. ಆ ಸಮಯದಲ್ಲಿ ಅವಳು ಭರತನಾಟ್ಯ ನೃತ್ಯಗಾರ್ತಿಯಾಗಿದ್ದಳು. ನಂತರ ಎಂಬಿಎ ಪೂರ್ಣಗೊಳಿಸಿದರು. ಅದಲ್ಲದೆ ಕಂಪನಿಯಲ್ಲಿ ಕೆಲವು ವರ್ಷಗಳ ಕಾಲ ಕೆಲಸ ಮಾಡಿದರು. ಈ ವೇಳೆ ಅವರಿಗೆ ಒಂದೇ ಜಾಗದಲ್ಲಿ ಕೆಲ ಸಮಯ ಕೂತು ಕೆಲಸ ಮಾಡಲು ಕಷ್ಟವಾಗುತ್ತಿತ್ತು. ಅದಕ್ಕೆ ಸ್ವಂತ ಉದ್ಯಮವನ್ನು ಆರಂಭಿಸಲು ಯೋಚಿಸಿದರು. ಕೊನೆಗೆ ಅವರು "ಕರಿ ದೋಸೆ" ಸ್ಟಾಲ್ ಅನ್ನು ಸ್ಥಾಪಿಸುವ ಮೂಲಕ ಆಹಾರದ ಮೇಲಿನ ಪ್ರೀತಿಯನ್ನು ವ್ಯಾಪಾರವಾಗಿ ಪರಿವರ್ತಿಸಲು ನಿರ್ಧರಿಸಿದರು. ಇವರು ಪ್ರತಿದಿನ ಬೆಳಿಗ್ಗೆ 4:30 ಕ್ಕೆ ತನ್ನ ದಿನವನ್ನು ಪ್ರಾರಂಭಿಸುತ್ತಾಳೆ ಮತ್ತು ಜೆಪಿ ನಗರದ 7 ನೇ ಹಂತದಲ್ಲಿ ಕರಿ ದೋಸೆಗಳನ್ನು ಮಾರಾಟ ಮಾಡುತ್ತಾಳೆ.

"ಜೀವನದಲ್ಲಿ ಎಷ್ಟೇ ಕಷ್ಟ ಬಂದರೂ ಮೊದಲಿಗಿಂತ ಬಲಶಾಲಿಯಾಗಿರು" ಎಂಬ ವೀಣಾ ಮಂತ್ರ. ಸವಾಲಿನ ಸಮಯದಲ್ಲಿ ಅವಳಿಗೆ ಸಹಾಯ ಮಾಡಿದೆ ಮತ್ತು ಅವಳ ಪ್ರಯಾಣವು ನಿಜವಾಗಿಯೂ ಸ್ಪೂರ್ತಿದಾಯಕವಾಗಿದೆ. ಎಂದು ಬರೆದುಕೊಂಡಿದ್ದಾರೆ.


ಇನ್ನೂ ಲಕ್ಷ್ಮಣ್‌ ಅವರು ಈ ಪೋಸ್ಟ್‌ ಹಂಚಿಕೊಳ್ಳುತ್ತಿದ್ದ ಹಾಗೇ ಅನೇಕ ಪ್ರತಿಕ್ರಿಯಿಗಳು ಬಂದಿದೆ. ಕೆಲವರು ಈ ಪೋಸ್ಟ್‌ ನೋಡಿ ಸ್ಟಾಲ್‌ಗೆ ಭೇಟಿ ನೀಡುವ ಬಗ್ಗೆ ಹೇಳಿಕೊಂಡಿದ್ದಾರೆ.

 <>

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಸ್ಟ್ರಾಂಗ್ ಪ್ಲೇಯರ್ ಕೊಹ್ಲಿ ಇರುವಾಗ ವೀಕ್ ಪ್ಲೇಯರ್ ರೋಹಿತ್ ಯಾಕೆ ಕ್ಯಾಪ್ಟನ್ ಆಗಿದ್ದಾರೆ?

ಪ್ರಾಕ್ಟೀಸ್ ಸೆಷನ್ ಗೆ ವಿರಾಟ್ ಕೊಹ್ಲಿ-ಬುಮ್ರಾ ಚಕ್ಕರ್

ಮಗಳ ಬರ್ತ್ ಡೇ ಪಾರ್ಟಿಯಲ್ಲಿ ಟಾಯ್ ಟ್ರೈನ್ ನಲ್ಲಿ ಮಸ್ತ್ ಮಜಾ ಮಾಡಿದ ರೋಹಿತ್ ಶರ್ಮಾ

INDWvsAusw ODI: ಭಾರತ ಮಹಿಳಾ ಕ್ರಿಕೆಟ್ ಆಟಗಾರ್ತಿ ಸ್ನೇಹಾ ರಾಣಾ ತಲೆಗೆ ಗಂಭೀರ ಗಾಯ

INDvsSA test: ಎರಡನೇ ಟೆಸ್ಟ್ ಗೆ ಟೀಂ ಇಂಡಿಯಾದಲ್ಲಿ ಈ ಬದಲಾವಣೆ ಖಚಿತ

ಮುಂದಿನ ಸುದ್ದಿ
Show comments