Select Your Language

Notifications

webdunia
webdunia
webdunia
webdunia

ಶೇನ್ ವಾರ್ನ್ ಬಳಿಕ ಯಾಸಿರ್ ಶಾಹ್ ಶ್ರೇಷ್ಟ ಲೆಗ್ ಸ್ಪಿನ್ನರ್: ಬೆನ್ ಸ್ಟೋಕ್ಸ್

yasir shah
ಲಂಡನ್: , ಗುರುವಾರ, 21 ಜುಲೈ 2016 (13:54 IST)
ಪಾಕಿಸ್ತಾನದ ಯಾಸಿರ್ ಶಾಹ್ ಶೇನ್ ವಾರ್ನ್ ಬಳಿಕ ಶ್ರೇಷ್ಟ ಲೆಗ್ ಸ್ಪಿನ್ನರ್ ಆಗಿದ್ದಾರೆಂದು ಇಂಗ್ಲೆಂಡ್ ಆಲ್‌ರೌಂಡರ್ ಬೆನ್ ಸ್ಟೋಕ್ಸ್ ಅಭಿಪ್ರಾಯಪಟ್ಟಿದ್ದಾರೆ. ಇಂಗ್ಲೆಂಡ್ ವಿರುದ್ಧ ಲಾರ್ಡ್ಸ್ ಟೆಸ್ಟ್‌ನಲ್ಲಿ ಯಾಸಿರ್ 141ಕ್ಕೆ 10 ವಿಕೆಟ್ ಕಬಳಿಸಿ ಇಂಗ್ಲೆಂಡ್ ತಂಡ 75 ರನ್‌ಗಳಿಂದ ಸೋಲುವುದಕ್ಕೆ ನೆರವಾಗಿದ್ದರು. ಬೆನ್ ಸ್ಟೋಕ್ಸ್ ಗಾಯದ ಕಾರಣದಿಂದ ಮೊದಲ ಪಂದ್ಯದಲ್ಲಿ ಆಡಿರಲಿಲ್ಲ.  ಸ್ಟೋಕ್ಸ್ ಮತ್ತು ಆಂಡರ್‌ಸನ್ ಪಂದ್ಯ ಮಿಸ್ ಮಾಡಿಕೊಂಡರೂ ಶುಕ್ರವಾರದ ಎರಡನೇ ಟೆಸ್ಟ್‌ಗೆ ಹಿಂದಿರುಗಲಿದ್ದಾರೆ.
 
ಪಾಕಿಸ್ತಾನ ಉತ್ತಮ ತಂಡವಾಗಿದ್ದು, ಯಾಸಿರ್ ಹೇಗೆ ಬೌಲಿಂಗ್ ಮಾಡುತ್ತಾರೆಂದು ತಿಳಿದು ನಾವು ಮುಂದಿನ ಟೆಸ್ಟ್ ಪಂದ್ಯಕ್ಕೆ ಹೋಗುವುದರಿಂದ ಅವರ ಬೌಲಿಂಗ್‌ಗೆ ಪ್ರತಿದಾಳಿ ಮಾಡಲು ಸಮರ್ಥರಿದ್ದೇವೆ ಎಂದು ಸ್ಟೋಕ್ಸ್ ಹೇಳಿದರು. 
 
ಯಾಸಿರ್ 13 ಟೆಸ್ಟ್‌ ಪಂದ್ಯಗಳಲ್ಲಿ 86 ವಿಕೆಟ್ ಕಬಳಿಸಿದ್ದು, ಟೆಸ್ಟ್ ಬೌಲಿಂಗ್ ಶ್ರೇಯಾಂಕದಲ್ಲಿ ಟಾಪ್ ಸ್ಥಾನಕ್ಕೆ ಮುಟ್ಟಿದ್ದಾರೆ. 11 ವರ್ಷಗಳ ಹಿಂದೆ ವಾರ್ನ್ ಟಾಪ್ ಸ್ಥಾನಕ್ಕೆ ಮುಟ್ಟಿದ ಮೇಲೆ ಯಾಸಿರ್ ಟಾಪ್ ಸ್ಥಾನ ತಲುಪಿದ ಮೊದಲ ಲೆಗ್‌ಸ್ಪಿನ್ನರ್.

 ಆಸ್ಟ್ರೇಲಿಯಾದ ವಾರ್ನ್ 2007ರಲ್ಲಿ ಟೆಸ್ಟ್ ಕ್ರಿಕೆಟ್‌ನಿಂದ ನಿವೃತ್ತಿಯಾಗಿದ್ದು ಟೆಸ್ಟ್ ವಿಕೆಟ್ ಕಬಳಿಕೆದಾರರಲ್ಲಿ ಸರ್ವಕಾಲಿಕ ಶ್ರೇಷ್ಟ ಪಟ್ಟಿಯಲ್ಲಿದ್ದು, ಮುತ್ತಯ್ಯ ಮುರಳೀಧರನ್ ನಂತರ ಎರಡನೆಯವರಾಗಿದ್ದಾರೆ. ಅವರು 145 ಪಂದ್ಯಗಳಿಂದ 25.41 ಸರಾಸರಿಯಲ್ಲಿ 708 ವಿಕೆಟ್ ಕಬಳಿಸಿದ್ದರು. 

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ
 

Share this Story:

Follow Webdunia kannada

ಮುಂದಿನ ಸುದ್ದಿ

ಪಾಕ್‌ನಿಂದ ಸ್ಪಿನ್ ಸಮಸ್ಯೆ : ಸಕ್ಲೇನ್ ಮುಷ್ತಾಕ್ ಸಹಾಯ ಯಾಚಿಸಿದ ಇಂಗ್ಲೆಂಡ್