ನವದೆಹಲಿ: ಬಿಸಿಸಿಐಗೆ ಹೊಸ ಆಡಳಿತಾಧಿಕಾರಿಗಳನ್ನು ಸುಪ್ರೀಂ ಕೋರ್ಟ್ ನೇಮಿಸಿದೆ. ಹೀಗಾಗಿ ಇನ್ನು ಮುಂದೆ ಕ್ರಿಕೆಟ್ ಗೆ ಸಂಬಂಧಪಟ್ಟ ಯಾವುದೇ ಸಂಶಯಗಳಿದ್ದರೂ, ಅವರನ್ನೇ ಕೇಳಿ ಎಂದು ಪದಚ್ಯುತ ಕಾರ್ಯದರ್ಶಿ ಅಜಯ್ ಶಿರ್ಕೆ ಹೇಳಿದ್ದಾರೆ.
ನಿನ್ನೆಯಷ್ಟೇ ಸುಪ್ರೀಂ ಕೋರ್ಟ್ ವಿನೋದ್ ರಾಯ್ ನೇತೃತ್ವದ ನಾಲ್ವರು ಆಡಳಿತಾಧಿಕಾರಿಗಳನ್ನು ನೇಮಿಸಿತ್ತು. ಸುಪ್ರೀಂ ಕೋರ್ಟ್ ನಿರ್ಧಾರವನ್ನು ಸ್ವಾಗತಿಸಿರುವ ಶಿರ್ಕೆ ನ್ಯಾಯಾಲಯ ಅತೀ ಮುಖ್ಯ ಬದಲಾವಣೆ ಎಂದು ಬಣ್ಣಿಸಿದ್ದಾರೆ.
“ಈಗ ಸುಪ್ರೀಂ ಕೋರ್ಟ್ ಪ್ರಾಮುಖ್ಯವಾದ ಬದಲಾವಣೆ ಮಾಡಿದೆ. ಈ ಸಲಹಾ ವರದಿಗಳನ್ನು ನೀಡಿದವರೇ ಅದನ್ನು ಪಾಲಿಸುವವರು ಅಲ್ಲ ಎನ್ನುವುದು ಗಮನಾರ್ಹ. ವರದಿಗಳನ್ನು ಜಾರಿಗೊಳಿಸುವ ಕೆಲಸ ಆಡಳಿತಗಾರರದ್ದು ಎನ್ನುವುದನ್ನು ಗಮನಿಸಬೇಕು” ಎಂದು ಶಿರ್ಕೆ ಹೇಳಿದ್ದಾರೆ.
ಸದ್ಯ ಅಧಿಕಾರವಿಲ್ಲದೇ ಹಲ್ಲು ಕಿತ್ತ ಹಾವಿನಂತಾಗಿರುವ ಬಿಸಿಸಿಐ ಮಾಜಿ ದೊರೆಗಳು ಮತ್ತೆ ಅಧಿಕಾರಕ್ಕೆ ಬರಲು ದಾರಿ ಹುಡುಕುತ್ತಿದ್ದಾರೆ. ಹೀಗಾಗಿ ಸುಪ್ರೀಂ ಕೋರ್ಟ್ ತೀರ್ಪಿನಲ್ಲಿ ಹುಳುಕು ಹುಡುಕುವುದಂತೂ ಖಂಡಿತಾ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ