ಬೆಂಗಳೂರು: ಮಾಜಿ ಕ್ರಿಕೆಟಿಗ ವಿವಿಎಸ್ ಲಕ್ಷ್ಮಣ್ ಅವರು ಅಪಘಾತದಲ್ಲಿ ಕಾಲು ಕಳೆದುಕೊಂಡು ಸಣ್ಣ ಸ್ಟಾಲ್‌ನಲ್ಲಿ ಬದುಕುಸಾಧಿಸುತ್ತಿರುವ ಬೆಂಗಳೂರಿನ ಮಹಿಳೆಯ ಬದುಕಿನ ಛಲದ ಬಗ್ಗೆ ಕೊಂಡಾಡಿ ಫೋಟೋ ಹಾಕಿ, ಸುದೀರ್ಘವಾಗಿ ಬರೆದುಕೊಂಡಿದ್ದಾರೆ.
ಅಪಘಾತದಲ್ಲಿ ಸಣ್ಣ ವಯಸ್ಸಿನಲ್ಲಿ ಕಾಲು ಕಳೆದುಕೊಂಡು ವೀಣಾ ಅಂಬರೀಶ್ ಅವರ ಬದುಕಿನ ಛಲದ ಬಗ್ಗೆ ಲಕ್ಷ್ಮಣ್ ಅವರು ತಮ್ಮ ಎಕ್ಸ್ ಖಾತೆಯಲ್ಲಿ ಬರೆದಿದ್ದಾರೆ.
ಕೇವಲ 17 ವರ್ಷದವಳಿದ್ದಾಗ ಬೆಂಗಳೂರಿನಲ್ಲಿ ನಡೆದ ಅಪಘಾತದಲ್ಲಿ ವೀಣಾ ಅಂಬರೀಶ್ ಕಾಲು ಕಳೆದುಕೊಂಡರು. ಆ ಸಮಯದಲ್ಲಿ ಅವಳು ಭರತನಾಟ್ಯ ನೃತ್ಯಗಾರ್ತಿಯಾಗಿದ್ದಳು. ನಂತರ ಎಂಬಿಎ ಪೂರ್ಣಗೊಳಿಸಿದರು. ಅದಲ್ಲದೆ ಕಂಪನಿಯಲ್ಲಿ ಕೆಲವು ವರ್ಷಗಳ ಕಾಲ ಕೆಲಸ ಮಾಡಿದರು. ಈ ವೇಳೆ ಅವರಿಗೆ ಒಂದೇ ಜಾಗದಲ್ಲಿ ಕೆಲ ಸಮಯ ಕೂತು ಕೆಲಸ ಮಾಡಲು ಕಷ್ಟವಾಗುತ್ತಿತ್ತು. ಅದಕ್ಕೆ ಸ್ವಂತ ಉದ್ಯಮವನ್ನು ಆರಂಭಿಸಲು ಯೋಚಿಸಿದರು. ಕೊನೆಗೆ ಅವರು "ಕರಿ ದೋಸೆ" ಸ್ಟಾಲ್ ಅನ್ನು ಸ್ಥಾಪಿಸುವ ಮೂಲಕ ಆಹಾರದ ಮೇಲಿನ ಪ್ರೀತಿಯನ್ನು ವ್ಯಾಪಾರವಾಗಿ ಪರಿವರ್ತಿಸಲು ನಿರ್ಧರಿಸಿದರು. ಇವರು ಪ್ರತಿದಿನ ಬೆಳಿಗ್ಗೆ 4:30 ಕ್ಕೆ ತನ್ನ ದಿನವನ್ನು ಪ್ರಾರಂಭಿಸುತ್ತಾಳೆ ಮತ್ತು ಜೆಪಿ ನಗರದ 7 ನೇ ಹಂತದಲ್ಲಿ ಕರಿ ದೋಸೆಗಳನ್ನು ಮಾರಾಟ ಮಾಡುತ್ತಾಳೆ.
"ಜೀವನದಲ್ಲಿ ಎಷ್ಟೇ ಕಷ್ಟ ಬಂದರೂ ಮೊದಲಿಗಿಂತ ಬಲಶಾಲಿಯಾಗಿರು" ಎಂಬ ವೀಣಾ ಮಂತ್ರ. ಸವಾಲಿನ ಸಮಯದಲ್ಲಿ ಅವಳಿಗೆ ಸಹಾಯ ಮಾಡಿದೆ ಮತ್ತು ಅವಳ ಪ್ರಯಾಣವು ನಿಜವಾಗಿಯೂ ಸ್ಪೂರ್ತಿದಾಯಕವಾಗಿದೆ. ಎಂದು ಬರೆದುಕೊಂಡಿದ್ದಾರೆ.
ಇನ್ನೂ ಲಕ್ಷ್ಮಣ್ ಅವರು ಈ ಪೋಸ್ಟ್ ಹಂಚಿಕೊಳ್ಳುತ್ತಿದ್ದ ಹಾಗೇ ಅನೇಕ ಪ್ರತಿಕ್ರಿಯಿಗಳು ಬಂದಿದೆ. ಕೆಲವರು ಈ ಪೋಸ್ಟ್ ನೋಡಿ ಸ್ಟಾಲ್‌ಗೆ ಭೇಟಿ ನೀಡುವ ಬಗ್ಗೆ ಹೇಳಿಕೊಂಡಿದ್ದಾರೆ.