Select Your Language

Notifications

webdunia
webdunia
webdunia
webdunia

ಜಿಂಬಾಬ್ವೆ ವಿರುದ್ಧ ಭಾರತ 3ನೇ ಏಕದಿನ: ಧೋನಿ ಬಳಗ ಕ್ಲೀನ್ ಸ್ವೀಪ್ ಸಾಧಿಸುತ್ತದೆಯೇ?

ಜಿಂಬಾಬ್ವೆ ವಿರುದ್ಧ ಭಾರತ 3ನೇ ಏಕದಿನ: ಧೋನಿ ಬಳಗ ಕ್ಲೀನ್ ಸ್ವೀಪ್ ಸಾಧಿಸುತ್ತದೆಯೇ?
ಹರಾರೆ , ಬುಧವಾರ, 15 ಜೂನ್ 2016 (10:51 IST)
ಭಾರತ ಮತ್ತು ಜಿಂಬಾಬ್ವೆ ನಡುವೆ ಬುಧವಾರದ ಏಕದಿನ ಪಂದ್ಯದಲ್ಲಿ ಜಯಗಳಿಸಿದರೆ, ಭಾರತಕ್ಕೆ  2013 ಮತ್ತು 2015ರ ಜಯದ ಬಳಿಕ ಮೂರನೇ ಸತತ ಕ್ಲೀನ್ ಸ್ವೀಪ್ ದಕ್ಕಲಿದೆ.  ಆತಿಥೇಯರ ವಿರುದ್ಧ ಎರಡು ಜಯಗಳ ಬಳಿಕ ಎರಡನೇ ಸಾಲಿನ ಭಾರತ ತಂಡಕ್ಕೆ ಸಹ ಜಿಂಬಾಬ್ವೆ ತಂಡ ಸರಿಯಾಟಿಯಾಗಿಲ್ಲವೆಂದು ಸಾಬೀತಾಗಿದ್ದು, 11 ಮಂದಿಯ ತಂಡದಲ್ಲಿ ಬದಲಾವಣೆಗಳನ್ನು ಮಾಡುವ ಇಂಗಿತವನ್ನು ಧೋನಿ ನೀಡಿದ್ದಾರೆ.

ಓಪನರ್ ಲೋಕೇಶ್ ರಾಹುಲ್ ಚೊಚ್ಚಲ ಏಕದಿನದಲ್ಲೇ ಸ್ಮರಣೀಯ ಶತಕ ಸ್ಕೋರ್ ಮಾಡಿದ್ದು, ಅಂಬಾಟಿ ರಾಯುಡು ಜತೆ ರಾಹುಲ್‌ಗೆ ವಿಶ್ರಾಂತಿ ನೀಡಿ ಉಳಿದ ಆಟಗಾರರಿಗೆ ಅವಕಾಶ ನೀಡುವ ಸಂಭವವಿದೆ. ಇವರಿಬ್ಬರು 165 ಮತ್ತು 164 ಬಹುಸಂಖ್ಯೆಯ ಎಸೆತಗಳನ್ನು ಮುಂಚಿನ ಪಂದ್ಯಗಳಲ್ಲಿ ಆಡಿದ್ದಾರೆ.

ಅವರಿಗೆ ವಿಶ್ರಾಂತಿ ನೀಡಿದರೆ, ಅಂತಾರಾಷ್ಟ್ರೀಯ ಪಂದ್ಯವಾಡಿರದ ಫೈಜ್ ಫಜಲ್ ಕರುಣ್ ನಾಯರ್ ಜತೆ ಪಂದ್ಯವನ್ನು ಆರಂಭಿಸಬಹುದು.
 
 
ರಾಯುಡು ಸ್ಥಾನವನ್ನು ಇನ್ನೊಬ್ಬರು ಅನ್‌ಕ್ಯಾಪ್ಡ್( ರಾಷ್ಟ್ರೀಯ ತಂಡಕ್ಕೆ ಹೊಸಬರು) ಬ್ಯಾಟ್ಸ್‌ಮನ್ ಮಂದೀಪ್ ಸಿಂಗ್ ಆಡಬಹುದು. ವೇಗದ ಬೌಲಿಂಗ್‌ನಲ್ಲಿ ಧೋನಿ ಬರೀಂದರ್ ಸ್ರಾನ್, ಧವಲ್ ಕುಲಕರ್ಣಿ ಅಥವಾ ಜಸ್‌ಪ್ರೀತ್ ಬುಮ್ರಾಗೆ ವಿಶ್ರಾಂತಿ ನೀಡಬಹುದು. ಮುಂಚಿನ ಆಟಗಳಲ್ಲಿ ಇವರೆಲ್ಲರೂ ತಮ್ಮ ಪಾತ್ರವನ್ನು ಉತ್ತಮವಾಗಿ ನಿರ್ವಹಿಸಿದ್ದಾರೆ.
 
 ಆಫ್ ಸ್ಪಿನ್ನರ್ ಜಯಂತ್ ಯಾದವ್ ಅವರಿಗೆ ಚೊಚ್ಚಲ ಪ್ರವೇಶ ನೀಡಿದರೆ ಚಹಲ್ ಅಥವಾ ಅಕ್ಸರ್ ಪಟೇಲ್ ಅವರು ವಿಶ್ರಾಂತಿ ಪಡೆಯುತ್ತಾರೆ.

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಫುಟ್ಬಾಲ್ ಅಭಿಮಾನಿಗಳಿಗೆ ನೆರವು: ಪಯಸ್ ರ‌್ಯಾಕೆಟ್‌ಗಳು, ಧೋನಿ ಕೈಗವಸು ಹರಾಜು