ಜಿಂಬಾಬ್ವೆ ಮತ್ತು ಭಾರತ ನಡುವೆ ಹರಾರೆಯಲ್ಲಿ ನಡೆಯುತ್ತಿರುವ ಎರಡನೇ ಏಕ ದಿನ ಪಂದ್ಯದಲ್ಲಿ ಕೂಡ ಜಿಂಬಾಬ್ವೆ 116 ರನ್‌ಗೆ 8 ವಿಕೆಟ್ ಕಳೆದುಕೊಂಡು ತನ್ನ ಬ್ಯಾಟಿಂಗ್ ದೌರ್ಬಲ್ಯವನ್ನು ಮತ್ತೊಮ್ಮೆ ಪ್ರದರ್ಶಿಸಿದೆ. 28 ಓವರುಗಳನ್ನು ಆಡಿರುವ ಜಿಂಬಾಬ್ವೆ ಬ್ಯಾಟಿಂಗ್ ಕುಸಿತಕ್ಕೆ ಯಜುವೇಂದ್ರ ಚಹಲ್ ಕಾಣಿಕೆ ನೀಡಿದ್ದು, 3 ವಿಕೆಟ್ ಕಬಳಿಸಿದ್ದಾರೆ.
ಬರೀಂದರ್ ಸ್ರಾನ್ ಕೂಡ 2 ವಿಕೆಟ್ ಕಬಳಿಸಿದರು. ಕುಲಕರ್ಣಿ 2 ವಿಕೆಟ್ ಗಳಿಸಿದರು. ಅಬ್ಬರದ ಬ್ಯಾಟಿಂಗ್ ಪ್ರದರ್ಶನ ನೀಡುತ್ತಿದ್ದ ಸಿಬಾಂಡಾ(69 ಎಸೆತಗಳಲ್ಲಿ 53) ಅವರು ಚಹಲ್ ಬೌಲಿಂಗ್‌ನಲ್ಲಿ ಜಾಧವ್‌ಗೆ ಕ್ಯಾಚಿತ್ತು ಔಟಾದರು. ಚಿಗುಂಬುರಾ ಕೂಡ ಚಹಲ್ ಎಸೆತಕ್ಕೆ ಎಲ್‌ಬಿಗೆ ಬಲಿಯಾಗಿ ಶೂನ್ಯಕ್ಕೆ ಔಟಾದರು. ಭಾರತ ಈ ಪಂದ್ಯವನ್ನು ಜಯಸಿದರೆ 2-0ಯಿಂದ ಸರಣಿ ಜಯ ಸಾಧಿಸಿದಂತಾಗುತ್ತದೆ.
ಭಾರತದ ಹಿರಿಯ ಆಟಗಾರರ ವಿಶ್ರಾಂತಿಯಲ್ಲಿ ಹೊಸಬರನ್ನು ಆಡಿಸುತ್ತಿದ್ದು, ಜಿಂಬಾಬ್ವೆಗೆ ಈ ತಂಡವನ್ನು ಸೋಲಿಸುವುದು ಕೂಡ ಪ್ರಯಾಸವಾಗಿ ಕಂಡಿದೆ ಮತ್ತು ಜಿಂಬಾಬ್ವೆ ಗಳಿಸುತ್ತಿರುವ ಸ್ಕೋರು ಅದರ ಬ್ಯಾಟಿಂಗ್ ದೌರ್ಬಲ್ಯಕ್ಕೆ ಸಾಕ್ಷಿಯಾಗಿದೆ.
ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ