Publish Date: Sat, 29 Dec 2018 (09:26 IST)
Updated Date: Sat, 29 Dec 2018 (09:29 IST)
ಮೆಲ್ಬೋರ್ನ್: ಆಸ್ಟ್ರೇಲಿಯಾ ತಂಡದಲ್ಲಿ ಈಗ ಪುಟಾಣಿ ಸದಸ್ಯನೊಬ್ಬನಿದ್ದಾನೆ. ಆತನಿಗೆ ಇರುವ ಒಂದೇ ಒಂದು ಆಸೆ ಎಂದರೆ ವಿರಾಟ್ ಕೊಹ್ಲಿಯನ್ನು ಔಟ್ ಮಾಡುವುದು.
ಆರ್ಚಿ ಶಿಲ್ಲಾರ್ ಎಂಬ ಬಾಲಕ ಹೃದ್ರೋಗಿ. ಈತ ಲೆಗ್ ಸ್ಪಿನ್ನರ್. ಈ ಪುಟ್ಟ ಬಾಲಕನಿಗೆ ಮಾನವೀಯತೆಯ ದೃಷ್ಟಿಯಿಂದ ಆಸ್ಟ್ರೇಲಿಯಾ ತಂಡದಲ್ಲಿ ಸ್ಥಾನ ನೀಡಲಾಗಿದೆ.
ಈ ಬಾಲಕನ ಬಳಿ ನಿನಗೆ ಯಾರ ವಿಕೆಟ್ ಕೀಳಬೇಕೆಂಬ ಆಸೆಯಿದೆ ಎಂದು ಕೇಳಿದ್ದಕ್ಕೆ ಆತ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹೆಸರು ಹೇಳಿದ್ದಾನೆ. ‘ವಿರಾಟ್ ಕೊಹ್ಲಿ ಯಾಕೆಂದರೆ ಅವರು ಜಗತ್ತಿನ ಶ್ರೇಷ್ಠ ಬ್ಯಾಟ್ಸ್ ಮನ್’ ಎಂದು ಶಿಲ್ಲಾರ್ ಹೇಳಿಕೊಂಡಿದ್ದಾನೆ. ಈಗಾಗಲೇ ತಂಡದ ಅಭ್ಯಾಸದ ವೇಳೆ ಶಿಲ್ಲಾರ್ ಬೌಲಿಂಗ್ ಮಾಡಿದ್ದಾನೆ. ಈಗ ಕೊಹ್ಲಿ ಈ ಹೃದ್ರೋಗಿ ಬಾಲಕನ ಆಸೆ ನೆರವೇರಿಸುತ್ತಾರಾ ಕಾದು ನೋಡಬೇಕು.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ