Select Your Language

Notifications

webdunia
webdunia
webdunia
webdunia

ಆಂಗ್ಲರಿಗೆ ಬೆಂಗಳೂರು ಪಂದ್ಯ ನೆನಪಿಸಿದ ಯಜುವೇಂದ್ರ ಚಾಹಲ್

ಆಂಗ್ಲರಿಗೆ ಬೆಂಗಳೂರು ಪಂದ್ಯ ನೆನಪಿಸಿದ ಯಜುವೇಂದ್ರ ಚಾಹಲ್
ಮ್ಯಾಂಚೆಸ್ಟರ್ , ಮಂಗಳವಾರ, 3 ಜುಲೈ 2018 (09:16 IST)
ಮ್ಯಾಂಚೆಸ್ಟರ್: ಆಂಗ್ಲರ ನಾಡಿನಲ್ಲಿ ಇಂದಿನಿಂದ ಆರಂಭವಾಗಲಿರುವ ಟಿ20 ಸರಣಿಗೆ ಮೊದಲು ಟೀಂ ಇಂಡಿಯಾ ಎದುರಾಳಿಗಳ ವಿರುದ್ಧ ಮಾನಸಿಕ ಯುದ್ಧ ಆರಂಭಿಸಿದೆ.

ಟೀಂ ಇಂಡಿಯಾ ಸ್ಪಿನ್ನರ್ ಯಜುವೇಂದ್ರ ಚಾಹಲ್ ಬೆಂಗಳೂರಿನಲ್ಲಿ ಕಳೆದ ವರ್ಷ ನಡೆದ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ 6 ವಿಕೆಟ್ ಕಿತ್ತ ಗಳಿಗೆಯನ್ನು ಸ್ಮರಿಸಿಕೊಂಡಿದ್ದು, ಅದೇ ಪ್ರದರ್ಶನವನ್ನು ಮತ್ತೆ ಕಾಯ್ದುಕೊಳ್ಳುವ ನಿರೀಕ್ಷೆಯಲ್ಲಿದ್ದಾರೆ.

‘ಆ ಪಂದ್ಯದ ವಿಡಿಯೋವನ್ನು ನಾನು ಈಗಲೂ ಆಗಾಗ ನೋಡುತ್ತಿರುತ್ತೇನೆ. ಅದನ್ನು ನೋಡುತ್ತಿದ್ದರೆ ನನ್ನ ವಿಶ್ವಾಸ ಹೆಚ್ಚುತ್ತದೆ. ನಾನು ಮತ್ತು ವಿರಾಟ್ ಈ ಸರಣಿಗೆ ಹೊಸ ಯೋಜನೆಯೊಂದನ್ನು ಸಿದ್ಧಪಡಿಸಿದ್ದೇವೆ. ಅದನ್ನು ಕಾರ್ಯರೂಪಕ್ಕೆ ತಂದು ಯಶಸ್ಸು ಪಡೆದೇ ತೀರುತ್ತೇವೆ’ ಎಂದು ಯಜುವೇಂದ್ರ ಚಾಹಲ್ ಹೇಳಿಕೊಂಡಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.             

Share this Story:

Follow Webdunia kannada

ಮುಂದಿನ ಸುದ್ದಿ

‘ವಾಲ್’ ರಾಹುಲ್ ದ್ರಾವಿಡ್ ಗೆ ಐಸಿಸಿ ಹಾಲ್ ಆಫ್ ಫೇಮ್ ಗೌರವ