ಮುಂಬೈ: ಸದ್ಯಕ್ಕೆ ಟೀಂ ಇಂಡಿಯಾದಲ್ಲಿ ಯಶಸ್ವಿ ಬ್ಯಾಟ್ಸ್ ಮನ್ ಎಂದರೆ ಧೋನಿ ಮಾತ್ರ. ಬೇರೆ ಯಾರೂ ನಿಂತು ಆಡುತ್ತಿಲ್ಲ. ಹೀಗಾಗಿ ಧೋನಿಗೆ ಬ್ಯಾಟಿಂಗ್ ಕ್ರಮಾಂಕದಲ್ಲಿ ಪ್ರಮೋಷನ್ ಕೊಡಿಸಬೇಕು ಎಂದು ಮಾಜಿ ನಾಯಕ ಸೌರವ್ ಗಂಗೂಲಿ ಅಭಿಪ್ರಾಯಪಟ್ಟಿದ್ದಾರೆ.
ಸದ್ಯ ಟೀಂ ಇಂಡಿಯಾದ ಬ್ಯಾಟಿಂಗ್ ಸಂಪೂರ್ಣ ಹಳಿ ತಪ್ಪಿದೆ. ಬ್ಯಾಟಿಂಗ್ ಲೈನ್ ಅಪ್ ಕೊಂಚ ಬದಲಾವಣೆ ಮಾಡಿಕೊಳ್ಳಬೇಕು ಎಂಬುದು ಗಂಗೂಲಿ ಅಭಿಪ್ರಾಯ. ಬೆಂಗಳೂರಿನಲ್ಲಿ ಆಡುವಾಗ ಲೋಕಲ್ ಹುಡುಗ ಮನೀಶ್ ಪಾಂಡೆ ಮೂರನೇ ಕ್ರಮಾಂಕದಲ್ಲಿ ಆಡಬೇಕು. ಸುರೇಶ್ ರೈನಾಗೆ ಆರನೇ ಕ್ರಮಾಂಕ ನೀಡಬೇಕು. ಧೋನಿ ಕೊಂಚ ಮೇಲಿನ ಕ್ರಮಾಂಕದಲ್ಲಿ ಆಡಬೇಕು ಎಂದು ಗಂಗೂಲಿ ಹೇಳಿದ್ದಾರೆ.
ಧೋನಿ ನಾಯಕರಾಗಿದ್ದಾಗ ಜವಾಬ್ದಾರಿ ತೆಗೆದುಕೊಂಡು ಫಿನಿಶರ್ ಸ್ಥಾನ ತುಂಬಬೇಕಿತ್ತು. ಆದರೆ ಈಗ ಅವರು ನಾಯಕರಲ್ಲವಲ್ಲಾ? ಅವರಿಗೆ ತಮ್ಮ ನ್ಯಾಚುರಲ್ ಹೊಡೆತಗಳನ್ನು ಹೊಡೆಯಲು ಸಮಯಾವಕಾಶ ನೀಡಬೇಕು ಎಂಬುದು ಗಂಗೂಲಿ ಅಭಿಮತ. ಕೊಹ್ಲಿ ಈ ಪ್ರಯೋಗ ಮಾಡಬಹುದಾ? ನೋಡಬೇಕು.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ