ಭಾರತದ ಟೆನ್ನಿಸ್ ತಾರೆ ಲಿಯಾಂಡರ್ ಪೇಸ್ ಅವರ ವಿಂಬಲ್ಡನ್ ಮಿಶ್ರ ಡಬಲ್ಸ್ ಗೆಲುವಿನ ರ‌್ಯಾಕೆಟ್‌ಗಳು ಮತ್ತು ಭಾರತದ ಕಿರು ಓವರುಗಳ ನಾಯಕ ಧೋನಿಯ ವಿಕೆಟ್ ಕೀಪಿಂಗ್ ಕೈಗವಸುಗಳು ಮತ್ತು ಪ್ಯಾಡ್‌ಗಳು ಕ್ರಮವಾಗಿ 1.5 ಲಕ್ಷ ಮತ್ತು 1 ಲಕ್ಷ ರೂ.ಗಳಿಗೆ ಹರಾಜಾಗಿವೆ. ಎಕ್ಸ್‌ಟ್ರಾ ಟೈಮ್ ಇನ್ ಸ್ಫೋರ್ಟ್ ವೆಬ್‌ಸೈಟ್ ಈ ದರ್ಮಾರ್ಥ ಕಾರ್ಯವನ್ನು ಆಯೋಜಿಸಿತ್ತು.
ಲಿವರ್ ಕ್ಯಾನ್ಸರ್‌ನಿಂದ ನರಳುತ್ತಿದ್ದ ಮೋಹನ್ ಬಾಗನ್ ಅಭಿಮಾನಿ ಬಾಪಿ ಮಾಜ್ಹಿಗೆ ನೆರವಾಗಲು ಮತ್ತು ಪೂರ್ವ ಬಂಗಾಳದ ಮೃತ ಬೆಂಬಲಿಗ ಅಲಿಪ್ ಚಕ್ರವರ್ತಿ ಕುಟುಂಬಕ್ಕೆ ನೆರವಾಗಲು ಈ ಹರಾಜು ಪ್ರಕ್ರಿಯೆಯನ್ನು ನಡೆಸಲಾಯಿತು.
ವೆಬ್‌ಸೈಟ್ ಬಿಡುಗಡೆಯಲ್ಲಿ ಒಟ್ಟು 14 ಲಕ್ಷ ರೂ.ಗಳನ್ನು ಸಂಗ್ರಹಿಸಲಾಗಿದ್ದು, ಮಾಜ್ಹಿ ಮತ್ತು ಚಕ್ರವರ್ತಿ ಕುಟುಂಬಗಳಿಗೆ ಹಸ್ತಾಂತರಿಸಲಾಗುತ್ತದೆ. ಲಿಯಾಂಡರ್ ಪೇಸ್ ರ‌್ಯಾಕೆಟ್‌ಗಳನ್ನು ಮಾಜಿ ಭಾರತದ ಆಟಗಾರ ಮತ್ತು ಬಂಗಾಳದ ನಾಯಕ ಮನೋಜ್ ತಿವಾರಿ ಖರೀದಿಸಿದರು. ಟೆನ್ನಿಸ್ ಆಟಗಾರ ಪೇಸ್ ತಮ್ಮ ಏಳನೇ ಸತತ ಒಲಿಂಪಿಕ್ಸ್‌ಗೆ ತೆರಳುತ್ತಿರುವುದು ಎಲ್ಲಾ ಕ್ರೀಡಾಪಟುಗಳಿಗೂ ಸ್ಫೂರ್ತಿ ನೀಡುತ್ತದೆ ಎಂದು ತಿವಾರಿ ಹೇಳಿದರು.
42ನೇ ವಯಸ್ಸಿನಲ್ಲೂ ಕೂಡ ಲಿಯಾಂಡರ್ ಗ್ರಾಂಡ್ ಸ್ಲಾಮ್‌ಗಳನ್ನು ಗೆಲ್ಲುತ್ತಿದ್ದಾರೆ. ಆಟದಲ್ಲಿ ಅವರ ಕಾರ್ಯನಿಷ್ಠೆ ಮತ್ತು ಶ್ರಮವು ಎಲ್ಲಾ ಕ್ರೀಡಾಪಟುಗಳಿಗೆ ಸ್ಫೂರ್ತಿದಾಯಕವಾಗಿದೆ ಎಂದು ಹೇಳಿದರು. ನಗರ ಮೂಲದ ಚಿತ್ರನಿರ್ಮಾಪ ಕ ನಮಿತ್ ಬಜೋರಿಯಾ ಫುಟ್ಬಾಲ್ ದಂತಕತೆ ಪೀಲೆ ಹಸ್ತಾಕ್ಷರದ ಫುಟ್ಬಾಲ್‌ಅನ್ನು 1.10 ಲಕ್ಷ ರೂ.ಗೆ ಖರೀದಿಸಿದರು.
ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ